ಯಾದಗಿರಿ: ನೆಚ್ಚಿನ ಶಿಕ್ಷಕರು ವರ್ಗಾವಣೆಯಾದರೆ ಅಥವಾ ನಿವೃತ್ತಿ ಹೊಂದಿದರೆ ಅವರನ್ನು ವಾಹನದಲ್ಲಿ ಕೂರಿಸಿ ಮೆರವಣಿಗೆ ಮಾಡಿ, ಅದ್ಧೂರಿಯಾಗಿ ಬೀಳ್ಕೊಡುವುದನ್ನು ನಾವು ನೋಡಿದ್ದೇವೆ. ಆದರೆ ಪೊಲೀಸರಿಗೆ ಇಂತಹ ಅವಕಾಶ ಸಿಗುವುದೇ ಅಪರೂಪ. ಯಾದಗಿರಿ ಜಿಲ್ಲೆಯಲ್ಲಿ ಇಂತಹ ಅಪರೂಪ ದೃಶ್ಯ ಕಂಡು ಬಂದಿದೆ.
ಕೆಂಭಾವಿ ಪೊಲೀಸ್ ಠಾಣೆಯ ಪಿಎಸ್‍ಐ ಅಧಿಕಾರಿ ಬಾಪುಗೌಡ ಪಾಟೀಲ ಅವರು ಯಾದಗಿರಿ ನಗರಕ್ಕೆ ವರ್ಗಾವಣೆಯಾಗಿದ್ದಾರೆ. ಮೂಲತಃ ವಿಜಯಪುರ ಜಿಲ್ಲೆಯ ಬಾಪುಗೌಡ ಅವರು, ಕೆಂಭಾವಿ ಠಾಣೆಯಲ್ಲಿ ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸಿದ್ದಾರೆ.
Advertisement
Advertisement
ಬಾಪುಗೌಡ ಅವರ ಉತ್ತಮವಾಗಿ ಸೇವೆ ಸಲ್ಲಿಸಿ, ಜನರ ಮೆಚ್ಚುಗೆ ಪಡೆದಿದ್ದರು. ಹೀಗಾಗಿ ಅವರಿಗೆ ಸ್ಥಳೀಯರು ಬುಧವಾರ ಬೀಳ್ಕೊಡುಗೆ ಸಮಾರಂಭ ಆಯೋಜಿಸಿದ್ದರು. ಜೊತೆಗೆ ಹೊಸದಾಗಿ ಠಾಣೆಗೆ ಆಗಮಿಸಿದ ಪಿಎಸ್‍ಐ ಅಜೀತ್ ಕುಮಾರ್ ಅವರಿಗೆ ಸ್ವಾಗತ ಕಾರ್ಯಕ್ರಮ ಕೂಡ ಠಾಣೆಯಲ್ಲಿ ನಡೆಯಿತು.
Advertisement
ಬೀಳ್ಕೊಡುಗೆ ಸಮಾರಂಭ ಬಳಿಕ ಸ್ಥಳೀಯರು ಹಾಗೂ ಠಾಣೆಯ ಸಿಬ್ಬಂದಿ ಬಾಪುಗೌಡ ಪಾಟೀಲ್ ಅವರನ್ನು ತೆರೆದ ಜೀಪ್‍ನಲ್ಲಿ ಕೂರಿಸಿ, ಮೆರವಣಿಗೆ ಮಾಡಿದರು. ಈ ವೇಳೆ ಡಿಜೆ ಹಚ್ಚಿ ಅನೇಕರು ಯುವಕರು ಕುಣಿದು ಕುಪ್ಪಳಿಸಿದರು. ಅಷ್ಟೇ ಅಲ್ಲದೆ ಪೊಲೀಸ್ ಸಿಬ್ಬಂದಿ ಕೂಡ ‘ಚುಟುಚುಟ ಅಂತೈತಿ…’ ಎನ್ನುವ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://youtu.be/oUZGj_2k8ng