ಬಳ್ಳಾರಿ: ಸಿನಿಮೀಯ ರೀತಿಯಲ್ಲಿ ನಡೆದ ತ್ರಿಕೋನ ಪ್ರೇಮ ಪ್ರಕರಣದಲ್ಲಿ ಯುವತಿಯೊಬ್ಬರು ಹಳೆ ಲವರ್ ಕಾಟಕ್ಕೆ ಬೇಸತ್ತು ವಿಡಿಯೋ ಮಾಡಿ ಸೂಸೈಡ್ ಮಾಡಿಕೊಂಡಿರುವ ಘಟನೆ ಬಳ್ಳಾರಿ ನಗರದ ಕೌಲ್ ಬಜಾರ್‌ನಲ್ಲಿ ನಡೆದಿದೆ.
ಕೌಲ್ ಬಜಾರ್ ಏರಿಯಾದ ಫಿರ್ದೋಸ್ ಸೂಸೈಡ್ ಮಾಡಿಕೊಂಡಿರುವ ದುರ್ದೈವಿ. ಬೆಂಗಳೂರು ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಬೆಂಗಳೂರು-ಮಂಗಳೂರು ವಂದೇಭಾರತ್| ಸಕಲೇಶಪುರ ಘಾಟ್ ಮಾರ್ಗದಲ್ಲಿ ಆ.11ರಿಂದ ಪ್ರಾಯೋಗಿಕ ಸಂಚಾರ
ಮೃತ ಯುವತಿ ಫಿರ್ದೋಸ್ ಕೌಲಬಜಾರ್ ಏರಿಯಾದ ಅಜೀಂನನ್ನು ಪ್ರೀತಿಸುತಿದ್ದರು. ಆದರೆ ಅಜೀಂ ಪ್ರೀತಿಯ ಹೆಸರಲ್ಲಿ ತಲೆ ಕೆಡಿಸಿ ಅವಳನ್ನು ದುರುಪಯೋಗಪಡಿಸಿಕೊಂಡಿದ್ದ ಎನ್ನಲಾಗಿದೆ. ಕೆಲ ದಿನಗಳ ಬಳಿಕ ಅಜೀಂನ ವರ್ತನೆಯಿಂದ ಬೇಸರಗೊಂಡಿದ್ದ ಯುವತಿ ಆತನಿಂದ ದೂರ ಇದ್ದಳಂತೆ. ಅದಾದ ಬಳಿಕ ಯುವತಿ ಅಜೀಂ ಸ್ನೇಹಿತ ಸೋಹೈಲ್‌ನನ್ನು ಪ್ರೀತಿಸಲು ಶುರು ಮಾಡಿದ್ದಳು. ಅಲ್ಲದೇ ಮದುವೆ ಮಾಡಿಕೊಳ್ಳಲು ಮುಂದಾಗಿದ್ದರು. ಈ ಮದುವೆ ವಿಚಾರ ಗೊತ್ತಾಗ್ತಿದ್ದಂತೆಯೇ ತನ್ನ ಜೊತೆ ಇರುವ ಖಾಸಗಿ ಪೋಟೋ ವೈರಲ್ ಮಾಡುವುದಾಗಿ ಹಳೆ ಲವರ್ ಅಜೀಂ ಬೆದರಿಕೆ ಹಾಕಿದ್ದಾನೆ. ದಿಕ್ಕು ತೋಚದಂತಾಗಿ ಯುವತಿ ಲೈವ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ವಿಡಿಯೋದಲ್ಲಿ ಆತ್ಮಹತ್ಯೆಗೆ ಕಾರಣವಾದವರಿಗೆ ಶಿಕ್ಷೆಯಾಗಲಿ ಎಂದು ಹೇಳಿಕೊಂಡಿದ್ದಾರೆ. ಯುವತಿ ಫಿರ್ದೋಸ್ ಸೂಸೈಡ್ ಮಾಡಿಕೊಳ್ಳುವ ಮುನ್ನ ಹೊಸ ಲವರ್ ಸೊಹೈಲ್‌ಗೆ ಕರೆ ಮಾಡಿ, ಅಜೀಂ ಜೊತೆಗೆ ನಡೆದಿದ್ದ ಘಟನೆ ಬಗ್ಗೆ ವಿವರಣೆ ನೀಡಿದ್ದರು ಎನ್ನಲಾಗಿದೆ.
ಸದ್ಯ ಯುವತಿ ಸಾವಿಗೆ ನ್ಯಾಯ ಒದಗಿಸಿ ಎಂದು ಕುಟುಂಬಸ್ಥರು ಕೌಲಬಜಾರ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ. ಇದೀಗ ಇಬ್ಬರು ಲವರ್‌ಗಳು ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.ಇದನ್ನೂ ಓದಿ: ವಿದೇಶಿ ಕೊಡುಗೆ ನಿಯಂತ್ರಣ ತಿದ್ದುಪಡಿ ಮಸೂದೆಗೆ ತೀವ್ರ ವಿರೋಧ
