– ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ
ಕಲಬುರಗಿ: ಸಿಂಗಲ್ ಪೇರೆಂಟ್(Single parent) ಇರುವ ಹಿನ್ನೆಲೆ ಮಾನಸಿಕವಾಗಿ ನೊಂದಿದ್ದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ(Kalburgi Suicide) ಮಾಡಿಕೊಂಡಿರುವ ಘಟನೆ ಕಲಬುರಗಿ ನಗರದ ಮಾನಸ ಲೇಔಟ್‌ನಲ್ಲಿ ನಡೆದಿದೆ.
25 ವರ್ಷದ ಕೃಷ್ಣ ಮಾಲಿಪಾಟೀಲ್ ಮೃತ ಯುವಕ. ಈತ ವಿಜಯಪುರ ಜಿಲ್ಲೆಯ(Vijaya Pura) ವಾಣಿಜ್ಯ ತೆರಿಗೆ (ಕಮರ್ಷಿಯಲ್ ಟ್ಯಾಕ್ಸ್) ಇಲಾಖೆಯ ಅಧಿಕಾರಿ ಭಾರತಿ ಅಪ್ಪಾರಾವ್ ಮಾಲಿಪಾಟೀಲ್ ಅವರ ಪುತ್ರ.
ಇಂಜಿನಿಯರಿಂಗ್ ಪೂರ್ಣಗೊಳಿಸಿ ಕೆಲಸದ ಹುಡುಕಾಟದಲ್ಲಿದ್ದ ಕೃಷ್ಣ, ಮಾನಸ ಲೇಔಟ್‌ನಲ್ಲಿರುವ ಮನೆಯಲ್ಲಿ ಒಬ್ಬನೇ ವಾಸವಾಗಿದ್ದ. ತಾಯಿ ಭಾರತಿ ಮಾಲಿಪಾಟೀಲ್ ವಿಜಯಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ವಾರಕ್ಕೊಮ್ಮೆ ಕಲಬುರಗಿಗೆ ಬಂದು ಮಗನನ್ನು ಭೇಟಿಯಾಗಿ ಹೋಗುತ್ತಿದ್ದರು.ಇದನ್ನೂ ಓದಿ: ಬಿಕೆಹೆಚ್, ಪ್ರಿಯಾಂಕ್ ಮಾತನಾಡುವುದು ನೋಡಿದ್ರೇ ಹಿರಣ್ಯಕಶ್ಯಪುವಿಗಾದ ಶಿಕ್ಷೆ ಆಗಲಿದೆ: ಈಶ್ವರಪ್ಪ ಭವಿಷ್ಯ
ಜೂನ್ 18ರಂದು ತಾಯಿ ಕೊನೆಯ ಬಾರಿ ಮಗನೊಂದಿಗೆ ಮಾತನಾಡಿದ್ದರು. ಬಳಿಕ ಹಲವು ಬಾರಿ ಕರೆ ಮಾಡಿದರೂ ಕೃಷ್ಣ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಮನೆಗೆ ಬಂದು ನೋಡಿದಾಗ ಯುವಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಜೂನ್ 18ರಂದೇ ಯವಕ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಯುವಕ ಕೈಯಲ್ಲಿನ ನರ ಕಟ್ ಮಾಡಿಕೊಂಡು ನಂತರ ಎರಡು ಕೈಗಳನ್ನ ಕಟ್ಟಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹಲವು ವರ್ಷಗಳಿಂದ ತಂದೆಯಿಲ್ಲದೆ ತಾಯಿ ಹಾಗೂ ಅಕ್ಕನೊಂದಿಗೆ ಬೆಳೆದಿದ್ದ ಕೃಷ್ಣ, ಸಿಂಗಲ್ ಪೇರೆಂಟ್ ಇರುವ ಹಿನ್ನೆಲೆ ಮಾನಸಿಕವಾಗಿ ಕುಗ್ಗಿದ್ದ. ಘಟನೆ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.ಇದನ್ನೂ ಓದಿ: ಪೆರೋಲ್ ಮೇಲೆ ಹೊರಬಂದು ವ್ಯಕ್ತಿಯ ಹತ್ಯೆಗೆ ಸ್ಕೆಚ್ – ಪೊಲೀಸ್ ಎನ್‌ಕೌಂಟರ್‌ಗೆ ಕ್ರಿಮಿನಲ್ ಬಲಿ
