Connect with us

ಜನಾರ್ದನ ರೆಡ್ಡಿ ಮಾವನ ಮನೆಯಲ್ಲಿ ಕಳ್ಳತನ – ಭಾರೀ ಪ್ರಮಾಣದ ಬೆಳ್ಳಿ ಆಭರಣದೊಂದಿಗೆ ಪರಾರಿ

ಜನಾರ್ದನ ರೆಡ್ಡಿ ಮಾವನ ಮನೆಯಲ್ಲಿ ಕಳ್ಳತನ – ಭಾರೀ ಪ್ರಮಾಣದ ಬೆಳ್ಳಿ ಆಭರಣದೊಂದಿಗೆ ಪರಾರಿ

ಬಳ್ಳಾರಿ: ಮಾಜಿ ಸಚಿವ, ಗಣಿ ಧಣಿ ಜನಾರ್ದನ ರೆಡ್ಡಿ ಅವರ ಮಾವನ ಮನೆಯಲ್ಲಿ ಕಳ್ಳತನ ನಡೆದಿದ್ದು, ಕಳ್ಳರು ಭಾರೀ ಪ್ರಮಾಣದ ಬೆಳ್ಳಿ ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ.

ಬಳ್ಳಾರಿಯ ಇನ್ನಾರೆಡ್ಡಿ ಕಾಲೋನಿಯಲ್ಲಿರುವ ಜನಾರ್ದನ ರೆಡ್ಡಿ ಪತ್ನಿಯ ತಂದೆ ಪರಮೇಶ್ವರ ರೆಡ್ಡಿಯವರ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ. ಮನೆಯ ಸದಸ್ಯರೆಲ್ಲ ಊರಿಗೆ ಹೋಗಿರುವ ಮಾಹಿತಿ ಪಡೆದ ಕಳ್ಳರು ಇಂದು ನಸುಕಿನ ಜಾವ ಮನೆಯ ಬಾಗಿಲು ಮುರಿದು ಬೆಡ್ ರೂಮ್ ನಲ್ಲಿದ್ದ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ.

ಚಿನ್ನಾಭರಣ ಹಾಗೂ ವಜ್ರದ ಒಡೆವೆಗಳನ್ನು ಲಾಕರ್ ನಲ್ಲಿ ಇಟ್ಟ ಪರಿಣಾಮ ಕಳ್ಳರಿಗೆ ಯಾವುದೇ ಚಿನ್ನಾಭರಣದ ವಸ್ತುಗಳು ಸಿಕ್ಕಿಲ್ಲ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೌಲಬಜಾರ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement
Advertisement