ನವದೆಹಲಿ: ನಾನು ವಂದೇ ಮಾತರಂ(Vande Mataram) ರಾಷ್ಟ್ರಗೀತೆಗೆ ಗೌರವ ನೀಡುತ್ತೇನೆ, ಆದರೆ ಅದನ್ನು ಹಾಡುವುದಿಲ್ಲ ಎಂದು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್(Imran Masood) ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಸಮಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಉಪಸ್ಥಿತಿಯಲ್ಲಿ ‘ವಂದೇ ಮಾತರಂ’ ಗೀತೆಯ ಗಾಯನ ವಿವಾದಕ್ಕೆ ಸಂಬಂಧಿಸಿದಂತೆ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
Delhi: Congress MP Imran Masood says, “Go ahead and promote Vande Mataram if you want to. What difference does it make to me? I will do only as much as I want to, and I will do that. I have never sung it before, and I will not sing it in the future either. I will simply stand up.… pic.twitter.com/RcKGoTGtci
— IANS (@ians_india) August 17, 2026
ನಾನು ಅಲ್ಲಾನನ್ನು(Allah) ಹೊರತುಪಡಿಸಿ ಬೇರೆ ಯಾರನ್ನೂ ಪೂಜಿಸಲು ಸಾಧ್ಯವಿಲ್ಲ. ಸಂವಿಧಾನವು ನನಗೆ ಈ ಧಾರ್ಮಿಕ ಹಕ್ಕನ್ನು ನೀಡಿದೆ, ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಹೀಗೆ ಹೇಳಿದ ಮಾತ್ರಕ್ಕೆ ನಾನು ವಂದೇ ಮಾತರಂ ಗೀತೆಯನ್ನು ಎಂದಿಗೂ ಅವಮಾನಿಸುವುದಿಲ್ಲ. ನಾನು ಅದನ್ನು ಹಾಡುವುದಿಲ್ಲ, ಆದರೆ ಗೀತೆ ಪ್ರಸಾರವಾಗುವಾಗ ಎದ್ದು ನಿಂತು ಗೌರವ ಸಲ್ಲಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ವಂದೇ ಮಾತರಂಗೆ ಅಪಮಾನ ಆರೋಪ; ಮಂಗಳೂರಲ್ಲಿ ಸೋನಿಯಾ ಗಾಂಧಿ ವಿರುದ್ಧ ದೂರು
”I cannot worship anyone except Allah. This right has been bestowed on me by the Constitution. You cannot snatch away this right from me. But, I won’t insult Vande Mataram. I won’t sing it but I will rise for it”, says Congress MP Imran Masood while speaking on Vande Mataram… pic.twitter.com/VkVOLYwsCi
— WION (@WIONews) August 17, 2026
ನಾನು ಈ ಹಿಂದೆಯೂ ಎಂದಿಗೂ ಈ ಗೀತೆಯನ್ನು ಹಾಡಿಲ್ಲ, ಮುಂದೆಯೂ ಹಾಡುವುದಿಲ್ಲ. ಮೊದಲು ವಂದೇ ಮಾತರಂ ಗೀತೆಯ ಸಂಪೂರ್ಣ ಇತಿಹಾಸವನ್ನು ಓದಿ; ಅದು ಎಲ್ಲಿಂದ ಬಂತು, ಹೇಗೆ ಮತ್ತು ಏಕೆ ಬರೆಯಲ್ಪಟ್ಟಿತು ಎಂಬುದನ್ನು ತಿಳಿದುಕೊಂಡು ನನ್ನೊಂದಿಗೆ ಮಾತನಾಡಲಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ವಂದೇ ಮಾತರಂಗೆ ಅವಮಾನ ಮಾಡಿದ ನಿಮ್ಮನ್ನು ದೇಶ ಕ್ಷಮಿಸಲ್ಲ: ಸೋನಿಯಾ ವಿರುದ್ಧ ಅಮಿತ್ ಶಾ ವಾಗ್ದಾಳಿ
ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ವೇಳೆ ವಂದೇ ಮಾತರಂ ಗೀತೆಯನ್ನು ಅರ್ಧಕ್ಕೆ ನಿಲ್ಲಿಸಲಾಯಿತು ಎಂದು ಆರೋಪಿಸಿ ಬಿಜೆಪಿ, ಸೋನಿಯಾ ಗಾಂಧಿ ವಿರುದ್ಧ ದೂರು ದಾಖಲಿಸಿದೆ.

