LatestMain PostSports

ಲೈಂಗಿಕ ಶೋಷಣೆ ಆರೋಪಕ್ಕೆ ಟ್ವಿಸ್ಟ್‌ – ಕುಸ್ತಿಪಟುಗಳ ವಿರುದ್ಧವೇ ಹೈಕೋರ್ಟ್‍ನಲ್ಲಿ ದೂರು

ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್‍ನಲ್ಲಿ (WFI) ಲೈಂಗಿಕ ಶೋಷಣೆ ಆರೋಪ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಬ್ರಿಜ್‍ಭೂಷಣ್ ತಲೆದಂಡಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ರೆಸ್ಲರ್ ವಿನೆಶಾ ಫೋಗಟ್, ಭಜರಂಗ್‌ ಪೂನಿಯಾ ಸೇರಿ ಇತರೇ ಕುಸ್ತಿಪಟುಗಳ ವಿರುದ್ಧವೇ ದೆಹಲಿ ಹೈಕೋರ್ಟ್‍ನಲ್ಲಿ (Delhi High Court) ದೂರು ದಾಖಲಾಗಿದೆ.

ತಾತ್ಕಾಲಿಕವಾಗಿ ಅಮಾನತುಗೊಂಡಿರುವ ಡಬ್ಲುಎಫ್‍ಐ ಅಧ್ಯಕ್ಷ ಬ್ರಿಜ್ ಭೂಷಣ್ (Brij Bhushan) ಮನೆಯಲ್ಲಿ ಅಡುಗೆ ಕೆಲಸ ಮಾಡುವ ವಿಕ್ಕಿ ಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದಾರೆ. ಇದನ್ನೂ ಓದಿ: ಪಂತ್ ಆದಷ್ಟು ಬೇಗ ಗುಣಮುಖರಾಗಲಿ – ಮಹಾಕಾಳೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿದ ಸೂರ್ಯ, ಕುಲ್‌ದೀಪ್

 

ದೂರಿನಲ್ಲಿ ಏನಿದೆ?
ಲೈಂಗಿಕ ದೌರ್ಜನ್ಯ ನಿಗ್ರಹ ಕಾಯ್ದೆಯನ್ನು ಮಹಿಳಾ ಕುಸ್ತಿಪಟುಗಳು ಸಂಪೂರ್ಣವಾಗಿ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಒಂದು ವೇಳೆ ಯಾರಾದರೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರೆ ಅಂಥವರು ಕಾನೂನು ಪ್ರಕಾರ ಪೊಲೀಸ್ ಠಾಣೆ, ಕೋರ್ಟ್ ಮೆಟ್ಟಿಲೇರಬೇಕು. ಈ ಪ್ರಕರಣದಲ್ಲಿ ಯಾವೊಬ್ಬ ಮಹಿಳಾ ಕುಸ್ತಿಪಟು ದೂರು ನೀಡಿಲ್ಲ. ಆದರೆ ಇಲ್ಲಿ ಡಬ್ಲುಎಫ್‍ಐ ಅಧ್ಯಕ್ಷರ ರಾಜೀನಾಮೆ ಪಟ್ಟು ಹಿಡಿದು ನ್ಯಾಯಪ್ರಕ್ರಿಯೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ಸುಳ್ಳು ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಮಾಡುವ ಮೂಲಕ ಸುಲಿಗೆ ಮತ್ತು ಬ್ಲ್ಯಾಕ್‌ಮೇಲ್‌ ಮತ್ತು ರಾಜೀನಾಮೆ ನೀಡುವಂತೆ ಒತ್ತಾಯಿಸಿದ ಕುಸ್ತಿಪಟುಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

Live Tv

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Leave a Reply

Your email address will not be published. Required fields are marked *

Back to top button