ಮಡಿಕೇರಿ: ನಾಡಹಬ್ಬ ಮೈಸೂರು ದಸರಾ ಸೇರಿದಂತೆ ರಾಜ್ಯದ ವಿವಿಧೆಡೆ ದಸರಾ ಆಚರಣೆಗೆ ಸಿದ್ಧತೆಗಳು ನಡೆಯುತ್ತಿವೆ. ಈ ನಡುವೆ ಮಡಿಕೇರಿ ದಸರಾ (Madikeri Dasara) ದಿನಾಂಕದ ವಿಚಾರವಾಗಿ ಉಂಟಾಗಿದ್ದ ಗೊಂದಲಕ್ಕೂ ತೆರೆ ಬಿದ್ದಿದೆ. ಅಕ್ಟೋಬರ್ 20ರಂದು ಆಯುಧ ಪೂಜೆ ಹಾಗೂ ಅಕ್ಟೋಬರ್ 21ರಂದು ವಿಜಯದಶಮಿ, ದಸರಾ ಶೋಭಾಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ.
ಮಂಜಿನ ನಗರಿ ಮಡಿಕೇರಿಯಲ್ಲಿ ನಾಡಹಬ್ಬ ದಸರಾ ಸಂಭ್ರಮಕ್ಕೆ ಸಿದ್ಧತೆಗಳು ಆರಂಭವಾಗಿವೆ. ಈ ಬಾರಿ ದಸರಾ ದಿನಾಂಕದ ವಿಚಾರವಾಗಿ ಉಂಟಾಗಿದ್ದ ಗೊಂದಲಕ್ಕೆ ಇದೀಗ ಕಡೆಗೂ ತೆರೆ ಬಿದ್ದಿದೆ. ಮೈಸೂರು ದಸರಾವನ್ನು ಕೇಂದ್ರವಾಗಿಟ್ಟುಕೊಂಡು ಕೊಡಗು ಸೇರಿದಂತೆ ಹಲವು ಭಾಗಗಳಲ್ಲಿ ದಸರಾ ಆಚರಣೆ ನಡೆಯುತ್ತಾ ಬಂದಿದೆ. ಮೈಸೂರು ದಸರಾ ಅಕ್ಟೋಬರ್ 21ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಮಡಿಕೇರಿಯಲ್ಲೂ ಅಕ್ಟೋಬರ್ 21ರಂದೇ ದಸರಾ ಆಚರಿಸಲು ತೀರ್ಮಾನಿಸಲಾಗಿದೆ. ಮಡಿಕೇರಿ ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ದಸರ ಸಮಿತಿಯ ಸಭೆಯಲ್ಲಿ ನಾಲ್ಕು ಶಕ್ತಿ ದೇವತೆಗಳ ಕರಗ ಸೇವೆಗೆ ಸಂಬಂಧಿಸಿದವರು, ಅರ್ಚಕರು ಹಾಗೂ ಹಿರಿಯರು ಭಾಗವಹಿಸಿ ದಸರಾ ಹಾಗೂ ಕರಗದ ದಿನಾಂಕದ ಕುರಿತು ಚರ್ಚೆ ನಡೆಸಿದ್ದಾರೆ. ಇದನ್ನೂ ಓದಿ: ಸತತ 3 ದಿನ ಬ್ಯಾಂಕ್ ಮುಷ್ಕರ – ಗ್ರಾಹಕರ ಅನುಕೂಲಕ್ಕಾಗಿ ಭಾನುವಾರ ಬ್ಯಾಂಕ್ ಓಪನ್
ಅಕ್ಟೋಬರ್ 20ರಂದು ಆಯುಧ ಪೂಜೆ ಹಾಗೂ ಅಕ್ಟೋಬರ್ 21ರಂದು ವಿಜಯದಶಮಿ ಮತ್ತು ದಸರಾ ಶೋಭಾಯಾತ್ರೆ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಕರಗವು ತನ್ನ ಸಾಂಪ್ರದಾಯಿಕ ಆಚರಣೆಯಂತೆ ನಗರ ಪ್ರದಕ್ಷಿಣೆ ನಡೆಸಿ, ದಸರಾ ದಿನದಂದು ಶೋಭಾಯಾತ್ರೆಯಲ್ಲಿ ಭಾಗವಹಿಸಿ ಅಕ್ಟೋಬರ್ 22ರಂದು ಬನ್ನಿ ಕಡಿಯುವ ನಿರ್ಧಾರಕ್ಕೆ ಬರಲಾಗಿದೆ. ಇದನ್ನೂ ಓದಿ: ನಟ ಅನಂತ್ ನಾಗ್ಗೆ ವಿಧಾನ ಪರಿಷತ್ನಲ್ಲಿ ಗೌರವ ಸಲ್ಲಿಕೆ
ಇನ್ನು ಮಡಿಕೇರಿ ದಸರಾ ದಿನಾಂಕ ನಿಗದಿ ವಿಚಾರದಲ್ಲಿ ಹಿಂದಿನಿಂದಲೂ ಜಾರಿಯಲ್ಲಿರುವ ಸಂಪ್ರದಾಯ ಹಾಗೂ ಆಚರಣೆಗಳನ್ನು ಪರಿಗಣಿಸಲಾಗಿದೆ. ಅಧಿಕ ಮಾಸ ಸೇರಿದಂತೆ ಪಂಚಾಂಗದ ಬದಲಾವಣೆಗಳಿಂದ ಕೆಲ ಸಂದರ್ಭಗಳಲ್ಲಿ ದಸರಾ ದಿನಾಂಕದಲ್ಲಿ ವ್ಯತ್ಯಾಸ ಕಂಡುಬಂದರೂ, ಧಾರ್ಮಿಕ ಆಚರಣೆಗಳು ಹಾಗೂ ಪರಂಪರೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹಿರಿಯರು ತಿಳಿಸಿದ್ದಾರೆ. ಕರಗ ಆಚರಣೆಯೂ ದಸರಾ ಸಂಪ್ರದಾಯದ ಪ್ರಮುಖ ಭಾಗವಾಗಿದ್ದು, ಕರಗ ಹೊರಡುವ ಸಮಯ, ನಗರ ಪ್ರದಕ್ಷಿಣೆ ಹಾಗೂ ದಸರಾ ಶೋಭಾಯಾತ್ರೆಯ ದಿನಾಂಕಗಳನ್ನು ಪರಸ್ಪರ ಹೊಂದಾಣಿಕೆಯಿಂದ ನಿಗದಿಪಡಿಸಲಾಗುತ್ತದೆ. ಇದನ್ನೂ ಓದಿ: ಹಿರಿಯ ನಟ ಅನಂತ್ ನಾಗ್ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ – ಸದನದಲ್ಲಿ ಪರಮೇಶ್ವರ್ ಅಭಿನಂದನೆ
ಕಂಚಿಕಾಮಾಕ್ಷಿ ದೇವಾಲಯದಲ್ಲಿ ಶುದ್ಧ ಪೂಜಾ ಪದ್ಧತಿಗೆ ಆದ್ಯತೆ ನೀಡಲಾಗುತ್ತಿದ್ದು, ದೇವಾಲಯದ ಧಾರ್ಮಿಕ ಆಚರಣೆಗಳು ಸಂಪ್ರದಾಯಬದ್ಧವಾಗಿ ನಡೆಯುತ್ತವೆ ಎಂದು ತಿಳಿಸಲಾಗಿದೆ. ದಸರಾ ಎನ್ನುವುದು ಕೇವಲ ಒಂದು ದಿನದ ಕಾರ್ಯಕ್ರಮವಲ್ಲ. ರಾಜರ ಕಾಲದಿಂದ ನಡೆದುಕೊಂಡು ಬಂದಿರುವ ಪರಂಪರೆ, ಧಾರ್ಮಿಕ ಆಚರಣೆ ಮತ್ತು ನಾಡಿನ ಜನರ ನಂಬಿಕೆಯೊಂದಿಗೆ ಬೆಸೆದುಕೊಂಡಿರುವ ನಾಡಹಬ್ಬವಾಗಿದೆ. ಹೀಗಾಗಿ ಎಲ್ಲರ ಸಹಕಾರದೊಂದಿಗೆ ಯಾವುದೇ ಗೊಂದಲವಿಲ್ಲದೆ ದಸರಾ ಆಚರಣೆ ನಡೆಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಇದನ್ನೂ ಓದಿ: ನೀವು ಮಾಡಿರೋದು ದೇಶದ್ರೋಹ; ಟೈಂ ಬರುತ್ತೆ, ನಿಮ್ಮನ್ನ ಹಿಡಿಯುತ್ತೇವೆ – ರಾಹುಲ್ ಗಾಂಧಿ ಎಚ್ಚರಿಕೆ
ಒಟ್ಟಿನಲ್ಲಿ ಮಡಿಕೇರಿ ದಸರಾ ದಿನಾಂಕದ ವಿಚಾರವಾಗಿ ಉಂಟಾಗಿದ್ದ ಗೊಂದಲಕ್ಕೆ ಇದೀಗ ತೆರೆ ಬಿದ್ದಿದ್ದು, ಅಕ್ಟೋಬರ್ 20ರಂದು ಆಯುಧ ಪೂಜೆ ಹಾಗೂ ಅಕ್ಟೋಬರ್ 21ರಂದು ವಿಜಯದಶಮಿ, ದಸರಾ ಶೋಭಾಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ. ನಾಡಿನ ಜನರಿಗೆ ಆರೋಗ್ಯ, ಸಮೃದ್ಧಿ ಹಾಗೂ ಒಳಿತಾಗಲಿ ಎಂಬ ಆಶಯದೊಂದಿಗೆ ದಸರಾ ಆಚರಣೆಗೆ ಸಿದ್ಧತೆಗಳು ನಡೆಯುತ್ತಿವೆ. ಇದನ್ನೂ ಓದಿ: ಬಾಲಕಿ ಮೇಲೆ ಗ್ಯಾಂಗ್ರೇಪ್; ಪಾರ್ಕ್ ಹತ್ತಿರದ ಮಹಿಳಾ ಕಾಲೇಜು ಬಂದ್ ಮಾಡಿ ಆನ್ಲೈನ್ ಕ್ಲಾಸ್

