ದಿಸ್ಪುರ: ಬುರ್ಕಾ ಬದಲು ಜೀನ್ಸ್ ಪ್ಯಾಂಟ್ ಧರಿಸಿದ್ದಕ್ಕೆ ಮುಸ್ಲಿಂ ಯುವತಿಯನ್ನು ಅಂಗಡಿಯ ಮಾಲೀಕ ಹೊರ ಹಾಕಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.
Advertisement
ಮುಸ್ಲಿಂ ಸಮುದಾಯದ ಯುವತಿ ಜೀನ್ಸ್ ಪ್ಯಾಂಟ್ ಧರಿಸಿದ್ದಾಳೆ ಎನ್ನುವ ಕಾರಣಕ್ಕೆ ಆಕೆಯನ್ನು ಅಂಗಡಿಯಿಂದ ಮಾಲೀಕ ಹೊರಹಾಕಿದ್ದಾನೆ. ಬುರ್ಕಾ ಏಕೆ ಧರಿಸಿಲ್ಲ, ಜೀನ್ಸ್ ಪ್ಯಾಂಟ್ ಯಾಕೆ ಹಾಕಿಕೊಂಡಿದ್ದೀಯ ಎಂದು ಆಕೆಗೆ ಅಂಗಡಿಯ ಮಾಲೀಕ ಪ್ರಶ್ನೆ ಮಾಡಿದ್ದಾನೆ. ಇದನ್ನೂ ಓದಿ: ಪುನೀತ್ ಓದಿಸುತ್ತಿದ್ದ 1,800 ಮಕ್ಕಳ ಜವಾಬ್ದಾರಿ ಹೊತ್ತ ನಟ ವಿಶಾಲ್
Advertisement
Advertisement
ಅಸ್ಸಾಂನ ಬಿಸ್ವನಾಥ್ ಚರಿಯಾಲಿಯಲ್ಲಿರುವ ಎಲೆಕ್ಟ್ರಾನಿಕ್ಸ್ ಅಂಗಡಿಗೆ 22 ವರ್ಷದ ಯುವತಿ ಇಯರ್‌ಫೋನ್ ಖರೀದಿಸಲು ಎಲೆಕ್ಟ್ರಾನಿಕ್ಸ್ ಅಂಗಡಿಗೆ ಹೋಗಿದ್ದಾರೆ. ಆದರೆ ಆಕೆಗೆ ಇಯರ್‌ಫೋನ್ ಮಾರಾಟ ಮಾಡಲು ಅಗಂಗಡಿ ಮಾಲೀಕ ಮಾಲೀಕ ನೂರುಲ್ ಅಮೀನ್ ನಿರಾಕರಿಸಿದ್ದಾನೆ. ಆಕೆ ಜೀನ್ಸ್ ಪ್ಯಾಂಟ್ ಧರಿಸಿದ್ದಕ್ಕಾಗಿ ಅನುಚಿತವಾಗಿ ವರ್ತಿಸಿದ್ದಾನೆ. ಅಲ್ಲದೆ, ಬುರ್ಕಾ ಧರಿಸುವಂತೆ ಅಂಗಡಿಯ ಮಾಲೀಕರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಘಟನೆಯ ನಂತರ, ಯುವತಿಯ ತಂದೆ ತನ್ನ ಮಗಳೊಂದಿಗೆ ತೋರಿದ ವರ್ತನೆಯನ್ನ ಪ್ರಶ್ನಿಸಿಲು ಎಲೆಕ್ಟ್ರಾನಿಕ್ಸ್ ಸ್ಟೋರ್‌ಗೆ ಭೇಟಿ ನೀಡಿದ್ದರು. ಆದರೆ ಅವರೊಂದಿಗೂ ಅಂಗಡಿಯ ಮಾಲೀಕ ನೂರುಲ್‍ನ ಪುತ್ರ ರಫಿಕುಲ್ ಇಸ್ಲಾಂ ಅಮಾನುಷವಾಗಿ ನಡೆಸಿಕೊಂಡಿದ್ದು, ಹಲ್ಲೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನಾಲ್ವರ ಬಾಳಿಗೆ ಬೆಳಕಾದ ಅಪ್ಪು
Advertisement
ಈ ಸಂಬಂಧ, ಯುವತಿಯ ತಂದೆ ಹಾಗೂ ಸಂತ್ರಸ್ತೆ ಯುವತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಿಸ್ವನಾಥ್ ಪೊಲೀಸರು ಆರೋಪಿ ನೂರುಲ್ ಅಮೀನ್ ಮತ್ತು ಅವರ ಮಗ ರಫಿಕುಲ್ ಅವರನ್ನು ವಶಕ್ಕೆ ಪಡೆದಿದ್ದಾರೆ.