Connect with us

Bengaluru Rural

ಯುವಕರ ಜಾಲಿ ರೈಡ್- ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಪಿಎಸ್‍ಐ ವಾರ್ನಿಂಗ್

Published

on

– 80 ಬೈಕ್‍ಗಳಿಗೆ ದಂಡ ಸಹಿತ ವಾರ್ನ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ತಾಂಡವವಾಡುತ್ತಿದ್ದರೂ ಯುವಕರು ಬೆಳ್ಳಂಬೆಳಗ್ಗೆ ಜಾಲಿ ರೈಡ್ ಮಾಡಿದ್ದು, ಪೊಲೀಸರು ಸಿನಿಮೀಯ ರೀತಿಯಲ್ಲಿ ಚೇಸಿಂಗ್ ಮಾಡಿ ಯುವಕರಿಗೆ ವಾರ್ನಿಂಗ್ ನೀಡಿದ್ದಾರೆ.

ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಸೋಲೂರು ಬಳಿ ಈ ಘಟನೆ ನಡೆದಿದೆ. ಬೆಳ್ಳಂಬೆಳಗ್ಗೆ ಸಿನಿಮೀಯ ರೀತಿಯಲ್ಲಿ ಚೇಸಿಂಗ್ ಮಾಡಿದ ಪೊಲೀಸರು ರೇಸ್ ಮಾಡುತ್ತಿದ್ದ ಬೈಕ್ ಸವಾರರಿಗೆ ಫೈನ್ ಹಾಕಿ ವಾರ್ನಿಂಗ್ ನೀಡಿದ್ದಾರೆ.

ಯುವಕರು ಕುಣಿಗಲ್ ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಐಶಾರಾಮಿ ಬೈಕ್‍ಗಳಲ್ಲಿ ಜಾಲಿ ರೈಡ್ ಮಾಡುತ್ತಿದ್ದರು. ಕುದೂರು ಪಿಎಸ್‍ಐ ಮಂಜುನಾಥ್ ಸಿನಿಮೀಯ ರೀತಿಯಲ್ಲಿ ಬೈಕ್ ಚೇಸಿಂಗ್ ಮಾಡಿ ಸವಾರರನ್ನು ಅಡ್ಡಹಾಕಿ ಜಾಲಿ ರೈಡ್‍ಗೆ ಬ್ರೇಕ್ ಹಾಕಿದ್ದಾರೆ.

ವೀಕೆಂಡ್ ಎಂದು ಅನಗತ್ಯ ರೇಸ್ ಬಂದವರಿಗೆ ಪಿಎಸ್‍ಐ ಮಂಜುನಾಥ್ ಸಖತ್ ಆಗಿ ಬಿಸಿ ಮುಟ್ಟಿಸಿದ್ದಾರೆ. ಸುಮಾರು 80 ಬೈಕ್‍ಗಳಿಗೆ ದಂಡ ಸಹಿತ ವಾರ್ನಿಂಗ್ ನೀಡಿದ್ದಾರೆ. ಈ ಜಾಲಿ ರೈಡ್‍ಗೆ ಬ್ರೇಕ್ ಹಾಕುವಲ್ಲಿ ಕುದೂರು ಪೊಲೀಸ್ ಠಾಣಾ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಸಿದ್ದು, ಯಶಸ್ವಿಯಾಗಿದೆ.