Bengaluru CityCinemaDistrictsKarnatakaLatestMain PostSandalwood

ಸೀಮಂತದ ಸಂಭ್ರಮದಲ್ಲಿ ನಟಿ ಸಂಜನಾ ಗಲ್ರಾನಿ

ಚಂದನವನಕ್ಕೆ `ಗಂಡ ಹೆಂಡತಿ’ ಚಿತ್ರದ ಮೂಲಕ ಲಗ್ಗೆಯಿಟ್ಟ ನಟಿ ಸಂಜನಾ ಗಲ್ರಾನಿ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷಾ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆಷ್ಟೇ ತಾವು ಗರ್ಭೀಣಿಯಾಗಿರುವ ವಿಚಾರವನ್ನ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ಈಗ ಸಂಜನಾ ತಮ್ಮ ಸೀಮಂತದ ಶಾಸ್ತ್ರದ ಸಂಭ್ರಮದ ಕ್ಷಣಗಳ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ  ಶೇರ್ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಭಾರೀ ವೈರಲ್ ಆಗಿದೆ.

`ಗಂಡ ಹೆಂಡತಿ’, ಮೈಲಾರಿ, `ದಂಡುಪಾಳ್ಯ 2′ ಸಿನಿಮಾಗಳ ಮೂಲಕ ಗಮನ ಸೆಳೆದ ನಟಿ, ಅಜೀಜ್ ಪಾಷಾ ಅವರೊಂದಿಗೆ ಸಂಜನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನು ಸಿನಿಮಾಗಳ ಜತೆಗೆ ಇನ್ಸ್ಟಾಗ್ರಾಂನಲ್ಲೂ ಆಕ್ಟೀವ್ ಆಗಿದ್ದಾರೆ ಒಂದಲ್ಲಾ ಒಂದು ವಿಡಿಯೋ ಮತ್ತು ಫೋಟೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದನ್ನೂ ಓದಿ: ಡಾ.ರಾಜ್ ಮೊಮ್ಮಗಳ `ಕಾಲಾಪತ್ಥರ್’ ಚಿತ್ರದ ಫಸ್ಟ್ ಲುಕ್ ರಿವೀಲ್: ಗಂಗಾ ಪಾತ್ರದಲ್ಲಿ ಧನ್ಯ ಮಿಂಚಿಂಗ್

ದಕ್ಷಿಣ ಭಾರತದ ಶೈಲಿಯಲ್ಲಿ ಪತಿ ಅಜೀಜ್ ಪಾಷಾ ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಸೀಮಂತ ಶಾಸ್ತ್ರ ನಡೆದಿದೆ. ಗರ್ಭಾವಸ್ಥೆಯ ಒಂಭನೇ ತಿಂಗಳಿಗೆ ಪ್ರವೇಶಿಸುತ್ತಿದ್ದು, ನನ್ನ ಮಗು ನಮ್ಮ ಮನೆ ಪ್ರವೇಶಿಸಲು ಒಂದು ತಿಂಗಳು ಬಾಕಿಯಿದೆ. ತುಂಬಾ ಪ್ರೀತಿ ಮತ್ತು ವಾತ್ಸಲ್ಯಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಇನ್ಸ್ಟಾಗ್ರಾಂನಲ್ಲಿ ಖಾತೆಯಲ್ಲಿ ಸೀಮಂತದ ಫೋಟೋಗಳು ಶೇರ್ ಮಾಡಿದ್ದಾರೆ. ನೆಚ್ಚಿನ ನಟಿಯ ಖುಷಿ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

Leave a Reply

Your email address will not be published.

Back to top button