ಪಾಟ್ನಾ: ಬಿಹಾರದ(Bihar) ಮೋಸ್ಟ್ ವಾಂಟೆಡ್ ಅಪರಾಧಿಯಾಗಿದ್ದ(Most Wanted Criminal) ಲಾಲನ್ ಸಿಂಗ್ ಅಲಿಯಾಸ್ ಲಲ್ಲನ್ ಪೊಲೀಸರ ಎನ್‌ಕೌಂಟರ್‌ನಲ್ಲಿ(Encounter) ಮೃತಪಟ್ಟಿದ್ದಾನೆ. ಉತ್ತರ ಪ್ರದೇಶದ(Uttar Pradesh) ಸಹಾರನ್‌ಪುರದಲ್ಲಿ ಜೂನ್ 21ರ ಮಧ್ಯರಾತ್ರಿ ಈ ಘಟನೆ ನಡೆದಿದೆ.
ಹಲವು ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಲಾಲನ್ ಸಿಂಗ್‌ನನ್ನು ಹುಡುಕಿಕೊಟ್ಟವರಿಗೆ ಪೊಲೀಸರು 1.25 ಲಕ್ಷ ರೂ ಬಹುಮಾನ ಘೋಷಿಸಿದ್ದರು. ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ತಂಡಕ್ಕೆ ಸರ್ಸಾವ-ನಕುರ್ ರಸ್ತೆಯಲ್ಲಿ ಲಾಲನ್ ಸಿಂಗ್ ಹಾಗೂ ಆತನ ಸಹಚರರು ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆದಿದೆ.
ಗುಂಡಿನ ದಾಳಿಯಲ್ಲಿ ಲಾಲನ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣವೇ ಆತನನ್ನು ಸರ್ಸಾವಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಸಹಾರನ್‌ಪುರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.ಇದನ್ನೂ ಓದಿ: NEET ಮರುಪರೀಕ್ಷೆ ಬರೆಯಲು ಬಂದಿದ್ದ 9 ನಕಲಿ ಅಭ್ಯರ್ಥಿಗಳು ಸೇರಿ 30 ಮಂದಿ ಅರೆಸ್ಟ್
ಲಾಲನ್ ಸಿಂಗ್ ಬಿಹಾರದ ಸಮಸ್ತಿಪುರ ಜಿಲ್ಲೆಯ ಆನಂದಗೋಲ್ವಾ ಗ್ರಾಮದ ನಿವಾಸಿಯಾಗಿದ್ದ. ಆತ ಹಲವು ವರ್ಷಗಳಿಂದ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ನಡೆದ ಗಂಭೀರ ಅಪರಾಧ ಪ್ರಕರಣಗಳಲ್ಲಿ ಪ್ರಮುಖ ಅಪರಾಧಿಯಾಗಿದ್ದ.
2022ರ ನವೆಂಬರ್ 8ರಂದು ವಾರಾಣಸಿಯಲ್ಲಿ ಸಬ್ ಇನ್‌ಸ್ಪೆಕ್ಟರ್ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣದಲ್ಲಿ ಆತ ಪ್ರಮುಖ ಆರೋಪಿಯಾಗಿದ್ದ. ದಾಳಿ ಬಳಿಕ ಪೊಲೀಸ್ ಅಧಿಕಾರಿಯ ಸರ್ವಿಸ್ ಪಿಸ್ತೂಲ್ ದೋಚಿದ್ದ ಆರೋಪವೂ ಆತನ ಮೇಲಿತ್ತು. ಇದಲ್ಲದೆ, 2022ರ ನವೆಂಬರ್ 1ರಂದು ಚಂದೌಲಿ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿ ಮತ್ತು ದರೋಡೆ ಪ್ರಕರಣದಲ್ಲಿಯೂ ಲಾಲನ್ ಸಿಂಗ್ ಆರೋಪಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಎನ್ಕೌಂಟರ್ ಸಮಯದಲ್ಲಿ, ಲಾಲನ್ ಸಿಂಗ್ ಸಹಚರನೊಬ್ಬ ಸ್ಥಳದಿಂದ ಪರಾರಿಯಾಗಿದ್ದಾನೆ. ತಲೆಮರೆಸಿಕೊಂಡಿರುವ ಸಹಚರನನ್ನು ಪತ್ತೆಹಚ್ಚಲು ಪೊಲೀಸರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಇದನ್ನೂ ಓದಿ: ನೌಕಾಪಡೆಗೆ ಪವರ್‌ಫುಲ್ ನೌಕೆಗಳ ಸೇರ್ಪಡೆ
