– ನಾನು ಸತ್ಯವನ್ನೇ ಹೇಳುತ್ತೇನೆ.. ಮಾಫಿ ಸಾಕ್ಷಿಯಾಗಿ ಪರಿಗಣಿಸಿ ಅಂತ ಆರೋಪಿ ಅರ್ಜಿ
– ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಜಡ್ಜ್ ಮುಂದೆ ಹಾಜರಾಗಲಿರೋ ಪ್ರದೋಷ್
ಬೆಂಗಳೂರು: ರೇಣುಕಾಸ್ವಾಮಿ (Renukaswamy Case) ಕೊಲೆ ಕೇಸ್‌ನಲ್ಲಿ ಆರೋಪಿ ದರ್ಶನ್‌ಗೆ (Darshan) ಅತಿದೊಡ್ಡ ಸಂಕಷ್ಟ ಎದುರಾಗಿದೆ. ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಎ-14 ಪ್ರದೋಷ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ.
ನಾನು ಸತ್ಯವನ್ನೇ ಹೇಳುತ್ತೇನೆ.. ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಆರೋಪಿ ಪ್ರದೋಷ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ಇಂದು ಮಧ್ಯಾಹ್ನ 12 ಗಂಟೆಗೆ ನ್ಯಾಯಾಧೀಶರ ಮುಂದೆ ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಯನ್ನು ವಿಚಾರಣೆಗೆ ಹಾಜರುಪಡಿಸಲಾಗುವುದು. ಇದನ್ನೂ ಓದಿ: ಜೈಲಲ್ಲಿರೋ ದರ್ಶನ್ ಭೇಟಿಯಾದ ರಕ್ಷಿತಾ, ವಿಜಯಲಕ್ಷ್ಮಿ
ನ್ಯಾಯಾಧೀಶರ ಮುಂದೆ ಹಾಜರಾಗಿ ಪ್ರಕರಣದಲ್ಲಿ ಘಟನಾವಳಿಗಳ ಬಗ್ಗೆ ಆರೋಪಿ ಹೇಳಲಿದ್ದಾನೆ. ಈ ಹಿಂದೆ ವಿನಯ್ ಕುಲಕರ್ಣಿ ಪ್ರಕರಣದಲ್ಲಿ ಬಸವರಾಜ್ ಮುತ್ತಗಿ ಮಾಫಿ ಸಾಕ್ಷಿಯಾಗಿದ್ದ. ಹೀಗಾಗಿ, ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಆಗಿತ್ತು. ಈಗ ದರ್ಶನ್ ಪ್ರಕರಣದಲ್ಲಿ ಪ್ರದೋಷ್ ಮಾಫಿ ಸಾಕ್ಷಿಯಾಗಿದ್ದಾನೆ.
ಪ್ರಕರಣದಲ್ಲಿ ಪ್ರದೋಷ್ ಪಾತ್ರ ಏನು?
ಸ್ಟೋನಿ ಬ್ರೂಕ್‌ನಿಂದ ಬಂದ ದರ್ಶನ್ ಜೊತೆ ಪ್ರದೋಷ್ ಶೆಡ್‌ಗೆ ಹೋಗಿದ್ದ. ಹಲ್ಲೆ ಮಾಡುವಾಗ ಸ್ಥಳದಲ್ಲಿಯೇ ಆರೋಪಿ ಇದ್ದ. ರೇಣುಕಾಸ್ವಾಮಿಯು ʼಹೊಡೆಯೋದು ಸಾಕು ನಿಲ್ಲಿಸಿ ಸತ್ತು ಹೋಗ್ತಾನೆ ಎಂದಿದ್ದʼ( ಪೊಲೀಸರ ಹೇಳಿಕೆಯಲ್ಲಿ ಇದೆ). ಶವ ಸಾಗಿಸುವ ಸಲುವಾಗಿ ಸಬ್ ಇನ್ಸ್ಪೆಕ್ಟರ್‌ಗೆ ಪ್ರದೋಷ್ ಫೋನ್ ಮಾಡಿದ್ದ. ಬಳಿಕ ಶವ ಸಾಗಾಟದ ತನಕವೂ ದರ್ಶನ್ ಜೊತೆಯಲ್ಲಿಯೇ ಪ್ರದೋಷ್ ಇದ್ದ. ಇದನ್ನೂ ಓದಿ: ದರ್ಶನ್‌ಗೆ ಸುಪ್ರೀಂ ಕೋರ್ಟ್ ಮತ್ತೆ ಶಾಕ್ – ʻದಾಸʼನಿಗೆ 1 ವರ್ಷ ಜೈಲೇ ಗತಿ
