DistrictsKarnatakaLatestTumakuru

ಆಡಿಯೋ ವಿಚಾರದಲ್ಲಿ ಇಬ್ಬರೂ ಕಳ್ಳರೇ – ದೊಡ್ಡಕಳ್ಳ ಸಣ್ಣಕಳ್ಳ ಅನ್ನೋದಿಲ್ಲ: ಮಾಜಿ ಶಾಸಕ ಕೆಎನ್ ರಾಜಣ್ಣ

ತುಮಕೂರು: ಆಪರೇಷನ್ ಕಮಲ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಆಡಿಯೋ ವಿಚಾರದಲ್ಲಿ ಇಬ್ಬರು ಕೂಡ ಕಳ್ಳರೇ ಎಂದು ಮಾಜಿ ಶಾಸಕ ಕೆಎನ್ ರಾಜಣ್ಣ ಹೇಳಿದ್ದಾರೆ.

ತುಮಕೂರಿನ ಬುಕ್ಕಾಪಟ್ಟಣದಲ್ಲಿ ಮಾತನಾಡಿದ ಅವರು, ಇಬ್ಬರೂ ಹಣದ ಕೂಡ ತಮಗೆ ಬೆಂಬಲ ನೀಡುವಂತೆ ಆಮಿಷವೊಡ್ಡಿದ್ದಾರೆ. ತನ್ನ ಸರ್ಕಾರಕ್ಕೆ ಬೆಂಬಲಿಸು ಎಂದು ಇವರು ಆಮಿಷವೊಡ್ಡಿದ್ದಾರೆ. ಆದರೆ ಇವತ್ತು ಜನರಿಗೆ ರಾಜಕಾರಣಿಗಳೆಂದರೆ ಅಸಹ್ಯ ಹುಟ್ಟಿದ್ದು, ಎಕ್ಕಡಾ ಅಂತಿದ್ದಾರೆ. ಈ ರೀತಿ ವರ್ತನೆ ಇಬ್ಬರಿಗೂ ಶೋಭೆ ತರುವುದಿಲ್ಲ. ಆಡಿಯೋ ವಿಚಾರದಲ್ಲಿ ಇಬ್ಬರೂ ಕಳ್ಳರೇ ಆಗಿದ್ದು, ಇದರಲ್ಲಿ ದೊಡ್ಡಕಳ್ಳ ಸಣ್ಣ ಕಳ್ಳ ಎನ್ನುವುದಿಲ್ಲ ಎಂದರು.

ಇತ್ತ ಪ್ರಕರಣದ ವಿಚಾರಣೆಗೆ ಸದನದಲ್ಲಿ ಎಸ್‍ಐಟಿ ಆಯ್ಕೆ ವಿರುದ್ಧ ಬಿಜೆಪಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದು, ಸದನ ಸಮಿತಿ ಆಯ್ಕೆ ಮಾಡುವಂತೆ ಮನವಿ ಮಾಡಿ ಪಟ್ಟು ಹಿಡಿದ್ದಾರೆ. ಶಾಸಕ ಸಿಟಿ ರವಿ ಸೇರಿದಂತೆ ಹಲವು ನಾಯಕರು ಯಾವುದೇ ತನಿಖೆಗೆ ಹೆದರುವ ಪ್ರಶ್ನೆಯೇ ಇಲ್ಲ. ಆದರೆ ಈ ಆಡಿಯೋ ಕುಮಾರಸ್ವಾಮಿ ನಾನೇ ಮಾಡಿಸಿದ್ದು ಎಂದು ಹೇಳಿರಬೇಕಾದರೆ ಎಸ್‍ಐಟಿಯಿಂದ ತನಿಖೆ ನಡೆದರೆ ನ್ಯಾಯಯುತ ತನಿಖೆ ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published.

Back to top button