ಲಕ್ನೋ: ಉತ್ತರ ಪ್ರದೇಶದ (Uttara Pradesh) ಗಾಜಿಯಾಬಾದ್‌ನಲ್ಲಿ ನೀಟ್ ಆಕಾಂಕ್ಷಿಯೊಬ್ಬ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ವಿಜಯ ನಗರದ ಹೆಚ್-ಬ್ಲಾಕ್ ನಿವಾಸಿ ಜತಿನ್ ಕುಮಾರ್ ನೇಣಿಗೆ ಶರಣಾದ ವಿದ್ಯಾರ್ಥಿ. ಈತ ನೀಟ್ ಪರೀಕ್ಷೆಗೆ (NEET-UG Re-Exam) ತಯಾರಿ ನಡೆಸುತ್ತಿದ್ದ. ಗುರುವಾರ ಮಧ್ಯರಾತ್ರಿಯವರೆಗೆ ತನ್ನ ಕೋಣೆಯಲ್ಲಿ ಅಧ್ಯಯನ ಮಾಡುತ್ತಿದ್ದ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ, ಅವನನ್ನು ಎಬ್ಬಿಸಲು ಹೋದಾಗ ಮೃತಪಟ್ಟಿರುವುದು ಕಂಡುಬಂದಿದೆ. ಇದನ್ನೂ ಓದಿ: ನಾಗಪುರದ ನೀಟ್ ವಿದ್ಯಾರ್ಥಿಯೇ ಅಬುಧಾಬಿಯನ್ನು ಆಯ್ಕೆ ಮಾಡಿದ್ದ- ಡಿಜಿಟಲ್ ಪುರಾವೆ ಪ್ರಕಟಿಸಿದ NTA
ವಿಜಯ ನಗರ ಪೊಲೀಸರು ಮತ್ತು ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ತೆರಳಿ ಕೋಣೆಯಲ್ಲಿ ಪರಿಶೀಲನೆ ನಡೆಸಿದಾಗ ಸೀಲಿಂಗ್ ಫ್ಯಾನ್‌ಗೆ ಕಟ್ಟಲಾಗಿದ್ದ ತುಂಡಾದ ನೇಣಿನ ಕುಣಿಕೆ ಪತ್ತೆಯಾಗಿತ್ತು. ಶವ ನೆಲದ ಮೇಲೆ ಬಿದ್ದಿತ್ತು.
ಮೊಬೈಲ್ ಪರಿಶೀಲನೆ ನಡೆಸಿದಾಗ ಒಂದು ನಿಮಿಷ, ನಾಲ್ಕು ಸೆಕೆಂಡುಗಳ ವಿಡಿಯೋ ಪತ್ತೆಯಾಗಿತ್ತು. ವಿಡಿಯೋದಲ್ಲಿ ಆತ ತಮ್ಮ ಅಧ್ಯಯನ ಕೊಠಡಿಯನ್ನು ತೋರಿಸುತ್ತಾ, ಇಂದು ʻವಿಭಿನ್ನವಾಗಿ ಏನಾದರೂ ಮಾಡುವ ಬಗ್ಗೆ ಯೋಚಿಸುತ್ತಿದ್ದೇನೆʼ ಎಂದು ಹೇಳಿದ್ದ. ಅಲ್ಲದೇ ಸೀಲಿಂಗ್ ಫ್ಯಾನ್‌ನಲ್ಲಿ ನೇತಾಡುತ್ತಿರುವ ಕುಣಿಕೆಯ ಕಡೆಗೆ ಬೆರಳು ತೋರಿಸಿದ್ದಾನೆ. ಇದು ಆತ ಆತ್ಮಹತ್ಯೆಗೆ ಶರಣಾಗುವ ಕೆಲವೇ ಕ್ಷಣಗಳ ಮೊದಲು ರೆಕಾರ್ಡ್ ಆಗಿತ್ತು.
ವಿಡಿಯೋದಲ್ಲಿ ತಾನು ಯಾವುದೇ ಒತ್ತಡದಲ್ಲಿಲ್ಲ ಮತ್ತು ನೀಟ್ ಪರೀಕ್ಷೆಯ ಬಗ್ಗೆ ಒತ್ತಡಕ್ಕೊಳಗಾಗಿಲ್ಲ. ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಉದ್ವೇಗಕ್ಕೆ ಒಳಗಾಗದಂತೆ ತನ್ನ ತಂದೆ ಸಲಹೆ ನೀಡಿದ್ದರು ಎಂದು ಹೇಳಿದ್ದಾನೆ. ಪೊಲೀಸರು ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ.
ಜತಿನ್ ತಂದೆ ಸರ್ಕಾರಿ ಇಲಾಖೆಯೊಂದರಲ್ಲಿ ಕೆಲಸ ಮಾಡುತ್ತಾರೆ ಎಂದು ತಿಳಿದು ಬಂದಿದೆ. ಅವರ ಕುಟುಂಬ ಆಘಾತದಲ್ಲಿದ್ದು, ಮಾಧ್ಯಮಗಳ ಜೊತೆ ಮಾತನಾಡಲು ನಿರಾಕರಿಸಿದ್ದಾರೆ.
ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡುತ್ತಿದ್ದಾರೆ. ಇದನ್ನೂ ಓದಿ: ನಾಳೆ NEET-UG ಮರುಪರೀಕ್ಷೆ, ಇಂದು ಮೆಗಾ ಮಾಕ್‌ಡ್ರಿಲ್ – 15,000 ಅರೆಸೈನಿಕ ಸಿಬ್ಬಂದಿ ಪತ್ರಿಕೆ ರವಾನೆ
