– ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ ಸಚಿವರು
ಕಾರವಾರ : ಆರೋಗ್ಯ ಸಚಿವ ಯು.ಟಿ.ಖಾದರ್(U T Khader) ಅವರ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ(Road Accident) ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಕನ್ನಡ(Uttara Kannada) ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ.
ಅಂಕೋಲಾದ ವರದರಾಜ್ ಹೋಟೆಲ್ ಸಮೀಪ ಈ ಅಪಘಾತ ಸಂಭವಿಸಿದೆ. ಕಾರವಾರದಿಂದ ಉಡುಪಿ ಕಡೆಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಅವರನ್ನು ಬೆಂಗಾವಲು ವಾಹನಗಳೊಂದಿಗೆ ಕರೆದೊಯ್ಯುವ ವೇಳೆ ಸ್ಕೂಟಿ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಅಲಗೇರಿ ಮೂಲದ ಸಂದೀಪ್ ನಾಯಕ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತವಾಗುತ್ತಿದ್ದಂತೆಯೇ ಸಚಿವ ಯು.ಟಿ.ಖಾದರ್ ಅವರು ಸ್ವತಃ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ.ಇದನ್ನೂ ಓದಿ: ತನ್ನ ಮೇಲೆ ವಿಶ್ವಾಸವಿಲ್ಲದ ರಾಜಕಾರಣಿಯೇ ಜಾತಿಯ ಆಶ್ರಯ ಪಡೆಯೋದು: ಸಂಸದ ಸುಧಾಕರ್
ಗಾಯಾಳು ಸಂದೀಪ್ ನಾಯಕ್ ಅವರಿಗೆ ಅಂಕೋಲಾ ಪಟ್ಟಣದ ಆರ್ಯ ಮೆಡಿಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ರಾಮಮಂದಿರದಲ್ಲಿ ಪ್ರತಿನಿತ್ಯ 6-8 ಲಕ್ಷ ರೂ. ದೇಣಿಗೆ ಲೂಟಿ – ಬ್ಯಾಂಕ್ ಅಂಕಿ ಅಂಶಗಳಲ್ಲಿ ಸತ್ಯ ಬಯಲು
