ಬ್ರೆಸಿಲಿಯಾ: ಬ್ರೆಜಿಲ್‌ನಲ್ಲಿ ಬಂಗೀ ಜಂಪ್ ಮಾಡುವಾಗ ಸೇಫ್ಟಿ ರೋಪ್ ಕಟ್ಟಲು ಸಿಬ್ಬಂದಿ ಮರೆತಿದ್ದರಿಂದ ಯುವತಿಯೊಬ್ಬಳು 130 ಅಡಿ ಎತ್ತರದಿಂದ ಬಿದ್ದು ಸಾವನ್ನಪ್ಪಿದ್ದಾಳೆ. ಯುವತಿ ಎತ್ತರದಿಂದ ಬೀಳುವ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಾರಿಯಾ ಎಡ್ವರ್ಡಾ ರೊಡ್ರಿಗಸ್ ಡಿ ಫ್ರೀಟಾಸ್ ಸಾವನ್ನಪ್ಪಿದ ಯುವತಿ. ಈಕೆ ಖಾಸಗಿ ಕಂಪನಿಯೊಂದು ಸಾವೊ ಪಾಲೊ ರಾಜ್ಯದ ಸ್ಕೆಲಿಟನ್ ಸೇತುವೆ ಮೇಲೆ ಆಯೋಜಿಸಿದ ಬಂಗೀ ಜಂಪ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಳು. ಬಂಗೀ ಜಂಪ್ ವೇಳೆ ನಿರ್ಲಕ್ಷ್ಯ ತೋರಿದ ಆರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಒಮನ್ ಸಮುದ್ರದಲ್ಲಿ ದೋಣಿ ಮಗುಚಿ ದುರಂತ – 14 ಭಾರತೀಯರ ರಕ್ಷಣೆಗೆ ಧಾವಿಸಿದ ಅಮೆರಿಕ ನೌಕಾಪಡೆ
ಯುವತಿ ಬಂಗೀ ಜಂಪ್ ಮಾಡುವಾಗ ರೆಕಾರ್ಡ್ ಮಾಡಲಾದ ವಿಡಿಯೋದಲ್ಲಿ ಸಿಬ್ಬಂದಿ ಅವಳನ್ನು ಸೇತುವೆಯ ಅಂಚಿಗೆ ಕರೆದೊಯ್ದ ದೃಶ್ಯ ಸೆರೆಯಾಗಿದೆ. ಅಲ್ಲದೇ ಅವಳನ್ನು ಕೈ ಬಿಡುವ ದೃಶ್ಯ ಸೆರೆಯಾಗಿದೆ. ವಿಡಿಯೋದಲ್ಲಿ ಸೇಫ್ಟಿ ರೋಪ್ ಕಟ್ಟಿದ್ದಾರೆಯೇ ಅಥವಾ ಕಟ್ಟಿಲ್ಲವೇ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿಲ್ಲ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳಲ್ಲಿ, ಮಾರಿಯಾ ಸೇತುವೆಯಿಂದ ಬೀಳುತ್ತಿದ್ದಂತೆ, ಹಗ್ಗ, ಹಗ್ಗ ಎಂದು ಕೂಗಿರುವುದು ದಾಖಲಾಗಿದೆ. ಇನ್ನೂ ಸ್ಥಳೀಯ ಅಧಿಕಾರಿಗಳು ಸೇಫ್ಟಿ ರೋಪ್‌ನ್ನು ಅವಳ ದೇಹಕ್ಕೆ ಕಟ್ಟಿರಲಿಲ್ಲ ಎಂದು ಹೇಳಿದ್ದಾರೆ.
ಕಂದಕಕ್ಕೆ ಇಳಿದ ರಕ್ಷಣ ತಂಡ ಯುವತಿಯ ಮೃತದೇಹವನ್ನು ಮೇಲೆತ್ತಿದೆ. ನಂತರ ಆಕೆಯ ಮೃತದೇಹವನ್ನು ಪರೀಕ್ಷೆಗಾಗಿ ಕಾನೂನು ವೈದ್ಯಕೀಯ ಸಂಸ್ಥೆಗೆ ಸಾಗಿಸಲಾಯಿತು.
ಈ ದುರ್ಘಟನೆಗೆ ಸ್ವಲ್ಪ ಸಮಯಕ್ಕೂ ಮೊದಲು ಮಾರಿಯಾ ಜಂಪ್ ಸೈಟ್‌ನಿಂದ ಛಾಯಾಚಿತ್ರಗಳನ್ನು ಹಂಚಿಕೊಂಡಿದ್ದಳು. ಇದನ್ನೂ ಓದಿ: ಎಐ ಅಭಿವೃದ್ಧಿಪಡಿಸಿದ ಲಸಿಕೆ; ಭವಿಷ್ಯದ ಸಾಂಕ್ರಾಮಿಕ ರೋಗಗಳಿಂದ ನಮ್ಮನ್ನು ರಕ್ಷಿಸಬಹುದೇ?
