ಬೆಂಗಳೂರು: ವಿದ್ಯುತ್ ಕೊರತೆನೂ ಇಲ್ಲ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದರು. ಆದರೆ ಇದೀಗ ಸಚಿವರು ಸುಳ್ಳು ಹೇಳಿದ್ದಾರಾ ಎನ್ನುವ ಅನುಮಾನ ಮೂಡುತ್ತಿದ್ದು, ಇಂಧನ ಇಲಾಖೆ ಸಚಿವ ಸುನಿಲ್ ಕುಮಾರ್ ಸುಳ್ಳು ಹೇಳಿ ದಿಕ್ಕು ತಪ್ಪಿಸಿದ್ದಾರಾ? ಪ್ರಶ್ನೆ ಮೂಡುತ್ತಿದೆ.
ಕಳೆದ ಏಪ್ರಿಲ್ ತಿಂಗಳಲ್ಲಿ ಕಲ್ಲಿದ್ದಲು ಕೊರತೆನೂ ಇಲ್ಲ, ವಿದ್ಯುತ್ ಕೊರತೆನೂ ಇಲ್ಲ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಸುದ್ದಿಗೋಷ್ಠಿ ಮಾಡಿ ಹೇಳಿದ್ದರು. ಆದರೆ ಅದೇ ತಿಂಗಳು ಕಲ್ಲಿದ್ದಲು ಕೊರತೆ ಇದೆ ಎಂದು ವಿದ್ಯುತ್ ಅನ್ನು ಸರ್ಕಾರ ಖರೀದಿಸಿರುವುದು ಬೆಳಕಿಗೆ ಬಂದಿದೆ. ಆ ಮೂಲಕ ಕಲ್ಲಿದ್ದಲು ಕೊರತೆ ಇಲ್ಲ ಎಂದು ವಿದ್ಯುತ್ ಖರೀದಿ ಮಾಡಿರುವ ಸರ್ಕಾರದ ಡಬಲ್ ಗೇಮ್ ಬಯಲಾಗಿದೆ. ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ಸರ್ಕಾರದ ಡಬಲ್ ಗೇಮ್ ಬಗ್ಗೆ ದಾಖಲೆ ಸಹಿತ ಸುದ್ದಿ ಪ್ರಸಾರ ಮಾಡಲಾಗಿದೆ.
Advertisement
Advertisement
ಕಳೆದ ಏಪ್ರಿಲ್ ತಿಂಗಳು ದೇಶಾದ್ಯಂತ ಕಲ್ಲಿದ್ದಲು ಕೊರತೆ ಎದುರಾಗಿತ್ತು. ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆ ಕುಂಠಿತವಾಗಿ ವಿದ್ಯುತ್ ಉತ್ಪಾದನೆ ಇಳಿಕೆಯಾಗಿತ್ತು. ರಾಜ್ಯದಲ್ಲೂ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಪೂರೈಕೆಯಾಗುವ ಕಲ್ಲಿದ್ದಲು ಶೇ. 25ರಷ್ಟು ಕೊರತೆಯಾಗಿತ್ತು.
Advertisement
ರಾಯಚೂರಿನ ಆರ್‌ಟಿಪಿಎಸ್, ಬಳ್ಳಾರಿಯ ಬಿಟಿಪಿಎಸ್, ಯರಮರಸ್‍ನ ವೈಟಿಪಿಎಸ್ ಸ್ಥಾವರಗಳಿಗೆ ನಿತ್ಯ ಅಗತ್ಯವಿರುವ ಕಲ್ಲಿದ್ದಲಿನಲ್ಲಿ ಶೇ. 75ರಷ್ಟು ಮಾತ್ರ ಪೂರೈಕೆಯಾಗುತ್ತಿತ್ತು. ಹಾಗಾಗಿ ಕಲ್ಲಿದ್ದಲು ದಾಸ್ತಾನಿಗೆ ಅವಕಾಶವಿಲ್ಲದಂತಾಗಿತ್ತು. ಆಯಾ ದಿನ ಪೂರೈಕೆಯಾದ ಕಲ್ಲಿದ್ದಲು ಅಂದೇ ಬಳಸಿ ವಿದ್ಯುತ್ ಉತ್ಪಾದಿಸುವ ಸ್ಥಿತಿಗೆ ತಲುಪಿತ್ತು. ರಾಜ್ಯದ ಮೂರು ಉಷ್ಣ ಸ್ಥಾವರಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ನಿತ್ಯ 16 ರೇಕ್‍ನಷ್ಟು ಕಲ್ಲಿದ್ದಲು ಪೂರೈಕೆಯಾಗಬೇಕು. ಆದರೆ, ರಾಜ್ಯಕ್ಕೆ ಆಗ 12 ರೇಕ್‍ನಷ್ಟು ಕಲ್ಲಿದ್ದಲು ಪೂರೈಕೆಯಾಗುತ್ತಿತ್ತು. ಇದರಿಂದ ನಿತ್ಯ 4 ರೇಕ್‍ನಷ್ಟು ಕಲ್ಲಿದ್ದಲು ಕೊರತೆ ಎದುರಾಗಿತ್ತು.
Advertisement
ಪರಿಸ್ಥಿತಿ ಹೀಗಿದ್ದರೂ, ಇಂಧನ ಸಚಿವ ಸುನಿಲ್ ಕುಮಾರ್ ಮಾತ್ರ ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ ಅಂತಲೇ ವಾದಿಸಿದ್ದರು. ಆಗ ಸುದ್ದಿಗೋಷ್ಠಿ ನಡೆಸಿದ್ದ ಸಚಿವ ಸುನಿಲ್ ಕುಮಾರ್ ನಮ್ಮ ರಾಜ್ಯಕ್ಕೆ ಕಲ್ಲಿದ್ದಲು ಕೊರತೆ ಇಲ್ಲ. ವಿದ್ಯುತ್ ಕಡಿತವೂ ಇಲ್ಲ. ಆದರೆ, ಕಲ್ಲಿದ್ದಲು ಕೊರತೆ ಇದೆ ಅಂತ ಕಾಂಗ್ರೆಸ್ ಊಹಾಪೋಹ ಹರಡಿಸುತ್ತಿದೆ. ಇದಕ್ಕೆ ಯಾರೂ ಕಿವಿಗೊಡಬೇಡಿ ಎಂದು ಹೇಳಿದ್ದರು. ಇದನ್ನೂ ಓದಿ: ಶ್ರೀಲಂಕಾದಲ್ಲಿ ಸಂಕಷ್ಟಕ್ಕೆ ಸಿಲುಕಿದ ರಾಮಾಯಣ ಖ್ಯಾತಿಯ ಹಿಂದೂ ದೇವಾಲಯ!
ಆದರೆ ಅದೇ ತಿಂಗಳಲ್ಲಿ ಇಂಧನ ಇಲಾಖೆಯಿಂದ ವಿದ್ಯುತ್ ಖರೀದಿ ಮಾಡಲಾಗಿದೆ. ಈ ಸಂಬಂಧ ಇಲಾಖೆಯ ಟಿಪ್ಪಣಿಯಲ್ಲಿ ಕಲ್ಲಿದ್ದಲು ಕೊರತೆ ಹಿನ್ನೆಲೆ ವಿದ್ಯುತ್ ಖರೀದಿ ಮಾಡಿರುವುದಾಗಿ ಉಲ್ಲೇಖಿಸಲಾಗಿದೆ. ಏಪ್ರಿಲ್ ತಿಂಗಳಲ್ಲಿ 119.60 ಮಿ.ಯೂ. ವಿದ್ಯುತ್ ಖರೀದಿ ಮಾಡಲಾಗಿದೆ. ಪ್ರತಿ ಯೂನಿಟ್ ವಿದ್ಯುತ್‍ಗೆ ಸರಾಸರಿ 10.18 ರೂ.ನಂತೆ ವಿದ್ಯುತ್ ಖರೀದಿಸಲಾಗಿದೆ. ಒಟ್ಟು 121.78 ರೂ. ಕೋಟಿ ಮೊತ್ತದಷ್ಟು ವಿದ್ಯುತ್ ಅನ್ನು ವಿನಿಮಯ ಕೇಂದ್ರದ ಮೂಲಕ ಖರೀದಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ, ವಿದ್ಯುತ್ ಕೊರತೆ, ಕಲ್ಲುದ್ದಲು ಕೊರತೆ ಇಲ್ಲ ಸಚಿವರು ಸುಳ್ಳು ಹೇಳಿದ್ದೇಕೆ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಇದನ್ನೂ ಓದಿ: ಬೊಮ್ಮಾಯಿಯನ್ನು ಭೇಟಿಯಾದ ಅಸ್ಸಾಂ ಸಿಎಂ