ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಮಲಯಾಳಿ ನಟಿ ಮೀರಾ ಜಾಸ್ಮಿನ್ ಇನ್ ಸ್ಟಾಗ್ರಾಮ್ ನಲ್ಲಿ ಹಾಟ್ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಸದಾ ಸಾಂಪ್ರದಾಯಿಕ ಉಡುಗಿಯಲ್ಲೇ ಕಾಣಿಸಿಕೊಳ್ಳುತ್ತಿದ್ದ ಈ ನಟಿ, ದಿಢೀರ್ ಅಂತ ಅಂತ ಆ ವಿಡಿಯೋ ಹಾಕಿದ್ದಕ್ಕೆ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಇದನ್ನೂ ಓದಿ : ಮಾರ್ಚ್ 14ಕ್ಕೆ ಆರ್.ಆರ್.ಆರ್ ‘ಎತ್ತುವ ಜಂಡಾ’ ಸಾಂಗ್ ರಿಲೀಸ್
Advertisement
ಕನ್ನಡದಲ್ಲಿ ಪುನೀತ್, ಶಿವರಾಜ್ ಕುಮಾರ್, ರವಿಚಂದ್ರನ್ ಸೇರಿದಂತೆ ಹಲವು ನಟರೊಂದಿಗೆ ತೆರೆ ಹಂಚಿಕೊಂಡಿರುವ ಮೀರಾ ಜಾಸ್ಮಿನ್, ಕನ್ನಡ ಸಿನಿಮಾ ರಂಗದಲ್ಲಿ ‘ದೇವರು ಕೊಟ್ಟ ತಂಗಿ’ ಎಂದೇ ಫೇಮಸ್. ಓ ಸಾಯಿ ಪ್ರಕಾಶ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಗೆ ತಂಗಿಯಾಗಿ ಮೀರಾ ನಟಿಸಿದ್ದರು. ಕನ್ನಡಿಗರ ಮನದಲ್ಲಿ ತಂಗಿಯಾಗಿಯೇ ಭಾವನಾತ್ಮಕವಾಗಿ ಬೆರೆತು ಹೋಗಿದ್ದರು. ಇದೀಗ ಮೀರಾ ಬದಲಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ತಮಿಳಿಗೆ ಹೊರಟ ಬಸಣ್ಣಿ ಖ್ಯಾತಿಯ ತಾನ್ಯ ಹೋಪ್ : ಪ್ರಶಾಂತ್ ರಾಜ್ ಚಿತ್ರಕ್ಕೆ ತಾನ್ಯ ನಾಯಕಿ
Advertisement
View this post on Instagram
Advertisement
ಸೋಷಿಯಲ್ ಮೀಡಿಯಾದಿಂದ ಸದಾ ದೂರ ಇರುತ್ತಿದ್ದ ಮತ್ತು ಅವರು ದಪ್ಪ ಆಗಿದ್ದನ್ನು ಟ್ರೋಲ್ ಮಾಡಿದ್ದ ಕಾರಣದಿಂದ ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದರು. ಇತ್ತೀಚೆಗಷ್ಟೇ ಇನ್ ಸ್ಟಾಗ್ರಾಮ್ ಪೇಜ್ ತೆರೆದು, ಅಭಿಮಾನಿಗಳ ಜತೆ ಸಂವಾದ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ದಿನಕ್ಕೊಂದು ಫೋಟೋ ಮತ್ತು ನೆನಪಿನ ಮಾತುಗಳನ್ನು ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಿದ್ದರು. ಏಕಾಏಕಿ ಎದೆ ಸೀಳು ಕಾಣುವಂತಹ ವಿಡಿಯೋ ಹಾಕಿ, ಅಭಿಮಾನಿಗಳ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಇದನ್ನೂ ಓದಿ : ಸೋಲೊ ಟ್ರಿಪ್ ನಲ್ಲಿ ಪ್ಯಾರ್ಗೆ ಹುಡುಗಿ ಪಾರುಲ್ ಯಾದವ್
Advertisement
ಮೀರಾ ಜಾಸ್ಮೀನ್ ಅವರ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ರಾಶಿ ರಾಶಿ ಕಾಮೆಂಟ್ ಗಳನ್ನು ಹಾಕುತ್ತಿದ್ದಾರೆ. ಅಭಿಮಾನಿಗಳ ಸಂದೇಶಕ್ಕೆ ಸ್ವತಃ ಮೀರಾ ಬೆಚ್ಚಿ ಬಿದ್ದಿದ್ದಾರೆ.