– ಸಿನ್ಹಾಗಢ ಕೋಟೆ, ವರಂಧಾ ಘಾಟ್‌ನಲ್ಲೂ ಭೂಕೂಸಿತ – ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ
ಮುಂಬೈ: ಮಹಾರಾಷ್ಟ್ರದಲ್ಲಿ (Maharashtra) ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ನಾಲ್ಕು ದಿನಗಳಿಂದ ಭಾರೀ ಮಳೆ ಆಗಿದ್ದು, ಇವತ್ತು ಮಳೆ (Rain) ಇನ್ನಷ್ಟು ಜೋರಾಗಿದೆ. ಪುಣೆ ಹಾಗೂ ಥಾಣೆಯಲ್ಲಿ ಮಳೆಗೆ 5 ಮಂದಿ ಮೃತಪಟ್ಟಿದ್ದಾರೆ. ಮುಂಬೈನಲ್ಲಿ ಬೆಳಗ್ಗೆಯಿಂದಲೂ ವರುಣನ ಅಬ್ಬರ ಜೋರಾಗಿದ್ದು, ರಸ್ತೆಗಳಲ್ಲೇ ಕಾರುಗಳು, ಟ್ರಕ್‌ಗಳು ಮುಳುಗಡೆಯಾಗಿವೆ, ರಸ್ತೆಗಳೆಲ್ಲಾ ತುಂಬಿ ಹೋಗಿವೆ.
#BREAKING A 100×100 ft road stretch caved in on LBS Marg, Bhandup, amid heavy rain, swallowing a vehicle and collapsing trees near an excavation site. @mybmc and Fire Brigade responded.#MumbaiRain #BhandupRoadCaveIn #MumbaiTraffic pic.twitter.com/adZNRfk6Bn
— jarvis ☠️ (@Vishii14) July 4, 2026
ಮುಂಬೈನಲ್ಲಿ ಮಳೆಯಿಂದಾದ ಅವಾಂತರಗಳ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿವೆ. ಭಾರತದ ಹೆಬ್ಬಾಗಿಲು ಎಂಬ ಖ್ಯಾತಿ ಪಡೆದ ʻಗೇಟ್ ವೇ ಆಫ್ ಇಂಡಿಯಾʼ ಬಳಿ ಭಾರೀ ಪ್ರಮಾಣದಲ್ಲಿ ಉಬ್ಬರವಿಳಿತ ಕಂಡುಬಂದಿದೆ. ನೀರಿನ ಅಲೆಗಳು ಗೇಟ್ ವೇ ಆಫ್ ಇಂಡಿಯಾಕ್ಕೆ ಅಪ್ಪಳಿಸುತ್ತಿರುವುದು ವಿಡಿಯೋನಲ್ಲಿ ತೋರಿಸಿದೆ. ಇದನ್ನೂ ಓದಿ: ಜು.20 ರಿಂದ ಸಂಸತ್ ಮುಂಗಾರು ಅಧಿವೇಶನ – ನೀಟ್, ಮಹಿಳಾ ಮೀಸಲಾತಿ ಸೇರಿ ಹಲವು ಮಹತ್ವದ ವಿಷಯಗಳ ಚರ್ಚೆ ಸಾಧ್ಯತೆ
#Mumbairain
Waterlogging on Andheri-Ghatkopar Road near Sakinaka pic.twitter.com/pjMqcz4ecZ— Raju Shinde (@RajuShinde09) July 4, 2026
ಮಳೆ ನೀರಿನಿಂದಾಗಿ ಹಲವೆಡೆ ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ವಸಾಯ್ ಹಾಗೂ ನವಿ ಮುಂಬೈನಲ್ಲಿ ರಸ್ತೆಗಳು ಸಂಪೂರ್ಣ ಮುಚ್ಚಿಕೊಂಡಿದ್ದು, ವಾಹನ ಸವಾರರು ಪರದಾಡಿದ್ದಾರೆ. ಭಾಂಡಪ್‌ನ ಸೋನಾಪುರ ಪ್ರದೇಶದಲ್ಲಿ ನಿರಂತರ ಮಳೆಯಿಂದ ರಸ್ತೆಯ ಒಂದು ಭಾಗವೇ ಕುಸಿದು ಪ್ರಯಾಣಿಕರಲ್ಲಿ ಸುರಕ್ಷತೆ ಬಗ್ಗೆ ಕಳವಳ ಹುಟ್ಟುಹಾಕಿದೆ. ಮತ್ತೊಂದು ಘಟನೆಯಲ್ಲಿ ರಸ್ತೆಯಲ್ಲಿ ನಿಂತಿದ್ದ ವಾಹನವೊಂದು ಮಳೆಯಿಂದ ಕುಸಿದ ರಸ್ತೆಗೆ ಬಿದ್ದಿದೆ. ಆದಾಗ್ಯೂ, ಈ ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.
#Maharashtra #Rain #Mumbairain @rushikesh_agre_ @TawdeRitu @rushikesh_agre_ @mumbaimatterz @mybmc #MumbaiRains
Mumbai Rains be like…⛈️🌧️☔
Situation rn Bhandup Asian paints LBS road, Mulund pic.twitter.com/IkNc2Rs6Hh— sarika dhoka (@DhokaSarika) July 4, 2026
ಇನ್ನೂ ಥಾಣೆ ಮತ್ತು ಪಾಲ್ಘರ್ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, ವಿದ್ಯುತ್ ಕಂಬಗಳು, ಭಾರೀ ಗಾತ್ರದ ಮರಗಳು ಹಾನಿಗೊಳಗಾಗಿವೆ. ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ತಗ್ಗು ಪ್ರದೇಶಗಳಿಗೂ ನೀರು ನುಗ್ಗಿ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ಭಾನುವಾರವೂ (ಜು.5) ಮಳೆಯ ಆರ್ಭಟ ಮುಂದುವರಿಯುವುದರಿಂದ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಇದನ್ನೂ ಓದಿ: ರಾಮಮಂದಿರದಲ್ಲಿ ಪ್ರತಿನಿತ್ಯ 6-8 ಲಕ್ಷ ರೂ. ದೇಣಿಗೆ ಲೂಟಿ – ಬ್ಯಾಂಕ್ ಅಂಕಿ ಅಂಶಗಳಲ್ಲಿ ಸತ್ಯ ಬಯಲು
