BollywoodCinemaLatestMain Post

ಟಾಪ್‌ಲೆಸ್ ಅವತಾರದಲ್ಲಿ ಉರ್ಫಿ ಜಾವೇದ್: ನಟಿಯ ಹೊಸ ವಿಡಿಯೋ ವೈರಲ್

ಬಾಲಿವುಡ್ ಬ್ಯೂಟಿ ಉರ್ಫಿ ಜಾವೇದ್ ಸಿನಿಮಾಗಳ ವಿಚಾರವಾಗಿ ಸುದ್ದಿ ಆಗೋದಕ್ಕಿಂತ ಬೋಲ್ಡ್ ಫೋಟೋ ಮತ್ತು ವಿಡಿಯೋಸ್‌ಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾ ಸೆನ್ಸೆಷನಲ್ ಸ್ಟಾರ್ ಆಗಿದ್ದಾರೆ. ದಿನಕ್ಕೊಂಡು ವೇಷ ಬದಲಿಸಿಕೊಂಡು ನಾನಾ ಅವತಾರಗಳ ಮೂಲಕ ಸದ್ದು ಮಾಡುತ್ತಾ ಟ್ರೋಲಿಗರ ಕಣ್ಣಿಗೆ ಗುರಿಯಾಗಿದ್ದಾರೆ.

ಟ್ರೋಲಿಗರ ಕೈ ಇವರು ಸಿಕ್ಕಿದ್ದಾರೋ ಅಥವಾ ಇವರೇ ಟ್ರೋಲಿಗರ ಕೈ ಸಿಗ್ತಿದ್ದಾರೋ ಗೊತ್ತಿಲ್ಲ.ಈವರೆಗೂ ತುಂಡುಡುಗೆಯಾದರೂ ತೊಡುತ್ತಿದ್ದರು ಈಗ ಇನ್ನೂ ಅಪ್‌ಡೇಟ್ ಆಗಿದ್ದಾರೆ. ಕಳೆದ ಬಾರಿ ಒಳ ಉಡುವು ಕಾಣುವಂತೆ ಪ್ಲಾಸ್ಟಿಕ್ ಕವರ್‌ನಿಂದ ಡಿಸೈನ್ ಮಾಡಿಸಿ, ಅದರ ಫೋಟೋಶೂಟ್ ಸಖತ್ ವೈರಲ್ ಆಗಿತ್ತು. ಈಗ ಉರ್ಫಿ ಟಾಪ್‌ಲೆಸ್ ಅವತಾರದಲ್ಲಿ ಬಂದಿದ್ದಾರೆ. ಈಗ ಬಾರಿ ವೈರಲ್ ಆಗ್ತಿದೆ.

ಈ ಬಾರಿ ಇನ್ನೂ ಉರ್ಫಿ ಜಾವೇಧ ಹೆಜ್ಜೆ ಮುಂದೆ ಹೋಗಿ ಅರೆನಗ್ನ ಟಾಪ್‌ಲೆಸ್ ಲುಕ್‌ನಲ್ಲಿರೋ ವಿಡಿಯೋವನ್ನ ಶೇರ್ ಮಾಡಿದ್ದಾರೆ. ಬರೀ ಹೂವುಗಳ ಡಿಸೈನ್ ಇರುವ ಟಾಪ್‌ಲೆಸ್‌ನಲ್ಲಿರೋ ವಿಡಿಯೋ ಶೇರ್ ಮಾಡಿದ್ದಾರೆ. ಒಂದಿಷ್ಟು ನೆಟ್ಟಿಗರು ಇದು ಯಾವ ತರಹದ ಡ್ರೇಸ್ ಅಂತಾ ಕೇಳಿದ್ರೆ, ಇನ್ನೂ ಕೆಲವರು ಹೀಗಾ ಬರೋದು ಅಂತಾ ಕಿಡಿಕಾರಿದ್ದಾರೆ. ಇನ್ನು ಇವರ ಕಾಸ್ಟ್ಯೂಮ್‌ ಡಿಸೈನರ್ ಯಾರಪ್ಪಾ ಅಂತಾ ಪ್ರಶ್ನಿಸುತ್ತಿದ್ದಾರೆ. ಈ ವಿಡಿಯೋ ಕೂಡ ಸಖತ್ ಟ್ರೋಲ್ ಆಗ್ತಿದೆ.‌ ಇದನ್ನೂ ಓದಿ: ಸೀಮಂತದ ಸಂಭ್ರಮದಲ್ಲಿ ನಟಿ ಸಂಜನಾ ಗಲ್ರಾನಿ

 

View this post on Instagram

 

A post shared by Urrfii (@urf7i)

ಇವು ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳದ ಉರ್ಫಿ ಫೋಟೋಶೂಟ್ ಹೊಸ ವಿಡಿಯೋ ಅಂತಾ ಆರಾಮಾಗಿದ್ದಾರೆ. ದಿನಕ್ಕೊಂದು ತರಹ ಹೊಸ ವೇಷದಲ್ಲಿ ಪ್ರತ್ಯಕ್ಷವಾಗೋ ಉರ್ಫಿ ಅವತಾರಕ್ಕೆ ಅಭಿಮಾನಿಗಳು ಉಫ್ ಅಂತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಯಾವ ಗೆಟಪ್‌ನಲ್ಲಿ ಬರಬಹುದು ಅಂತಾ ಕಾದುನೋಡಬೇಕಿದೆ.

Leave a Reply

Your email address will not be published.

Back to top button