ಮುಂಬೈ: ಪುಣೆಯ (Pune) ಐಟಿ ಸಂಸ್ಥೆಯೊಂದರಲ್ಲಿ ವ್ಯವಸ್ಥಾಪಕಿಯಾಗಿ (IT Professional) ಕೆಲಸ ಮಾಡುತ್ತಿದ್ದ 26 ವರ್ಷದ ಯುವತಿಯನ್ನ ಆಕೆಯ ಪ್ರಿಯತಮನೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜ.28ರಂದು ಬೆಳಗ್ಗೆ ಲಕ್ಷ್ಮಿ ನಗರದ ಹಿಂಜೆವಾಡಿ ಪ್ರದೇಶದಲ್ಲಿರುವ ಹೋಟೆಲ್ ಕೊಠಡಿಯಲ್ಲಿ ತಲೆಗೆ ಗುಂಡಿಕ್ಕಿ ಹತ್ಯೆಗೈದಿದ್ದಾನೆ. ಮೃತ ಯುವತಿಯನ್ನು ವಂದನಾ ದ್ವಿವೇದಿ ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ರಿಷಬ್ ನಿಗಮ್ ಎಂದು ಗುರುತಿಸಲಾಗಿದೆ. ರಿಷಬ್ ಉತ್ತರ ಪ್ರದೇಶದ ಲಕ್ನೋ ನಿವಾಸಿಯಾಗಿದ್ದು, ಕೊಲೆ ಮಾಡಿ ಮುಂಬೈಗೆ ಎಸ್ಕೇಪ್ ಆಗುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಪಿಂಪ್ರಿ ಚಿಂಚ್‌ವಾಡ್ ಪೊಲೀಸರು (Pimpri Chinchwad Police) ತಿಳಿಸಿದ್ದಾರೆ.
Advertisement
Advertisement
ಪೊಲೀಸರ ಪ್ರಕಾರ, ವಂದನಾ ಶನಿವಾರ ತನ್ನ ಪ್ರಿಯಕರನೊಂದಿಗೆ ಹೋಟೆಲ್‌ಗೆ ಬಂದಿದ್ದಳು. ಮೃತ ಯುವತಿ ಹಾಗೂ ಆರೋಪಿ ರಿಷಬ್ ಕಳೆದ 10 ವರ್ಷಗಳಿಂದಲೂ ಸಂಬಂಧ ಹೊಂದಿದ್ದರು. ಇತ್ತೀಚೆಗೆ ಇಬ್ಬರ ನಡುವೆ ವೈಯಕ್ತಿಕ ಕಾರಣಗಳಿಗೆ ಜಗಳವಾಗಿತ್ತು. ವಂದನಾ ನಡವಳಿಕೆಯ ಬಗ್ಗೆ ಸಂಶಯ ಪಟ್ಟಿದ್ದ ರಿಷಬ್ ಆಕೆಯನ್ನ ಕೊಲ್ಲಲ್ಲು ಸ್ಕೆಚ್ ಹಾಕಿದ್ದ. ಭಾನುವಾರವೂ ಇಬ್ಬರ ನಡುವೆ ಜಗಳ ನಡೆಯುತ್ತಿದ್ದಾಗಲೇ ರಿಷಬ್, ವಂದನಾ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹನುಮಧ್ವಜ ಸಂಘರ್ಷ; ರಾಜ್ಯಾದ್ಯಂತ ಹೋರಾಟದ ಕಿಚ್ಚು – ಮಂಡ್ಯದಲ್ಲಿಂದು ಹೆಚ್‌ಡಿಕೆ, ರೆಡ್ಡಿ ಪಾದಯಾತ್ರೆ
Advertisement
Advertisement
ಘಟನೆಯ ನಂತರ ಹೋಟೆಲ್‌ನಿಂದ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದರು. ಭಾನುವಾರ ರಿಷಬ್ ಮುಂಬೈಗೆ ಎಸ್ಕೇಪ್ ಆಗುತ್ತಿದ್ದ ವೇಳೆ ಬಂಧಿಸಿದ್ದಾರೆ. ಇದನ್ನೂ ಓದಿ: ಶಾಲಾ ಬಸ್-ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ – ನಾಲ್ವರು ವಿದ್ಯಾರ್ಥಿಗಳ ದುರ್ಮರಣ
ಸದ್ಯ ವಂದನಾಳ ಶವ ಪತ್ತೆಯಾದ ಹೋಟೆಲ್ ಕೋಣೆಗೆ ಪೊಲೀಸರು ಸೀಲ್ ಹಾಕಿದ್ದಾರೆ ಮತ್ತು ರಿಷಬ್ ಅವರನ್ನು ಕೊಲ್ಲಲು ಬಳಸಿದ್ದ ಗನ್ ಎಲ್ಲಿಂದ ಬಂತು ಅನ್ನೋ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.