Thursday, 22nd August 2019

ದುಂದು ವೆಚ್ಚ – ಸಂಸದರ ಸಭೆಯ ಸ್ಥಳ ಬದಲಾಯಿಸಿದ ಸಿಎಂ

ಬೆಂಗಳೂರು: ದುಂದು ವೆಚ್ಚದ ಹಿನ್ನೆಲೆ ರಾಜ್ಯದ ಸಂಸದರೊಂದಿಗಿನ ಸಭೆಯ ಸ್ಥಳವನ್ನು ಸಿಎಂ ಯಡಿಯೂರಪ್ಪ ಬದಲಾಯಿಸಿದ್ದು, ದೆಹಲಿಯ ಖಾಸಗಿ ಹೋಟೆಲ್‍ನಲ್ಲಿ ನಿಗದಿಯಾಗಿದ್ದ ಸಭೆಯನ್ನು ಕರ್ನಾಟಕ ಭವನದಲ್ಲೇ ನಡೆಸಲು ತೀರ್ಮಾನಿಸಿದ್ದಾರೆ.

ಆ.6 ರಂದು ಮುಖ್ಯಮಂತ್ರಿ ಯಡಿಯೂರಪ್ಪನವರು ದೆಹಲಿಯಲ್ಲಿ ರಾಜ್ಯದ ಸಂಸದರೊಂದಿಗಿನ ಸಭೆ ನಡೆಸಲಿದ್ದು, ಇದಕ್ಕಾಗಿ ದೆಹಲಿಯ ಲೀಲಾ ಪ್ಯಾಲೇಸ್‍ನಲ್ಲಿ ಸ್ಥಳ ನಿಗದಿ ಪಡಿಸಲಾಗಿತ್ತು. ದುಂದು ವೆಚ್ಚದ ಹಿನ್ನಲೆ ಇದೀಗ ಸಭೆಯ ಸ್ಥಳವನ್ನು ಬದಲಾಯಿಸಲಾಗಿದ್ದು, ಕರ್ನಾಟಕ ಭವನದಲ್ಲಿ ಸಭೆ ನಡೆಸಲಿದ್ದಾರೆ.

ಕೇಂದ್ರ ಸರ್ಕಾರದಿಂದ ಬರಬೇಕಾಗಿರುವ ಅನುದಾನದ ಕುರಿತು ಚರ್ಚಿಸಲು ಸಿಎಂ ರಾಜ್ಯ ಸರ್ವಪಕ್ಷಗಳ ಸಂಸದರ ಸಭೆ ಕರೆದಿದ್ದರು. ಆದರೆ, ಸಭೆಯನ್ನು ದೆಹಲಿಯ ದಿ ಲೀಲಾ ಪ್ಯಾಲೇಸ್‍ನಲ್ಲಿ ಆಯೋಜಿಸಿದ್ದಕ್ಕೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಹೀಗಾಗಿ ಸಭೆಯ ಸ್ಥಳವನ್ನು ಬಿಎಸ್‍ವೈ ಬದಲಾಯಿಸಿದ್ದಾರೆ. ಆಗಸ್ಟ್ 6 ರಂದು ಸಂಜೆ ಏಳು ಗಂಟೆಗೆ ಕರ್ನಾಟಕ ಭವನದಲ್ಲಿ ಬಿಎಸ್‍ವೈ ಸಭೆ ಕರೆದಿದ್ದಾರೆ.

Leave a Reply

Your email address will not be published. Required fields are marked *