– ನೀರಿನ ವಿಚಾರಕ್ಕೆ ಶುರುವಾದ ಗಲಾಟೆ
– ಎರಡು ಸಮುದಾಯಗಳ ನಡುವೆ ಹಿಂಸಾಚಾರ
ಡೆಹ್ರಾಡೂನ್: ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ (Dehradun) ಹೊಲಕ್ಕೆ ನೀರು ಹರಿಸುವ ವಿಚಾರಕ್ಕೆ ಶುರುವಾದ ಗಲಾಟೆ (Water Dispute) ಕೋಮು ಹಿಂಸಾಚಾರಕ್ಕೆ ತಿರುಗಿದ್ದು, ಓರ್ವ ಬಿಜೆಪಿ ನಾಯಕನ ಕೊಲೆಗೆ ಕಾರಣವಾಗಿದೆ. ಬಿಜೆಪಿ ನಾಯಕನ ಹತ್ಯೆಯ ಬಳಿಕ ಈ ಪ್ರದೇಶದಲ್ಲಿ ಭಾರೀ ಉದ್ವಿಗ್ನತೆ ಉಂಟಾಗಿದೆ.
#WATCH | Dehradun, Uttarakhand: A communal violence incident erupted late yesterday evening in Bairagiwala village under the Sahaspur police station area of Dehradun district over a dispute related to water. Police have registered a case against three named accused and 25… pic.twitter.com/aTGjD2YpSl
— ANI UP/Uttarakhand (@ANINewsUP) June 14, 2026
ಸಹಸ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೈರಾಗಿವಾಲಾ ಗ್ರಾಮದಲ್ಲಿ ನಡೆದ ಘಟನೆಯು 2 ಸಮುದಾಯಗಳ ನಡುವೆ ಹಿಂಸಾತ್ಮಕ ಘರ್ಷಣೆಗೆ (Communal Unrest) ಕಾರಣವಾಗಿದೆ. ಹಿಂದೂಪರ ಸಂಘಟನೆಗಳು ಕೆರಳಿದ್ದು, ಈ ಪ್ರದೇಶದಾದ್ಯಂತ ಉದ್ವಿಗ್ನತೆ ಉಂಟಾಗಿದೆ. ಇದನ್ನೂ ಓದಿ: ಚಂಡೀಗಢದಲ್ಲಿ ಹಾಡಹಗಲೇ ಭೀಕರ ಹತ್ಯೆ – ಮೆಡಿಕಲ್ ಶಾಪ್‌ಗೆ ನುಗ್ಗಿ ಕ್ಯಾಷಿಯರ್‌ಗೆ ಗುಂಡಿಕ್ಕಿ ಕೊಲೆ
ವಿವಾದ ಶುರುವಾಗಿದ್ದು ಹೇಗೆ?
ಪೊಲೀಸರ ಪ್ರಕಾರ, ಬೈರಾಗಿವಾಲಾ ಗ್ರಾಮದ ಸ್ಥಳೀಯ ನಿವಾಸಿ ವಿನೋದ್ ಮತ್ತು ಸಹೋದರರು ಸರ್ಕಾರಿ ಕೊಳವೆ ಬಾವಿ ಮೂಲಕ ತಮ್ಮ ಹೊಲಕ್ಕೆ ನೀರು ಹರಿಸುತ್ತಿದ್ದರು. ಈ ವೇಳೆ ನೆರೆಯ ರೈತ ಇಮ್ತಿಯಾಜ್ ಜೊತೆಗೆ ವಾಗ್ವಾದ ಶುರುವಾಗಿದೆ. ಇಮ್ತಿಯಾಜ್ ಹೊಲ್ಲಕ್ಕೆ ನೀರು ಹಾಯಿಸದಂತೆ ವಿನೋದ್‌ಗೆ ಗದರಿಸಿ, ಆವಾಜ್ ಹಾಕಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೊನೆಗೆ ಹಿಂಸಾಚಾರಕ್ಕೆ ತಿರುಗಿದೆ.
#WATCH | Dehradun, Uttarakhand: The residence of the accused who allegedly killed one person in Bairagiwala, Sahaspur after a violent clash erupted between two communities over a water dispute late tonight, is being demolished in the presence of police and administration.
— ANI UP/Uttarakhand (@ANINewsUP) June 14, 2026
ಓರ್ವ ಬಿಜೆಪಿ ನಾಯಕನ ಕೊಲೆ
ಹಿಂಸಾಚಾರದ ವೇಳೆ ಬೈರಾಗಿವಾಲಾದಲ್ಲಿ ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾ ಸಾಮಾಜಿಕ ಮಾಧ್ಯಮ ಸಂಯೋಜಕನ ಹತ್ಯೆಯಾಗಿದೆ. ಈ ಸಂಬಂಧ ಗಲಾಟೆ ನಡೆಸಿದ್ದ ಮೂವರು ಹಾಗೂ 25 ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಮತ್ತೊಂದು ಕಡೆ ಬಿಜೆಪಿ ನಾಯಕನ ಹತ್ಯೆಯಿಂದ ಉದ್ರಕ್ತಗೊಂಡ ಹಿಂದೂ ಸಂಘಟನೆಗಳು ಕಲ್ಲು ತೂರಾಟ ನಡೆಸಿ ಆರೋಪಿಗಳ ಮನೆಗಳನ್ನ ಧ್ವಂಸಗೊಳಿಸಿವೆ. ಕೋಪಗೊಂಡ ಗುಂಪು ಆರೋಪಿಗಳ ಕೆಲವು ವಸ್ತುಗಳನ್ನ ಸುಟ್ಟುಹಾಕಿವೆ. ಇದರಿಂದ ಹಿಂಸಾಚಾರ ಮತ್ತಷ್ಟು ಭುಗಿಲೆದ್ದಿದೆ. ಇದನ್ನೂ ಓದಿ: ದೀದಿಗೆ ಶಾಕ್ ಮೇಲೆ ಶಾಕ್ – ಟಿಎಂಸಿಗೆ ಮಾಜಿ ಸಚಿವ ರಾಜೀನಾಮೆ, ಅಮಿತ್ ಶಾ ಭೇಟಿಯಾದ ಪಕ್ಷದ ಎಂಪಿ

ಕಲ್ಲು ತೂರಾಟ ಮನೆಗೆ ಬೆಂಕಿ
ಬಿಜೆಪಿ ನಾಯಕನ ಹತ್ಯೆಯು ಸ್ಥಳೀಯ ನಿವಾಸಿಗಳಲ್ಲಿ ಮತ್ತಷ್ಟು ಆಕ್ರೋಶ ಹೆಚ್ಚಿಸುವಂತೆ ಮಾಡಿದೆ. ತಡರಾತ್ರಿ ವರೆಗೂ ರಸ್ತೆ ತಡೆದು ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಉದ್ರಿಕ್ತರ ಗುಂಪೊಂದು ಆರೋಪಿಗಳ ಮನೆ ಮೇಲೆ ಕಲ್ಲುತೂರಾಟ ನಡೆಸಿ, ಒಂದು ಮನೆಗೆ ಬೆಂಕಿಯನ್ನೂ ಹಚ್ಚಿವೆ. ಇದನ್ನೂ ಓದಿ: ಭಯೋತ್ಪಾದಕರ ಪೋಷಕರಿಗೆ ಸಿಂಧೂ ನದಿ ನೀರು ಕೊಡಲ್ಲ: ಪಾಕ್‌ಗೆ ರಾಜನಾಥ್ ಸಿಂಗ್ ಖಡಕ್ ಎಚ್ಚರಿಕೆ

ಸದ್ಯ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಕಠಿಣ ಕ್ರಮ ಕೈಗೊಳ್ಳುತ್ತಿರುವ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಿದೆ. ಆದಾಗ್ಯೂ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ.
