Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಡಾ.ವಿಷ್ಣು ಸ್ಮಾರಕ ಉದ್ಘಾಟನೆಗೆ ಅಭಿಮಾನಿಗಳು ಸಜ್ಜು : 300 ವಾಹನ ಜಾಥಾ, 100 ಕಟೌಟ್, ಸಾವಿರ ದೀಪೋತ್ಸವ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಡಾ.ವಿಷ್ಣು ಸ್ಮಾರಕ ಉದ್ಘಾಟನೆಗೆ ಅಭಿಮಾನಿಗಳು ಸಜ್ಜು : 300 ವಾಹನ ಜಾಥಾ, 100 ಕಟೌಟ್, ಸಾವಿರ ದೀಪೋತ್ಸವ

Cinema

ಡಾ.ವಿಷ್ಣು ಸ್ಮಾರಕ ಉದ್ಘಾಟನೆಗೆ ಅಭಿಮಾನಿಗಳು ಸಜ್ಜು : 300 ವಾಹನ ಜಾಥಾ, 100 ಕಟೌಟ್, ಸಾವಿರ ದೀಪೋತ್ಸವ

Public TV
Last updated: January 27, 2023 1:27 pm
Public TV
Share
2 Min Read
FotoJet 76
SHARE

ಕನ್ನಡದ ಮೇರುನಟ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಜನವರಿ 29ರಂದು ಲೋಕಾರ್ಪಣೆ ಆಗುತ್ತಿದ್ದು, ಅಭಿಮಾನಿಗಳು ಸರ್ವರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ. ಸರಕಾರವು ಸ್ಮಾರಕ ಉದ್ಘಾಟನೆಯನ್ನು ಕೇವಲ ಸರಕಾರಿ ಕಾರ್ಯಕ್ರಮದಂತೆ ಹಮ್ಮಿಕೊಂಡಿದ್ದರೆ, ವಿಷ್ಣುಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಅಸಂಖ್ಯಾತ ಅಭಿಮಾನಿಗಳು ಜಾತ್ರೆಯ ರೀತಿಯಲ್ಲಿ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

FotoJet 4 32

ಈಗಾಗಲೇ ಸರ್ವ ರೀತಿಯಲ್ಲೂ ಅಭಿಮಾನಿಗಳು ಸ್ಮಾರಕ ಲೋಕಾರ್ಪಣೆಗೆ ರೆಡಿಯಾಗಿದ್ದು, ಬೆಂಗಳೂರು ಮೈಸೂರು ರಸ್ತೆಯಲ್ಲಿ ವಿಷ್ಣುವರ್ಧನ್ ಅವರ ಕಟೌಟ್ ಗಳು ರಾರಾಜಿಸುತ್ತಿವೆ. ರಾಜ್ಯಾದ್ಯಂತ ಗೋಡೆಗಳ ಮೇಲೆ ವಿಷ್ಣುವರ್ಧನ್ ಸ್ಮಾರಕದ  ಪೋಸ್ಟರ್ ಅಂಟಿಸಲಾಗಿದೆ. ಇಷ್ಟೇ ಅಲ್ಲದೇ ಹತ್ತು ಹಲವು ಕಾರ್ಯಕ್ರಮಗಳನ್ನು ಜನವರಿ 29 ರ ಬೆಳಗ್ಗೆಯಿಂದ ವಿಷ್ಣುಸೇನಾ ಸಮಿತಿಯ ಸದಸ್ಯರು ಹಮ್ಮಿಕೊಂಡಿದ್ದಾರೆ. ಇದನ್ನೂ ಓದಿ: ತೀವ್ರ ಎದೆನೋವಿನಿಂದ ಬಾಲಿವುಡ್ ನಟ ಅನ್ನು ಕಪೂರ್ ಆಸ್ಪತ್ರೆಗೆ ದಾಖಲು

FotoJet 2 49

ವಿಷ್ಣುವರ್ಧನ್ ಅವರ ಸ್ಮಾರಕ ಉದ್ಘಾಟನೆಗೆ ವಾಹನ ಜಾಥಾ, ಕುಂಭಮೇಳ, ದೀಪೋತ್ಸವ, ಜಾನಪದ ಮೇಳ, ಕಟೌಟ್ ಜಾತ್ರೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ. ಜನವರಿ 29ರ ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಬಳಿ ಅಭಿಮಾನಿಗಳು ಒಟ್ಟಾಗಿ ಸೇರಲಿದ್ದು, ಅಲ್ಲಿಂದ 6.30ಕ್ಕೆ ವಾಹನ ಜಾಥಾ ನಡೆಯಲಿದೆ. ಬೆಂಗಳೂರು ಮೈಸೂರು ಮಧ್ಯೆ ಇರುವಂತಹ ಅಭಿಮಾನಿಗಳು ತಮ್ಮ ಊರಿನ ಹತ್ತಿರದ ಹೈವೆಗಳಲ್ಲಿ ಬಂದು ಜೊತೆಯಾಗಲಿದ್ದಾರೆ ಎಂದಿದ್ದಾರೆ.

FotoJet 1 57

ಒಟ್ಟು ನೂರು ಕಟೌಟ್ ಗಳು ಸ್ಮಾರಕದ ಉದ್ಘಾಟನೆಗಾಗಿಯೇ ಸಿದ್ಧಗೊಂಡಿವೆ. ಅವುಗಳು ಬೆಂಗಳೂರಿನಿಂದ ಮೈಸೂರುವರೆಗೂ ಮತ್ತು ಸ್ಮಾರಕದ ಹತ್ತಿರವೂ ತಲೆಯೆತ್ತಿ ನಿಲ್ಲಲಿವೆ. ಈಗಾಗಲೇ ಹಲವು ಕಡೆ ದುಂಡನೆಯ ಕಟೌಟ್ ಗಳನ್ನು ನಿಲ್ಲಿಸಲಾಗಿದೆ. ಜನವರಿ 29ರಂದು ವಾಹನ ಇಲ್ಲದವರಿಗಾಗಿಯೇ ಒಟ್ಟು ಹತ್ತು ಬಸ್ ಗಳನ್ನು ಆಯೋಜನೆ ಮಾಡಲಾಗಿದೆ. ಐದು ಬಸ್ ಗಳಲ್ಲಿ ಕುಂಭ ಹೊರುವ ಮತ್ತು ದೀಪೋತ್ಸವದಲ್ಲಿ ಭಾಗಿ ಆಗುವ ಹೆಣ್ಣುಮಕ್ಕಳಿಗೆ ಮೀಸಲಿಡಲಾಗಿದೆ. ಇನ್ನೂ ಐದು ಬಸ್ ಗಳು ವಾಹನ ಇಲ್ಲದವರಿಗಾಗಿ ಕಾದಿರುತ್ತವೆ.

FotoJet 3 40

ಎಲ್ಲರೂ ಮೈಸೂರಿನಲ್ಲಿ ಒಟ್ಟಾಗಿ ಅಲ್ಲಿಂದ ಮೂರು ಕೀಲೋ ಮೀಟರ್ ಜಾಥಾ ಹಮ್ಮಿಕೊಂಡು ಸ್ಮಾರಕ ತಲುಪಲಾಗುತ್ತದೆ. ಈ ಜಾಥಾದಲ್ಲಿ ವಿಷ್ಣುವರ್ಧನ್ ಅವರ ಗೀತೆಗಳು, ಜಾನಪದ ನೃತ್ಯ, ಜಾನಪದ ಕಲೆಗಳನ್ನು ಬಿಂಬಿಸುವಂತಹ ಯೋಜನೆ ಸಿದ್ಧವಾಗಿದೆ. ಕುಂಭಮೇಳದೊಂದಿಗೆ ಮಹಿಳೆಯರು ಕೂಡ ಜಾಥಾದಲ್ಲಿ ಹೆಜ್ಜೆ ಹಾಕಲಿದ್ದಾರೆ. ಜನವರಿ 29ರಂದು ಮೈಸೂರಿನಲ್ಲಿ ವಿಷ್ಣು ಜಾತ್ರೆಯೇ ನಡೆಯಲಿದೆ ಎಂದು ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

TAGGED:inaugurationMemorialVeerkaputra SrinivasVishnuvardhanಅಭಿಮಾನಿಉದ್ಘಾಟನೆವಿಷ್ಣುವರ್ಧನ್ವೀರಕಪುತ್ರ ಶ್ರೀನಿವಾಸ್ಸ್ಮಾರಕ
Share This Article
Facebook Whatsapp Whatsapp Telegram

Cinema news

Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post
Pooja Hegde Udupi
ಉಡುಪಿಯಲ್ಲಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ ಪೂಜಾ ಹೆಗ್ಡೆ
Cinema Districts Karnataka Latest Top Stories Udupi

You Might Also Like

Siddaramaiah 4
Bengaluru City

ಬೌರಿಂಗ್‌ ಆಸ್ಪತ್ರೆಯ ಗೋಡೆ ಕುಸಿದು 7 ಮಂದಿ ಸಾವು – ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

Public TV
By Public TV
6 minutes ago
TVK Vijay
Latest

Axis my India Exit Poll Results | ತನ್ನ ಚೊಚ್ಚಲ ಚುನಾವಣೆಯಲ್ಲೇ ವಿಜಯ್‌ ಮ್ಯಾಜಿಕ್ – ದಳಪತಿಗೆ ಪಟ್ಟ!

Public TV
By Public TV
17 minutes ago
exit polls
Latest

Exit Polls 2026 Live: ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ‌

Public TV
By Public TV
18 minutes ago
NDA To Get Second Straight Term In Puducherry With 16 20 Of 30 Seats Exit Poll
Latest

Exit Polls – ಪುದುಚೇರಿಯಲ್ಲಿ ಮತ್ತೆ ಎನ್‌ಡಿಎ ಅಧಿಕಾರಕ್ಕೆ

Public TV
By Public TV
23 minutes ago
pm modi 5
Latest

Exit Poll| ಪಶ್ಚಿಮ ಬಂಗಾಳದಲ್ಲಿ ಫಸ್ಟ್‌ ಟೈಂ ಬಿಜೆಪಿ ಅಧಿಕಾರಕ್ಕೆ

Public TV
By Public TV
1 hour ago
MK Stalin Vijay
Latest

Exit Poll Results 2026 | ತಮಿಳುನಾಡಿನಲ್ಲಿ ಮತ್ತೆ ಡಿಎಂಕೆಗೆ ಪಟ್ಟಾಭಿಷೇಕ – ದಳಪತಿಯ ಟಿವಿಕೆಗೆ ಹೀನಾಯ ಸೋಲು

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?