ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್(Trinamool Congress) ಸಂಸದೆ ಮಹುವಾ ಮೊಯಿತ್ರಾ (MP Mahua Moitra) ಅವರು ಕೃಷ್ಣಾನಗರ ಎಂಪಿ ಕಪ್ ಟೂರ್ನಿಯಲ್ಲಿ(Krishnanagar MP Cup Tournament) ಸೀರೆಯಲ್ಲೇ ಫುಟ್‍ಬಾಲ್ (Foot Ball) ಆಟ ಆಡಿದ್ದು, ಇದೀಗ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
Fun moments from the final of the Krishnanagar MP Cup Tournament 2022.
And yes, I play in a saree. pic.twitter.com/BPHlb275WK
— Mahua Moitra (@MahuaMoitra) September 19, 2022
Advertisement
ಈ ಫೋಟೋವನ್ನು ಮಹುವಾ ಮೊಯಿತ್ರಾ ಅವರೇ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಕೆಂಪು-ಕಿತ್ತಳೆ ಬಣ್ಣದ ಸೀರೆಯನ್ನುಟ್ಟು, ಕಾಲಿಗೆ ಸ್ಪೋರ್ಟ್ಸ್ ಶೂ ತೊಟ್ಟು, ಕಣ್ಣಿಗೆ ಸನ್‍ಗ್ಲಾಸ್ ಧರಿಸಿಕೊಂಡು, ಫುಟ್‌ಬಾಲ್ ಆಡುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ. ಅಲ್ಲದೆ ಮತ್ತೊಂದು ಫೋಟೋದಲ್ಲಿ ಗೋಲ್ ಕೀಪರ್(Goal Keeper) ಆಗಿ ನಿಂತಿರುವುದನ್ನು ಕೂಡ ನೋಡಬಹುದಾಗಿದೆ. ಇದನ್ನೂ ಓದಿ: ಮದರಸಾಗಳನ್ನು ಧ್ವಂಸಗೊಳಿಸುವಂತೆ ಕರೆ ನೀಡಿದ್ದ ಯತಿ ನರಸಿಂಹಾನಂದ ವಿರುದ್ಧ FIR
Advertisement
Advertisement
ಫೋಟೋ ಜೊತೆಗೆ ಕೃಷ್ಣನಗರ ಎಂಪಿ ಕಪ್ ಟೂರ್ನಮೆಂಟ್ 2022 ರ ಫೈನಲ್‍ನ ಮೋಜಿನ ಕ್ಷಣಗಳು ಮತ್ತು ನಾನು ಸೀರೆಯಲ್ಲಿ ಆಟ ಆಡಿದ್ದೇನೆ ಎಂದು ಕ್ಯಾಪ್ಷನ್‌ನಲ್ಲಿ ಬರೆದುಕೊಂಡಿದ್ದಾರೆ. ಒಟ್ಟಾರೆ ಸಂಸದೆ ಸೀರೆ ಉಟ್ಟುಕೊಂಡು ಆಟವಾಡುತ್ತಿರುವುದನ್ನು ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ಡಿಸ್ಕೌಂಟ್ ಬೆಲೆಯಲ್ಲಿ ತೈಲ – 35 ಸಾವಿರ ಕೋಟಿ ಗಳಿಸಿದ ಭಾರತ