DistrictsKarnatakaKodaguLatestMain Post

ಮತ್ತೆ ಕಾಂಗ್ರೆಸ್ ಸೇರುವ ಮುನ್ಸೂಚನೆ ಕೊಟ್ಟ ಹೆಚ್. ವಿಶ್ವನಾಥ್

ಮಡಿಕೇರಿ: ಮತ್ತೆ ಕಾಂಗ್ರೆಸ್ ಸೇರುವ ಮುನ್ಸೂಚನೆಯನ್ನು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ನೀಡಿದ್ದು, ನನ್ನ ಝಂಡಾ ಬದಲಾಗಬಹುದು ಆದರೆ ನನ್ನ ಅಜೆಂಡಾ ಬದಲಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಹುಣಸೂರಿನಲ್ಲಿ ಕೆಂಪೇಗೌಡ ಜಯಂತಿ ವೇಳೆ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಸ್ಥಳೀಯ ಶಾಸಕರೊಬ್ಬರ ಮನೆಯಲ್ಲಿ ಊಟ ಮಾಡಿದ ವಿಚಾರವಾಗಿ ಮಾತನಾಡಿದ ಅವರು ಅದರಲ್ಲಿ ಯಾವ ವಿಶೇಷ ಏನೂ ಇಲ್ಲ. ನಾನು, ಡಿ.ಕೆ.ಶಿವಕುಮಾರ್ ಅವರು ಮೊದಲಿನಿಂದಲೂ ಕಾಂಗ್ರೆಸ್‍ನ ಕಾರ್ಯಕರ್ತರಾಗಿದ್ದೆವು. ಈ ಪಕ್ಷದಲ್ಲೇ ಇದ್ದು ಅನೇಕ ಜನಪರ ಕೆಲಸವನ್ನು ಮಾಡಿದ್ದೇವೆ ಎಂದರು.

Congress

ಈ ದೇಶದ ಜನರು, ಬಡವರ ಪರ ಕಾರ್ಯಕ್ರಮವನ್ನು ಮಾಡುವುದಾಗಿದೆ. ಜಾತ್ಯಾತೀತ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರದ ಜೊತೆ ಕೆಲಸ ಮಾಡಬೇಕು. ಇದು ನನ್ನ ಅಜೆಂಡಾವಾಗಿದೆ. ಹೀಗಾಗಿ ನನ್ನ ಅಜೆಂಡಾವನ್ನು ಯಾವುದೋ ಒಂದು ಝಂಡಾದಲ್ಲಿ ಕುಳಿತುಕೊಂಡು ಕೆಲಸ ಮಾಡುವುದು ಮುಖ್ಯವಾಗಿರುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಆರೋಗ್ಯ ಸರಿಯಿಲ್ಲದೆ ಒದ್ದಾಡುತ್ತಿದ್ದೆ, ಹೀಗಾಗಿ 2 ದಿನ ತಡವಾಗಿದೆ: ವಿ ಸೋಮಣ್ಣ

ಮುಂದಿನ ನಡೆ ಕಾಂಗ್ರೆಸ್ ಕಡೆಗಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಯಾರಿಗೆ ಗೊತ್ತು. ಸಂಜೆ ಮಳೆ ಬರಬಹುದು ವಾತಾವರಣವೂ ಬದಲಾಗಬಹುದು. ಒತ್ತಾಯ ಬಂದರೆ ಕಾಂಗ್ರೆಸ್‍ಗೂ ಹೋಗಬಹುದು. ಹೇಳಲಾಗುವುದಿಲ್ಲ. ಹೀಗೆ ಆಗಬೇಕು ಹಾಗೇ ಆಗಬೇಕು ಎಂಬ ನಿರ್ಣಯಗಳು ರಾಜಕಾರಣದಲ್ಲಿಲ್ಲ. ರಾಜಕಾರಣ ಈಗ ಯಾವ ರೀತಿಯಾಗಿದೆ ಎಂದು ನಾವು ವೋಟಿಗಾಗಿ ಏನನ್ನು ಬೇಕಾದರು ಮಾಡಬಹುದು ಎನ್ನುವ ಥರವಾಗಿದೆ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಕ್ಕೆ ಯಾವ ಸಿದ್ಧತೆಗಳು ಇಲ್ಲ, ಅದಕ್ಕೆನು ದಂಡುದಾಳಿಯನ್ನು ಕರೆದುಕೊಂಡು ಹೋಗಬೇಕೆ ಎಂದು ಪ್ರಶ್ನಿಸಿದ ಅವರು, ಹೋಗಬೇಕು ಅಂತ ಅವಕಾಶ ಮತ್ತು ಒತ್ತಾಯಗಳು ಬಂದರೆ ಹೋಗುತ್ತೇನೆ ಅದರಲ್ಲಿ ಏನು ಇದೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಿಗೆ ಇನ್ಮುಂದೆ ಸಾಂಪ್ರದಾಯಿಕ ವೈದ್ಯ ಪದ್ಧತಿ ಹಬ್ ಆಗೋ ಅವಕಾಶ- ಯೋಗಿ ಆದಿತ್ಯನಾಥ್

Live Tv

Leave a Reply

Your email address will not be published.

Back to top button