– 38 ಅಂಶಗಳ ಒಪ್ಪಂದ ಜಾರಿಗೆ ಅವಾಮಿ ಕ್ರಿಯಾ ಸಮಿತಿ ಪಟ್ಟು
ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟು, ಬೆಲೆ ಏರಿಕೆ, ಹಣದುಬ್ಬರ, ದಬ್ಬಾಳಿಕೆ ಖಂಡಿಸಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಭಾನುವಾರ (ಇಂದು) ತೀವ್ರ ಸ್ವರೂಪ ಪಡೆದುಕೊಂಡಿತು.
ಈ ಪ್ರದೇಶಗಳಲ್ಲಿನ ನಿರ್ಬಂಧ ಕೊನೆಗೊಳಿಸುವುದು, ಸಂವಹನ ಸೌಲಭ್ಯ ಪುನಃಸ್ಥಾಪಿಸುವುದು, ಆಹಾರ ಮತ್ತು ಔಷಧಗಳ ನಿರಂತರ ಪೂರೈಕೆ ಖಚಿತಪಡಿಸುವುದು ಹಾಗೂ ಜೈಲಿನಲ್ಲಿರುವ ತಮ್ಮ ನಾಯಕರನ್ನು ಬಿಡುಗಡೆ ಮಾಡುವುದು ಸೇರಿದಂತೆ 38 ಅಂಶಗಳ ಒಪ್ಪಂದವನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ಪಾಕ್ ವಿರುದ್ಧ ಸಿಡಿದೆದ್ದ ಪಿಒಕೆ – ಏನಿದು ವಿವಾದ?
ڈڈیال انب کے مقام پر پرامن مظاہرین پر پولیس اور رینجرز کی شیلنگ اور فائرنگ
رینجرز کی فائرنگ سے ایک شخص شہید اور متعدد افراد زخمی۔#RightsMovementAJK#کشمیر_کی_آواز_بند_نہ_کرو#گولی_کیوں_چلائی pic.twitter.com/HEDANq9ZNM— PTI Azad Kashmir (@PTIAJK_Official) July 5, 2026
ಅನ್ಬಾರ್ ಪ್ರದೇಶದಲ್ಲಿ ಪೊಲೀಸರು ಮತ್ತು ಪಾಕಿಸ್ತಾನ ರೇಂಜರ್‌ಗಳು ಅಶ್ರುವಾಯು ಸಿಡಿಸಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ ಬಳಿಕ ಉದ್ವಿಗ್ನತೆ ಹೆಚ್ಚಾಯಿತು. ಗುಂಡಿನ ದಾಳಿಯಲ್ಲಿ ಓರ್ವ ಪ್ರತಿಭಟನಾಕಾರ ಸಾವನ್ನಪ್ಪಿದ್ದು, ಹಲವಾರು ಜನ ಗಾಯಗೊಂಡಿದ್ದಾರೆ. ವಿವಿಧ ಸ್ಥಳಗಳಲ್ಲಿ ನಡೆದ ಗುಂಡಿನ ದಾಳಿ ಮತ್ತು ಅಶ್ರುವಾಯು ಶೆಲ್ ದಾಳಿಯಲ್ಲಿ ನಾಲ್ವರು ಯುವಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಜಮ್ಮು ಮತ್ತು ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ (ಜೆಎಎಸಿ) ನೀಡಿದ್ದ ಕರೆ ಮೇರೆಗೆ ಇಂದು ಮುಜಫರಾಬಾದ್, ರಾವಲಕೋಟ್ ಮತ್ತು ಮಿರ್ಪುರದಂತಹ ಸ್ಥಳಗಳಲ್ಲಿ ಬೃಹತ್ ಜನಸಮೂಹ ಜಮಾಯಿಸಿತ್ತು. ದಡಿಯಾಲ್‌ನಲ್ಲಿ ಜನಸಮೂಹವು ಭದ್ರತಾ ಸಿಬ್ಬಂದಿಯನ್ನ ಹಿಮ್ಮೆಟ್ಟಿಸಿದ್ದಲ್ಲದೇ ಇಡೀ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಆದಾಗ್ಯೂ ಪಾಕಿಸ್ತಾನ ಈ ಬಗ್ಗೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ. ಇದನ್ನೂ ಓದಿ: ಪಿಒಕೆಯಲ್ಲಿ ಪಾಕ್ ಸೈನಿಕರಿಂದ ನರಮೇಧ – 30 ಪ್ರತಿಭಟನಾಕಾರರ ಸಾವು
ಜೆಎಎಸಿಯ 600 ಕಾರ್ಯಕರ್ತರ ಬಂಧನ
ಇನ್ನೂ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಹತ್ತಿಕ್ಕಲು ಮುಂದಾದ ಪಾಕ್ ಭದ್ರತಾ ಪಡೆ, ಜೆಎಎಸಿ ನಾಯಕ ಶೌಕತ್ ನವಾಜ್ ಮಿರ್, ಪ್ರಮುಖ ನಾಯಕರು ಮತ್ತು ಕಾರ್ಯಕರ್ತರನ್ನೊಳಗೊಂಡು 600 ಮಂದಿಯನ್ನು ಬಂಧಿಸಿ ವೀಕ್ಷಣಾ ಪಟ್ಟಿಯಲ್ಲಿರಿದೆ.
ಇನ್ನೂ ಈ ಪ್ರದೇಶದಲ್ಲಿ ಮಾಹಿತಿ ಸೋರಿಕೆ ತಡೆಯಲು ಹಾಗೂ ಪ್ರತಿಭಟನೆ ಸಂಘಟಿತವಾಗದಂತೆ ನೋಡಿಕೊಳ್ಳಲು ಪಾಕ್ ಸರ್ಕಾರ ಪಿಒಕೆ ನ ಅನೇಕ ಭಾಗಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿದೆ. ಇದನ್ನೂ ಓದಿ: ಪಿಒಕೆಯಲ್ಲಿ ಉಗ್ರರನ್ನು ಅಳಿಯಂದಿರಂತೆ ನಡೆಸಿಕೊಂಡು, ನಾಗರಿಕರ ಕಗ್ಗೊಲೆ ಮಾಡಲಾಗ್ತಿದೆ: ಮಾಜಿ ಪೊಲೀಸ್ ಅಧಿಕಾರಿ ಕಿಡಿ
