ನವದೆಹಲಿ: ಜಾಮೀನು ನಿರೀಕ್ಷೆಯಲ್ಲಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಪ್ರಮುಖ ಆರೋಪಿ ನಟ ದರ್ಶನ್ (Darshan)ಗೆ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ಹಿನ್ನಡೆಯಾಗಿದೆ. ಇದರಿಂದ ʻದಾಸʼ ಇನ್ನೂ ಒಂದು ವರ್ಷ ಜೈಲಿನಲ್ಲೇ ಕಾಲ ಕಳೆಯುವುದು ಅನಿವಾರ್ಯವಾಗಿದೆ.
ಹೌದು. 1 ವರ್ಷದ ವರೆಗೆ ಜಾಮೀನು (Court Bail) ಕೋರಿ ಅರ್ಜಿ ಸಲ್ಲಿಸದಂತೆ ಸೂಚಿಸಿದ್ದ ಸುಪ್ರೀಂ ಆದೇಶ ತಿದ್ದುಪಡಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಖುದ್ದು ಸುಪ್ರೀಂ ಕೋರ್ಟ್‌ನ ರಿಜಿಸ್ಟರ್ ಅವರೇ ಅರ್ಜಿಯನ್ನ ತಿರಸ್ಕರಿಸಿದ್ದಾರೆ. ಇದನ್ನೂ ಓದಿ: ದರ್ಶನ್‌ಗೆ ಭಾರೀ ಹಿನ್ನಡೆ| ಇನ್ನೂ 1 ವರ್ಷ ಜೈಲು ಫಿಕ್ಸ್ – ಕೋರ್ಟ್ ಆದೇಶದಲ್ಲಿ ಏನಿದೆ?
ತುರ್ತು ಪರಿಸ್ಥಿತಿಗಳಲ್ಲಿ ಜಾಮೀನು ಕೋರಲು ಅವಕಾಶ ನೀಡುವಂತೆ ಕೊಲೆ ಆರೋಪಿ ದರ್ಶನ್ ಮನವಿ ಮಾಡಿದ್ದರು. ಆದ್ರೆ ಇದು ಅರ್ಹವಲ್ಲದ ಅರ್ಜಿ, ವಿಚಾರಣೆಗೆ ಪಟ್ಟಿ ಮಾಡಲು ಸಾಧ್ಯವಿಲ್ಲ ಎಂದು ವಕೀಲರಿಗೆ ಮಾಹಿತಿ ನೀಡಿ ಅರ್ಜಿ ತಿರಸ್ಕರಿಸಲಾಗಿದೆ.

ಪರ್ದಿವಾಲಾ ಪೀಠ ಹೇಳಿದ್ದೇನು?
ಕಳೆದ ಮೇ 15 ರಂದು ನ್ಯಾ. ಪರ್ದಿವಾಲಾ ಮತ್ತು ನ್ಯಾ. ವಿಜಯ್ ಬಿಷ್ನೋಯಿ ಅವರ ಪೀಠದಲ್ಲಿ ದರ್ಶನ್ ಸಲ್ಲಿಸಿದ ಜಾಮೀನು (Bail) ಅರ್ಜಿಯ ವಿಚಾರಣೆ ನಡೆದಿತ್ತು. ಇದನ್ನೂ ಓದಿ: ಸುಪ್ರೀಂ ನಲ್ಲಿ ಬೇಲ್ ಸಿಗದೇ ಮೌನಕ್ಕೆ ಜಾರಿದ ʻಗಜʼ – ವಿಜಯಲಕ್ಷ್ಮಿ ದರ್ಶನ್ ʻಹಾರ್ಟ್ ಬ್ರೇಕ್ʼ!
ವಿಚಾರಣೆ ವೇಳೆ ದರ್ಶನ್ ಪರ ವಕೀಲರು, ʻಜೈಲಿನಲ್ಲಿ ದರ್ಶನ್ ಅವರನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದ್ದು, ಯಾರೊಂದಿಗೂ ಮಾತನಾಡಲು ಅವಕಾಶ ನೀಡುತ್ತಿಲ್ಲ. ಕುಟುಂಬ ಸದಸ್ಯರನ್ನ ಭೇಟಿ ಮಾಡಲು ಕೇವಲ ಗ್ಲಾಸ್ ತಡೆಗೋಡೆ ಮೂಲಕ ಅವಕಾಶ ನೀಡಲಾಗುತ್ತಿದೆ. 9 ತಿಂಗಳಿನಿಂದ ಜೈಲಿನಲ್ಲಿದ್ದಾರೆʼ ಎಂದು ವಾದ ಮಂಡಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ನ್ಯಾಯಾಧೀಶರು, ʻಕ್ವಾರಂಟೈನ್ ಸೆಲ್ ಕೂಡ ಜೈಲಿನ ಒಂದು ಭಾಗವೇ ಆಗಿದೆ. ಸ್ಪೆಷಲ್ ಟ್ರೀಟ್‌ಮೆಂಟ್ ಸಿಗಬಾರದು ಎಂಬ ಉದ್ದೇಶದಿಂದ ಅಲ್ಲಿ ಇರಿಸಿರಬಹುದು. ಜೈಲು ಮ್ಯಾನ್ಯುಯಲ್ ಪ್ರಕಾರ ಅಗತ್ಯ ಸೌಲಭ್ಯಗಳನ್ನು ನೀಡಲು ಸೂಚಿಸುತ್ತೇವೆ ಎಂದು ಹೇಳಿದ್ದರು.
ಒಂದು ವರ್ಷದೊಳಗೆ ವಿಚಾರಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸೂಚಿಸಿದ್ದ ಕೋರ್ಟ್ (Supreme Court) ಅಲ್ಲಿಯವರೆಗೆ ಜಾಮೀನು ನೀಡಲು ನಿರಾಕರಿಸಿತು. ಈ ಆದೇಶದ ಅನ್ವಯ ಮುಂದಿನ ವರ್ಷ ಮೇ 15ರ ವರೆಗೆ ದರ್ಶನ್‌ಗೆ ಜೈಲಿನಲ್ಲಿರುವುದು ಅನಿವಾರ್ಯವಾಗಿದೆ.
