ಬೆಳಗಾವಿ: ಈಜಲು (Swimming) ಹಳ್ಳಕ್ಕೆ ಇಳಿದಿದ್ದ ಅಣ್ಣ- ತಮ್ಮ ಇಬ್ಬರೂ ನೀರುಪಾಲಾದ ಘಟನೆ ಮೂಡಲಗಿ (Mudalagi) ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ
ಗ್ರಾಮದ ಸಾಗರ್ ಮಾದರ (15), ಪ್ರವೀಣ್ ಮಾದರ (13) ಮೃತ ಸಹೋದರರು. ಇಬ್ಬರು ಹಳ್ಳದಲ್ಲಿ ಈಜಲು ತೆರಳಿದ್ದರು. ಈ ವೇಳೆ ನೀರಿಗಿಳಿದಾಗ ಪ್ರವೀಣ್ ಮುಳುಗಿದ್ದಾನೆ. ಇದನ್ನು ಗಮನಿಸಿ ಆತನ ರಕ್ಷಣೆಗೆ ಸಾಗರ್ ತೆರಳಿದ್ದು, ಆತನೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: KSRTC ಬಸ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ
ಮೃತದೇಹವನ್ನು ಸ್ಥಳೀಯರು ಹಾಗೂ ಪೊಲೀಸರು ನೀರಿನಿಂದ ಹೊರತೆಗೆದಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮೂಡಲಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಇದನ್ನೂ ಓದಿ: Vijayapura | ಪಾನ್ ಶಾಪ್‌ನಲ್ಲಿ ನಿಗೂಢ ಸ್ಫೋಟ – ಮೂವರಿಗೆ ಗಾಯ
