Connect with us

ಗುಡುಗು ಯತ್ನಾಳ್, ಮಿಂಚು ಯೋಗೇಶ್ವರ್ ಮಳೆ ಬಂದ್ಮೇಲೆ ತಣ್ಣಗಾಗ್ತಾರೆ: ಕೋಟ ವ್ಯಾಖ್ಯಾನ

ಗುಡುಗು ಯತ್ನಾಳ್, ಮಿಂಚು ಯೋಗೇಶ್ವರ್ ಮಳೆ ಬಂದ್ಮೇಲೆ ತಣ್ಣಗಾಗ್ತಾರೆ: ಕೋಟ ವ್ಯಾಖ್ಯಾನ

ಉಡುಪಿ: ರಾಜಕಾರಣದಲ್ಲಿ ಗುಡುಗು, ಸಿಡಿಲು ಮಿಂಚು ಬರುವುದು ಸಹಜ. ತಣ್ಣನೆಯ ಮಳೆ ಬಂದರೆ ವಾತಾವರಣ ತಿಳಿಯಾಗುತ್ತದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಯತ್ನಾಳ್-ಯೋಗೇಶ್ವರ್ ಬಿಜೆಪಿಯೊಳಗೆ ಅಪರಸ್ವರ ತೆಗೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಕೋಟ ಪ್ರತಿಕ್ರಿಯೆ ನೀಡಿದ್ದಾರೆ. ಸಣ್ಣಪುಟ್ಟ ಅಪಸ್ವರಗಳು ಬಂದರೆ ರಾಜ್ಯಾಧ್ಯಕ್ಷರು ಕರೆದು ತಿಳಿ ಹೇಳುತ್ತಾರೆ.

ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ನಳಿನ್ ಕುಮಾರ್ ಗಟ್ಟಿ ಧ್ವನಿಯಲ್ಲಿ ಹೇಳಿದ್ದಾರೆ. ಬಿಜೆಪಿಯೊಳಗೆ ಯಾವುದೇ ಗೊಂದಲಗಳಿಲ್ಲ. ರಾಷ್ಟ್ರಾಧ್ಯಕ್ಷರು, ರಾಜ್ಯಾಧ್ಯಕ್ಷರು, ಸಿಎಂ ಮತ್ತು ಸರ್ಕಾರಕ್ಕೆ ಯಾವ ಗೊಂದಲವೂ ಇಲ್ಲ. ದೇವರಾಜ ಅರಸು ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಸಿಎಂ ಸ್ಪಷ್ಟವಾಗಿ ಮಾತನಾಡಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹೈಕಮಾಂಡ್ ಕೊಟ್ಟ ಸಾಮಥ್ರ್ಯದಿಂದ ನಾನು ಮುಖ್ಯಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ. ನಾವೆಲ್ಲರೂ ಒಟ್ಟಾಗಿ ಒಂದಾಗಿ ಯಡಿಯೂರಪ್ಪನವರ ಜೊತೆ ನಿಂತಿದ್ದೇವೆ ಎಂದರು.

ಕರ್ನಾಟಕವನ್ನು ಕೊರೊನಾ ಮುಕ್ತ ಮಾಡುವುದು ಎಲ್ಲ ಶಾಸಕರು, ಸಂಸದರು ಮತ್ತು ಮುಖ್ಯಮಂತ್ರಿಗಳ ಗುರಿ. ಇದರ ಕಡೆಗೆ ನಮ್ಮ ಗಮನ ಎಂದು ಹೇಳಿದರು. ಶೇ.10ಕ್ಕಿಂತ ಕಡಿಮೆ ಪಾಸಿಟಿವಿಟಿ ರೇಟ್ ಇದ್ದಲ್ಲಿ ಲಾಕ್ ಡೌನ್ ಸಡಿಲಗೊಳಿಸಬಹುದಾ ಎಂದು ಯೋಚಿಸುತ್ತಿದ್ದೇವೆ. ಜನರ ಮೂಲಭೂತ ಸೌಕರ್ಯ ಒದಗಿಸುವುದಕ್ಕಾಗಿ ಈ ಸಡಿಲಿಕೆ ಸೀಮಿತವಾಗಲಿದೆ. ಅಧಿಕೃತವಾಗಿ ಸರ್ಕಾರ ಯಾವುದನ್ನೂ ಘೋಷಣೆ ಮಾಡಿಲ್ಲ. ಈ ಬಗ್ಗೆ ಸರ್ಕಾರದ ಒಳಗೆ ಚಿಂತನೆ ನಡೆದಿದೆ ಎಂದರು.

Advertisement
Advertisement