Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಎಷ್ಟು ವರ್ಷ ಇಲ್ಲಿ ಗೂಟ ಹೊಡ್ಕೊಂಡು ಇರುತ್ತಾರೆ ನೋಡ್ತೀನಿ- ಉಮಾಪತಿ ತಿರುಗೇಟು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಎಷ್ಟು ವರ್ಷ ಇಲ್ಲಿ ಗೂಟ ಹೊಡ್ಕೊಂಡು ಇರುತ್ತಾರೆ ನೋಡ್ತೀನಿ- ಉಮಾಪತಿ ತಿರುಗೇಟು

Cinema

ಎಷ್ಟು ವರ್ಷ ಇಲ್ಲಿ ಗೂಟ ಹೊಡ್ಕೊಂಡು ಇರುತ್ತಾರೆ ನೋಡ್ತೀನಿ- ಉಮಾಪತಿ ತಿರುಗೇಟು

Public TV
Last updated: February 20, 2024 7:43 pm
Public TV
Share
3 Min Read
darshan 2 4
SHARE

‘ಕಾಟೇರ’ (Kaatera) ಸಕ್ಸಸ್ ಸಂಭ್ರಮದಲ್ಲಿ ನಟ ದರ್ಶನ್ (Darshan) ನೀಡಿರುವ ಹೇಳಿಕೆ ಇದೀಗ ಭಾರೀ ಸದ್ದು ಮಾಡ್ತಿದೆ. ಅಯ್ಯೋ ತಗಡೇ ಎಂದು ಗುಮ್ಮಿದ ದರ್ಶನ್‌ಗೆ ಇದೀಗ ಎಷ್ಟು ವರ್ಷ ಇಲ್ಲಿ ಗೂಟ ಹೊಡ್ಕೊಂಡು ಇರುತ್ತಾರೆ ನೋಡ್ತೀನಿ ಎಂದು ಉಮಾಪತಿ ಕೌಂಟರ್ ಕೊಟ್ಟಿದ್ದಾರೆ. ಇದನ್ನೂ ಓದಿ:ಅಯ್ಯೋ ತಗಡೇ ಎಂದು ಉಮಾಪತಿಗೆ ಗುಮ್ಮಿದ ದರ್ಶನ್‌

darshan 12

‘ಕಾಟೇರ’ (Kaatera) ಟೈಟಲ್ ಕೊಟ್ಟಿದ್ದು ನಾನೇ ಎಂದು ಉಮಾಪತಿ ನೀಡಿರುವ ಹೇಳಿಕೆಯಿಂದ ಇಬ್ಬರ ನಡುವೆ ವಾಕ್ಸಮರ ಶುರುವಾಗಿದೆ. ದರ್ಶನ್ ಟಾಂಗ್‌ಗೆ ನಿರ್ಮಾಪಕ ಉಮಾಪತಿ ಉತ್ತರ ನೀಡಿದ್ದಾರೆ. ನಮ್ಮ ಜಗಳವನ್ನು ಕುಟುಂಬವು ಕೂಡ ನೋಡುತ್ತದೆ. ಫ್ಯಾಮಿಲಿಗೆ ಯಾವ ರೀತಿ ಎಫೆಕ್ಟ್ ಆಗುತ್ತೆ ಎಂಬುದರ ಬಗ್ಗೆ ಉಮಾಪತಿ ಮಾತನಾಡಿದ್ದಾರೆ.

darshan 1 8

ನಾನು ತಗಡು ವ್ಯಕ್ತಿ ಇರಬಹುದು ಆದರೆ ಅವರ ಲೈಫ್‌ಗೆ ನಾನು ವಾಚ್‌ಮ್ಯಾನ್ ಅಲ್ಲ. ಪದಗಳನ್ನು ಬಳಸುವಾಗ ಗಮನ ಇರಬೇಕು. ಸಾಯುವವರೆಗೂ ಯಾರು ನೋಡದೇ ಇರುವ ಸಕ್ಸಸ್ ಏನಲ್ಲ ಇದು. ಎಲ್ಲರೂ ನಾಳೆಗೆ ಮಣ್ಣಿಗೆ ಹೋಗಬೇಕು ಎಂದರು ಉಮಾಪತಿ. ಎಷ್ಟು ವರ್ಷ ಇಲ್ಲಿ ಗೂಟ ಹೊಡ್ಕೊಂಡು ಇರುತ್ತಾರೆ ನೋಡ್ತೀನಿ. ಸಿನಿಮಾ ಅಂತ ಬಂದಾಗ ನನ್ನ ಸಕ್ಸಸ್‌ನಲ್ಲಿ ದರ್ಶನ್, ಶ್ರೀಮುರಳಿ, ಚಿಕ್ಕಣ್ಣ, ಡೈರೆಕ್ಟರ್ ಕೃಷ್ಣ, ತರುಣ್ ಪಾಲಿದೆ. ಒಬ್ಬ ವ್ಯಕ್ತಿಯಿಂದ ಉಮಾಪತಿ ಬೆಳೆದಿಲ್ಲ. ನಾನು ಕಷ್ಟಪಟ್ಟು ಬೆಳೆದಿದ್ದೀನಿ. ಯಾಕೆಂದ್ರೆ ನಾನು ನಮ್ಮನೆ ದುಡ್ಡನ್ನು ಸಿನಿಮಾಗೆ ಹಾಕಿರೋದು. ಕಂಡವರ ದುಡ್ಡು ಹಾಕಿಲ್ಲ. ಗೌರವ ಅನ್ನೋದು ಪರಸ್ಪರ 2 ಕಡೆ ಇರಬೇಕು ಎಂದು ಉಮಾಪತಿ ಮಾತನಾಡಿದ್ದಾರೆ. ಈ ಮೂಲಕ ದರ್ಶನ್ ಅವರ ಪದಬಳಕೆಗೆ ಉಮಾಪತಿ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:ಮಾರ್ಚ್‌ 13ಕ್ಕೆ ‘ಗೂಗ್ಲಿ’ ನಟಿ ಕೃತಿ ಕರಬಂಧ ಮದುವೆ

ಅವರೆಲ್ಲಾ ದೊಡ್ಡವರು, ನಾವು ಚಿಕ್ಕವರು ಬಿಡಿ ಹೇಳಿಕೊಂಡು ಹೋಗಲಿ ಬಿಡಿ. ದರ್ಶನ್ ಅವರನ್ನು ಎದುರು ಹಾಕಿಕೊಂಡು ಬದುಕೋಕೆ ಆಗುತ್ತಾ? ಎಂದು ಉಮಾಪತಿ ಮಾತನಾಡಿದ್ದಾರೆ. ಕಾಟೇರ ರಿಜಿಸ್ಟರ್ ಮಾಡಿದ್ದೆ ನಾನು. ‘ಮದಗಜ’ ಸಮಯದಲ್ಲಿ ಎಲ್ಲರೂ ನನ್ನ ಮಿಸ್ ಲೀಡ್ ಮಾಡಿಬಿಟ್ಟರು. ಸಮಯ ಬಂದಾಗ ಎಲ್ಲದ್ದಕ್ಕೂ ನಾನು ಉತ್ತರ ಕೊಡುತ್ತೇನೆ. ನಾನು ಒಂದು ಜವಾಬ್ದಾರಿಯುತ ಸಮುದಾಯದ ನಾಯಕ. ನನ್ನನ್ನು ಇಲ್ಲಿಯವರೆಗೂ ಜನ ಬೆಳೆಸಿದ್ದಾರೆ ಎಂದು ಉಮಾಪತಿ ಮಾತನಾಡಿದ್ದಾರೆ.

‘ಕಾಟೇರ’ (Kaatera) ಐಡಿಯಾ ಕೊಟ್ಟಿದ್ದು ದರ್ಶನ್ (Darshan) ಆದರೆ ಅದು ನನ್ನ ಬ್ಯಾನರ್‌ನಲ್ಲಿ ರಿಜಿಸ್ಟರ್ ಆಗಿದ್ದು ಎಂದು ಉಮಾಪತಿ ಮಾತನಾಡಿದ್ದಾರೆ. ಇವತ್ತು ಇವರು ಏನೇ ಹೇಳಬಹುದು ಮುಂದೊಂದು ದಿನ ಸಮಯ ಪಾಠ ಕಲಿಸುತ್ತದೆ. ಜನ ನನಗೆ ಒಳ್ಳೆಯ ಸ್ಥಾನಮಾನ ಕೊಟ್ಟಿದ್ದಾರೆ. ಹೌದು ನಾನು ತಗಡೆ ಆದರೆ ಗುಮ್ಮಿಸಿಕೊಳ್ಳುವವನಲ್ಲ ಎಂದು ದರ್ಶನ್ ಉತ್ತರಕ್ಕೆ ಉಮಾಪತಿ ತಿರುಗೇಟು ನೀಡಿದ್ದಾರೆ. ದರ್ಶನ್ ಪದ ಬಳಕೆ ಮಾಡುವಾಗ ಜೋಪಾನವಾಗಿರಬೇಕು ಎಂದು ಉಮಾಪತಿ ಉತ್ತರ ಕೊಟ್ಟಿದ್ದಾರೆ.

darshan with tharun sudhir 1

ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ ಸಿನಿಮಾ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಈ ವೇಳೆ, ಹಿರಿಯ ನಟಿ ಶ್ರುತಿ, ನಾಯಕಿ ಆರಾಧನಾ ಸೇರಿದಂತೆ ತಂಡದ ಹಲವರಿಗೆ ಇಂದು (ಫೆ.20) ಪ್ರಶಸ್ತಿ ನೀಡಿ ಚಿತ್ರತಂಡ ಗೌರವಿಸಿದೆ. ಈ ವೇಳೆ, ಕಾಟೇರ ಟೈಟಲ್ ಕೊಟ್ಟಿದ್ದು ನಾನೇ ಎಂದ ನಿರ್ಮಾಪಕ ಉಮಾಪತಿಗೆ ದರ್ಶನ್ ಟಾಂಗ್ ಕೊಟ್ಟಿದ್ದಾರೆ. ಉಮಾಪತಿ ಆರೋಪಕ್ಕೆಲ್ಲಾ ದರ್ಶನ್ ಸ್ಪಷ್ಟನೆ ನೀಡಿದ್ದಾರೆ.

darshan

ಅಯ್ಯೋ ತಗಡೆ ಅಂದು ‘ರಾಬರ್ಟ್’ ಕತೆ ಕೊಟ್ಟಿದ್ದೆ ನಾವು. ಆದರೂ ಬುದ್ಧಿ ಕಲಿಯುತ್ತಿಲ್ಲ ಅಂದರೆ ಏನು ಹೇಳೋಣ. ಕಾಟೇರ ಎಂತಹ ಒಳ್ಳೆಯ ಕಥೆ ಯಾಕೆ ಈ ಸಿನಿಮಾ ಬಿಟ್ಟೆ ಎಂದು ದರ್ಶನ್ ಪ್ರಶ್ನಿಸಿದ್ದಾರೆ. ಬಳಿಕ ‘ಕಾಟೇರ’ ಟೈಟಲ್ ಹೇಳಿದ್ದು ಕೂಡ ನಾನು ಎಂದು ದರ್ಶನ್ ಮಾತನಾಡಿದ್ದಾರೆ. ಅಂದು ಚಿತ್ರದ ಟೈಟಲ್ ರಿಜಿಸ್ಟರ್ ಮಾಡಿಸುವಂತೆ ತರುಣ್ ಸುಧೀರ್‌ಗೆ ಹೇಳಿದ್ದೆ ಎಂದರು. ಬಳಿಕ ತರುಣ್ ಬಳಿಯೇ ದರ್ಶನ್ ಸ್ಪಷ್ಟನೆ ಕೊಡಿಸಿದ್ದರು.

Darshan 2

ಯಾಕಪ್ಪ, ಯಾವಾಗಲೂ ಬಂದು ನಮ್ಮ ಕೈಯಲ್ಲೇ ಗುಮ್ಮಿಸಿಕೊಳ್ತಿಯಾ? ಅಂತ ಉಮಾಪತಿಗೆ ದರ್ಶನ್ ಕುಟುಕಿದ್ದರು. ಈಗ ಎಲ್ಲೋ ಇದ್ದೀಯಾ ಚೆನ್ನಾಗಿ ಇರು. ತಪ್ಪು ಇದು ಅಂತ ದರ್ಶನ್ ಹೇಳಿದರು.

ಹಲವು ಸಂದರ್ಶನಗಳಲ್ಲಿ ದರ್ಶನ್ ಚಿತ್ರಕ್ಕೆ ‘ಕಾಟೇರ’ ಟೈಟಲ್ ಕೊಟ್ಟಿದ್ದು ನಾನೇ ಎಂದು ಉಮಾಪತಿ ಹೇಳಿದ್ದರು. ಇದಕ್ಕೆಲ್ಲ ಈಗ ದರ್ಶನ್ ಸಖತ್ ಆಗಿ ಟಾಂಗ್ ಕೊಟ್ಟಿದ್ದಾರೆ.

TAGGED:darshankaatera filmsandalwoodಕಾಟೇರ ಸಿನಿಮಾತರುಣ್ ಸುಧೀರ್ದರ್ಶನ್
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

DK Shivakumar 11
Latest

ಮುಸ್ಲಿಂ ನಾಯಕರಿಗೆ ಕಾಂಗ್ರೆಸ್‌ ಸಹಾಯ ಮಾಡಿದಷ್ಟು ಯಾರೂ ಮಾಡಿಲ್ಲ, ಮಾಡೋದಿಲ್ಲ: ಡಿಕೆಶಿ

Public TV
By Public TV
2 minutes ago
DK Shivakumar 1 1
Latest

ವಿನಯ್ ಕುಲಕರ್ಣಿ ತಪ್ಪು ಮಾಡಿಲ್ಲ ಅಂತ ಭಾವಿಸಿದ್ದೇನೆ: ಡಿಕೆಶಿ

Public TV
By Public TV
6 minutes ago
SR Mahesh
Districts

ಸ್ಥಳೀಯ ಸಂಸ್ಥೆ ಚುನಾವಣೆ ಮಾಡಲು ರಾಜ್ಯ ಸರ್ಕಾರಕ್ಕೆ ಭಯ: ಸಾರಾ ಮಹೇಶ್

Public TV
By Public TV
32 minutes ago
Vinay Kulkarni 2
Bengaluru City

ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ – ಶಾಸಕ ಸ್ಥಾನ ರದ್ದು

Public TV
By Public TV
1 hour ago
Raichur 1
Districts

ರಾಯಚೂರಿನಲ್ಲಿ ಬಿಸಿಲಿನ ಬೇಗೆ – 44.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲು

Public TV
By Public TV
2 hours ago
Vinay Kulkarni 1 1
Bengaluru City

ಯೋಗೀಶ್‌ ಗೌಡ ಕೊಲೆ ಕೇಸ್‌ – ವಿನಯ್‌ ಕುಲಕರ್ಣಿ ಸೇರಿ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?