ತುಮಕೂರು: ಈ ಬಾರಿ ಮೈಸೂರು ದಸರಾದಲ್ಲಿ (Mysuru Dasara) ತುಮಕೂರು (Tumakuru) ಜಿಲ್ಲೆಯ ಸ್ತಬ್ಧಚಿತ್ರಕ್ಕೆ ಕೊಕ್ ಕೊಡಲಾಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮೈಸೂರು ದಸರಾ ಸ್ತಬ್ಧಚಿತ್ರ ಸಮಿತಿ ರಾಜ್ಯದ ಪ್ರತಿ ಜಿಲ್ಲೆಯಿಂದ ಟ್ಯಾಬ್ಲೊಗಳನ್ನು ಆಹ್ವಾನಿಸಿತ್ತು. ಅದರಲ್ಲಿ 15 ಜಿಲ್ಲೆಯ ಟ್ಯಾಬ್ಲೊಗಳನ್ನು ಮಾತ್ರ ಆಯ್ಕೆಮಾಡಿಕೊಂಡಿದೆ. ಇದನ್ನೂ ಓದಿ: ಸಬ್ ಇನ್ಸ್‌ಪೆಕ್ಟರ್ ತಲೆಗೆ ಗುಂಡು ಹಾರಿಸಿದ್ದ ಆರೋಪಿ ಪೊಲೀಸ್ ಕಸ್ಟಡಿಯಿಂದ ಪರಾರಿ

ತುಮಕೂರು ಜಿಲ್ಲೆಯಿಂದ ʻತುಮಕೂರು ಜಿಲ್ಲೆಯಲ್ಲಿ ತೆಂಗು ಉಜ್ವಲ-ಕೈಗಾರಿಕೆ ಪ್ರಜ್ವಲʼ ಎಂಬ ಘೋಷವಾಕ್ಯದಡಿ ಪರಿಕಲ್ಪನೆಯೊಂದನ್ನು ಕಳಿಸಲಾಗಿತ್ತು. ಆದರೆ ಮೈಸೂರು ದಸರಾ ಸಮಿತಿ ಇದನ್ನು ಆಯ್ಕೆ ಮಾಡಿಲ್ಲ. ಉಪಮುಖ್ಯಮಂತ್ರಿಗಳ ತವರು ಜಿಲ್ಲೆಯ ಸ್ತಬ್ದಚಿತ್ರವನ್ನೇ ತಿರಸ್ಕಾರ ಮಾಡಿದಕ್ಕೆ ವ್ಯಾಪಾರ ಟೀಕೆ ವ್ಯಕ್ತವಾಗುತ್ತಿದೆ.

