Wednesday, 17th July 2019

ಮದ್ವೆಯ ಒಂದು ವರ್ಷದ ಅನುಭವ ಹಂಚಿಕೊಂಡ ವಿರುಷ್ಕಾ

ಮುಂಬೈ: ಈ ಹಿಂದೆ ಜಾಹೀರಾತಿನ ಮೂಲಕವೇ ತಮ್ಮ ಪ್ರೀತಿಯನ್ನು ಅನಾವರಣಗೊಳಿಸಿದ್ದ ವಿರುಷ್ಕಾ, ಇಂದು ಅದೇ ಶೈಲಿಯಲ್ಲಿಯೇ ಮದುವೆಯ ಒಂದು ವರ್ಷದ ಅನುಭವವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

2017 ಡಿಸೆಂಬರ್ 11ರಂದು ಇಟಲಿಯಲ್ಲಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮದುವೆ ಆಗಿದ್ದರು. ಮುಂದಿನ ತಿಂಗಳು ಮದುವೆಯ ಮೊದಲ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಜೋಡಿ ಒಂದು ತಿಂಗಳ ಮೊದಲೇ ತಮ್ಮ ಜೀವನದಲ್ಲಾದ ಬದಲಾವಣೆಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ. ಜಾಹೀರಾತಿನಲ್ಲಿ ಜೊತೆಯಾಗಿ ಕಾಣಿಸಿಕೊಂಡಿರುವ ವಿರುಷ್ಕಾ ಮದುವೆ ಸೆಟ್ ನಲ್ಲಿ ನವಜೋಡಿಗೆ ಸಾಂಸರಿಕ ಸಲಹೆಗಳನ್ನು ನೀಡಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಮದುವೆ ಮುಂಚೆ ತಿಂಗಳಲ್ಲಿ 15 ದಿನ ಅಡುಗೆ ಮಾಡ್ತೀನಿ ಅಂತಾ ಮಾತು ಕೊಡ್ತಾರೆ. ಸರದಿ ಬಂದಾಗ ಹೋಟೆಲ್ ನಿಂದ ಊಟ ಆರ್ಡರ್ ಮಾಡ್ತಾರೆ ಅಂತಾ ಅನುಷ್ಕಾ ಪತಿ ಬಗ್ಗೆ ಆರೋಪ ಮಾಡ್ತಾರೆ. ಇದಕ್ಕೆ ಉತ್ತರಿಸುವ ವಿರಾಟ್, ಮದುವೆ ಆದ ಮೇಲೆ ಟಿವಿ, ಎಸಿ ಮತ್ತು ಜೀವನದ ರಿಮೋಟ್ ಎಲ್ಲವೂ ನಮ್ಮ ಕೈಯಿಂದ ತಪ್ಪಿ ಹೋಗುತ್ತದೆ ಅಂತಾ ಉತ್ತರಿಸಿದ್ದಾರೆ.

ಬೆಳಗ್ಗೆ 5 ಗಂಟೆಗೆ ಎದ್ದು ಎಲ್ಲೆಂದರಲ್ಲಿ ಟವೆಲ್, ಶೂ ಎಸೆದು, ಅತಿ ಕೆಟ್ಟ ಬೆಡ್ ಕಾಫಿ ಕುಡಿಸ್ತಾನೆ ಅಂತಾ ಅನುಷ್ಕಾ ಹೇಳ್ತಾರೆ. ಕೇರಂನಲ್ಲಿ ಸೋತಾಗ ಅತ್ತು, ನಮಗೆ ಹೊಡಿತಾರೆ. ಆದ್ರೆ ಅಳುವಿನಲ್ಲಿಯೂ ತುಂಬಾ ಕ್ಯೂಟ್ ಆಗಿ ಕಾಣಿಸುತ್ತಾಳೆ ಎಂದು ವಿರಾಟ್ ಪತ್ನಿಯನ್ನ ಮುದ್ದು ಮಾತುಗಳಿಂದ ಓಲೈಸುತ್ತಾರೆ. ಈ ಎಲ್ಲ ತರ್ಲೆ ಮಾಡುತ್ತಾ ನನ್ನನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಾನೆ. ಇದಕ್ಕೆ ಪ್ರತಿಯಾಗಿ ವಿರಾಟ್, ಯಾವಾಗಲೂ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ.

ವಿರಾಟ್ ಕೊಹ್ಲಿ- ಅನುಷ್ಕಾ ಇಟಲಿಯ ಖಾಸಗಿ ರೆಸಾರ್ಟ್ ನಲ್ಲಿ ಪಂಜಾಬಿ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಇಟಲಿಯ ಟಸ್ಕನಿ ನಗರದ ‘ಬೋಗೋ ಫಿನೊಕಿಯೆಟೊ’ ಎಂಬ ದುಬಾರಿ ರೆಸಾರ್ಟ್ ನಲ್ಲಿ ದ್ರಾಕ್ಷಿ ಹಣ್ಣಿನ ತೋಟದ ನಡುವೆ ಇರುವ ಸ್ವರ್ಗದಂಥಹ ತಾಣದಲ್ಲಿ ವಿರಾಟ್ ಹಾಗೂ ಅನುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

Celebrating love everyday. 😊#SaathSaathHamesha Anushka Sharma

Virat Kohliさんの投稿 2018年11月19日月曜日

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply

Your email address will not be published. Required fields are marked *