ಚಂಡೀಗಢ: ಪೆರೋಲ್ ಮೇಲೆ ಹೊರಬಂದ ಹರಿಯಾಣದ ವಾಂಟೆಡ್ ಕ್ರಿಮಿನಲ್, ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ.
ಹರಿಯಾಣ (Haryana Encounter) ಪೊಲೀಸರು ನಡೆಸುತ್ತಿರುವ ಸಂಘಟಿತ ಅಪರಾಧಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಜೀವಾವಧಿ ಶಿಕ್ಷೆಗೊಳಗಾದ ಕುಖ್ಯಾತ ಕ್ರಿಮಿನಲ್ ಗೋಪಾಲ್ ಭಾನುವಾರ ಸೋನಿಪತ್ ಪೊಲೀಸರ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾನೆ. ಗುಂಡಿನ ಚಕಮಕಿಯಲ್ಲಿ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಬಿಹಾರದ ಮೋಸ್ಟ್ ವಾಂಟೆಡ್ ಅಪರಾಧಿ ಉತ್ತರ ಪ್ರದೇಶದಲ್ಲಿ ಎನ್‌ಕೌಂಟರ್
ಗೋಪಾಲ್ ತನ್ನ ಎದುರಾಳಿಯನ್ನು ಟಾರ್ಗೆಟ್ ಮಾಡಿ ಕೊಲ್ಲುವ ಉದ್ದೇಶದಿಂದ ಓಡಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಂಧನಕ್ಕೆ ಮುಂದಾಗಿದ್ದರು. ಈ ವೇಳೆ ಎನ್‌ಕೌಂಟರ್ ನಡೆಸಲಾಗಿದೆ.
ಬಂಧನದಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಗೋಪಾಲ್ ಮನಬಂದಂತೆ ಗುಂಡು ಹಾರಿಸಿದ. ಎರಡು ಗುಂಡುಗಳು ಪೊಲೀಸ್ ವಾಹನಗಳಿಗೆ ತಗುಲಿದರೆ, ಇನ್ನೊಂದು ಗುಂಡು ಹೆಡ್ ಕಾನ್‌ಸ್ಟೆಬಲ್ ದೇವೇಂದರ್ ಅವರ ಕೈಗೆ ತಗುಲಿ ಗಾಯಗೊಂಡರು. ಪೊಲೀಸ್ ಸಿಬ್ಬಂದಿ ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿದರು. ಗುಂಡಿನ ಚಕಮಕಿಯ ಸಮಯದಲ್ಲಿ ಗೋಪಾಲ್ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ.
ಆರೋಪಿ ಮತ್ತು ಗಾಯಗೊಂಡ ಪೊಲೀಸರಿಬ್ಬರನ್ನೂ ಖಾನ್ಪುರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಗೋಪಾಲ್ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದರು. ಹೆಡ್ ಕಾನ್ಸ್ಟೇಬಲ್ ದೇವೇಂದರ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋನಿಪತ್ ಜಿಲ್ಲೆಯ ಅಟಾಯಲ್ ಗ್ರಾಮದ ನಿವಾಸಿ ಗೋಪಾಲ್, ಹಲವು ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸ್ ದಾಖಲೆಗಳು ತಿಳಿಸಿವೆ. 2010 ರ ಕೊಲೆ ಪ್ರಕರಣದಲ್ಲಿ ಆತನಿಗೆ ಶಿಕ್ಷೆ ವಿಧಿಸಲಾಗಿತ್ತು. ನಂತರ 2016 ರಲ್ಲಿ ಗನೌರ್ ಪ್ರದೇಶದಲ್ಲಿ ನಡೆದ ಕೊಲೆಗೆ ಸಂಬಂಧಿಸಿದಂತೆ ಮತ್ತೊಂದು ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಇದನ್ನೂ ಓದಿ: ಡೆತ್‌ನೋಟ್ ಬರೆದಿಟ್ಟು ತಂದೆ-ತಾಯಿ, ಮಗಳು ಆತ್ಮಹತ್ಯೆ
ಈ ವರ್ಷದ ಫೆಬ್ರವರಿಯಲ್ಲಿ ಗೋಪಾಲ್ 70 ದಿನಗಳ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ. ಈ ಅವಧಿಯಲ್ಲಿ ಆತ ಮದ್ಯದಂಗಡಿಯ ಮೇಲೆ ದಾಳಿ, ವಿಧ್ವಂಸಕ ಕೃತ್ಯ ಮತ್ತು ಬೆಂಕಿ ಹಚ್ಚುವುದು, ಸಮಲ್ಖಾ ಪಟ್ಟಣದಿಂದ ಬ್ರೆಝಾ ಕಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಗುಂಡು ಹಾರಿಸಿ ವ್ಯಕ್ತಿಯ ಹತ್ಯೆಗೂ ಮುಂದಾಗಿದ್ದ. ಪೆರೋಲ್ ಅವಧಿ ಮುಗಿದಿದ್ದರೂ ಶರಣಾಗದೇ ತಲೆಮರೆಸಿಕೊಂಡಿದ್ದ.
