ಪಾಟ್ನಾ: ಪತಿಯನ್ನು ಬಿಟ್ಟು ಬರಲು ನಿರಾಕರಿಸಿದ್ದಕ್ಕೆ ನಾಲ್ಕು ಮಕ್ಕಳ ತಾಯಿಯ ಮೇಲೆ ಇಬ್ಬರು ಲೈಂಗಿಕ ದೌರ್ಜನ್ಯ ಎಸಗಿದ್ದು, ಕಬ್ಬಿಣದ ರಾಡ್‍ನಿಂದ ಆಕೆಯ ಗುಪ್ತಾಂಗಕ್ಕೆ ಇರಿದು ಹಲ್ಲೆ ಮಾಡಿರೋ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ.
ಪಾಟ್ನಾದಿಂದ ಸುಮಾರು 25 ಕಿಮೀ ದೂರದಲ್ಲಿರುವ ಬಾಲಿಯವಾನ್ ಗ್ರಾಮದಲ್ಲಿ ಬುಧವಾರದಂದು ಈ ಘಟನೆ ನಡೆದಿದ್ದು, ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ 35 ವರ್ಷದ ಮಹಿಳೆ ಗುರುವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
Advertisement
ಆರೋಪಿ ಧೀರಾಜ್ ಮತ್ತು ಆತನ ಸ್ನೇಹಿತ ಸೇರಿ ಈ ಕೃತ್ಯವೆಸಗಿದ್ದಾರೆ. ಧೀರಜ್‍ನನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿಗಾಗಿ ಬಲೆ ಬೀಸಿದ್ದಾರೆ.
Advertisement
ಬುಧವಾರದಂದು ಹೊಲದಲ್ಲಿ ಆರೋಪಿಗಳು ಮಹಿಳೆಯನ್ನ ತಡೆದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಆಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಕಬ್ಬಿಣದ ರಾಡ್‍ನಿಂದ ಆಕೆಯ ಗುಪ್ತಾಂಗಕ್ಕೆ ಇರಿದು ಪರಾರಿಯಾಗಿದ್ದರು. ನಂತರ ಸಂತ್ರಸ್ತೆಯನ್ನು ಗ್ರಾಮಸ್ಥರು ಮನೆಗೆ ಕರೆತಂದಿದ್ದರು. ಮಹಿಳೆ ತನ್ನ ಕುಟುಂಬಸ್ಥರಿಗೆ ಲೈಂಗಿಕ ದೌರ್ಜನ್ಯದ ಬಗ್ಗೆ ತಿಳಿಸಿದ್ದರು. ಧೀರಜ್ ತನ್ನ ಮೇಲೆ ದಾಳಿ ಮಾಡಿದ್ದಾಗಿ ಹೇಳಿದ್ದರು. ನಂತರ ಪ್ರಜ್ಞೆ ತಪ್ಪಿದ ಆಕೆಯನ್ನು ಕೂಡಲೇ ಸಮೀಪದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದ್ದರು.
Advertisement
ಸಂತ್ರಸ್ತೆ ತುಂಬಾ ಕೆಟ್ಟ ಪರಿಸ್ಥಿಯಲ್ಲಿದ್ದರು. ಆಕೆಗೆ ರಾಡ್‍ನಿಂದ ಇರಿದಿದ್ದರಿಂದ ಅತಿಯಾಗಿ ರಕ್ತಸ್ರಾವವಾಗಿತ್ತು. ನಾವು ಆಪರೇಷನ್ ಮಾಡಲು ಪ್ರಯತ್ನಿಸಿದೆವು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮೃತಪಟ್ಟರು ಎಂದು ಡಾ. ಅನಿಲ್ ಕುಮಾರ್ ಶಾಂಡಿಲ್ಯ ತಿಳಿಸಿದ್ದಾರೆ.
Advertisement
ಸಂತ್ರಸ್ತೆಗೆ 4 ಮಕ್ಕಳಿದ್ದರು. ಆರೋಪಿ ಧೀರಜ್ ಮತ್ತು ಆಕೆಗೆ ಶಾಲೆಗೆ ಹೋಗೋ ಸಮಯದಿಂದಲೂ ಪರಿಚಯವಿತ್ತು. ಆರೋಪಿ ಆಕೆಯನ್ನು ಇಷ್ಟಪಡುತ್ತಿದ್ದ. ಹೀಗಾಗಿ ತನ್ನ ಪತಿಯನ್ನು ಬಿಟ್ಟು ಬರುವಂತೆ ಒತ್ತಾಯ ಮಾಡಿದ್ದ. ಆದರೆ ಆಕೆ ಪತಿಯನ್ನು ಬಿಡಲು ನಿರಾಕರಿಸಿದ್ದರಿಂದ ಕೋಪಗೊಂಡು ಆರೋಪಿ ತನ್ನ ಸಹಚರನ ಜೊತೆ ಸೇರಿ ಈ ಹೀನ ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ಪ್ರೇಮ್ ಚೌಹಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.