Bengaluru CityDistrictsKarnatakaLatestMain Post

ಸಿಗರೇಟು ಸೇದೋಕೆ ಕಾರು ನಿಲ್ಲಿಸಿದ ಮಾಲೀಕ – 75 ಲಕ್ಷ ಹಣದೊಂದಿಗೆ ಚಾಲಕ ಎಸ್ಕೇಪ್

-ಹಣದ ಬ್ಯಾಗ್‍ನೊಂದಿಗೆ ರಾಜ್ಯಾದ್ಯಾಂತ ತೀರ್ಥಯಾತ್ರೆ
-ಕಂತೆ ಕಂತೆ ನೋಟುಗಳೇ ಈತನ ತಲೆದಿಂಬು..!

ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ನನ್ನ ಕಾರಿನ ಚಾಲಕ 75 ಲಕ್ಷ ರೂಪಾಯಿ ಹಣದ ಸಮೇತ, ಕಾರು ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ ನಗರದ ಬ್ಯಾಟರಾಯನಪುರ (Batarayanpura) ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ.

ಸಿಗರೇಟು ಸೇದೋಕೆ ಕಾರು ನಿಲ್ಲಿಸಿದ ಮಾಲೀಕ - 75 ಲಕ್ಷ ಹಣದೊಂದಿಗೆ ಚಾಲಕ ಎಸ್ಕೇಪ್

ಹೌದು, ಬೆಂಗಳೂರಿನ (Bengaluru) ಬ್ಯಾಟರಾಯನಪುರದಲ್ಲಿ ಎಲೆಕ್ಟ್ರಾನಿಕ್ ಸಿಟಿ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಹರೀಶ್ ಅವರ ಕಾರು ಚಾಲಕ ಸಂತೋಷ್ ಜೊತೆಗೆ ನಗರದ ಕಡೆಗೆ ಹೊರಟಿದ್ದರು. ಹೊರಡುವ ವೇಳೆ ವ್ಯವಹಾರ ಸಂಬಂಧ 75 ಲಕ್ಷ ರೂ. ಹಣದ ಬ್ಯಾಗ್ ಅನ್ನು ಕಾರಿನಲ್ಲಿಟ್ಟುಕೊಂಡು ಹೊರಟಿದ್ದರು. ಕಾರು ಬ್ಯಾಟರಾಯನಪುರದ ಬಳಿ ಬರುತ್ತಿದ್ದಂತೆ, ಮಾಲೀಕ ಹರೀಶ್ ಸಿಗರೇಟು ಸೇದುವುದಕ್ಕೆ ಅಂತಾ ಗಾಡಿ ನಿಲ್ಲಿಸಲು ಹೇಳಿ ಕೆಳಗೆ ಇಳಿದಿದ್ದಾರೆ. ಇದನ್ನೂ ಓದಿ: ಹಿಂದೂ ಧರ್ಮ, ದೇವರ ಬಗ್ಗೆ ಅವಹೇಳನ – ತುಮಕೂರಿಗೂ ಲಗ್ಗೆ ಇಟ್ಟ ನಕಲಿ ಭಗವದ್ಗೀತೆ ಪುಸ್ತಕ ಜಾಲ

ಸಿಗರೇಟು ಸೇದೋಕೆ ಕಾರು ನಿಲ್ಲಿಸಿದ ಮಾಲೀಕ - 75 ಲಕ್ಷ ಹಣದೊಂದಿಗೆ ಚಾಲಕ ಎಸ್ಕೇಪ್

ಇದೇ ಸಮಯಕ್ಕಾಗಿ ಕಾಯುತ್ತಿದ್ದ ಚಾಲಕ ಸಂತೋಷ್, ಕ್ಷಣಮಾತ್ರದಲ್ಲೇ ಪೋರ್ಡ್ ಕಾರಿನ ಸಮೇತ 75 ಲಕ್ಷ ಹಣ ರೂ. ದೋಚಿ ಎಸ್ಕೇಪ್ ಆಗಿದ್ದಾನೆ. ಹೀಗೆ ಹಣ ಜೊತೆಗೆ ಎಸ್ಕೇಪ್ ಆದ ಚಾಲಕ, ರಾಜ್ಯದ ಎಲ್ಲಾ ದೇವಸ್ಥಾನಗಳನ್ನು ಸುತ್ತಾಡಿ, ಯಾರಿಗೂ ಅನುಮಾನ ಬಾರದಂತೆ, ದೇವಸ್ಥಾನಗಳಲ್ಲಿ ಕೊಡುವ ಪ್ರಸಾದ ತಿಂದುಕೊಂಡು, ದೇವಸ್ಥಾನದ ಅವರಣದಲ್ಲೇ 75 ಲಕ್ಷ ರೂ. ಹಣದ ಬ್ಯಾಗ್ ತಲೆದಿಂಬು ಮಾಡಿಕೊಂಡು, ಯಾರಿಗೂ ಅನುಮಾನ ಬಾರದಂತೆ ನೆಮ್ಮದಿಯ ನಿದ್ದೆ ಮಾಡುತ್ತಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಇದೀಗ ಆರೋಪಿಯನ್ನು ಶೃಂಗೇರಿಯಲ್ಲಿ ಬಂಧಿಸಿ 72 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸಿಗರೇಟು ಸೇದೋಕೆ ಕಾರು ನಿಲ್ಲಿಸಿದ ಮಾಲೀಕ - 75 ಲಕ್ಷ ಹಣದೊಂದಿಗೆ ಚಾಲಕ ಎಸ್ಕೇಪ್

ಸಾಮಾನ್ಯವಾಗಿ ಹಣ ಕಳೆದುಕೊಂಡ ಮರುಕ್ಷಣವೇ ಪೊಲೀಸರಿಗೆ ದೂರು ನೀಡುತ್ತಾರೆ. ಆದರೆ 75 ಲಕ್ಷ ರೂ. ಹಣವನ್ನು ತನ್ನ ಡ್ರೈವರ್ ಕಳ್ಳತನ ಮಾಡಿ ಎಸ್ಕೇಪ್ ಆಗಿರುವುದು ಕಣ್ಣಾರೆ ನೋಡಿದರೂ ಕೂಡ, ಉದ್ಯಮಿ ಹರೀಶ್ ಪೊಲೀಸರಿಗೆ ದೂರು ನೀಡಿಲ್ಲ. ಘಟನೆ ನಡೆದು 20 ದಿನಗಳ ನಂತರ ಪೊಲೀಸರಿಗೆ ದೂರು ನೀಡಿದ ಹಿಂದಿನ ಸತ್ಯವೇನು ಎಂಬ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಆದರೆ ಉದ್ಯಮಿ ಮಾತ್ರ 75 ಲಕ್ಷ ರೂ. ಹಣದ ಮೂಲದ ಬಗ್ಗೆ ಸೂಕ್ತ ಉತ್ತರ ನೀಡಿಲ್ಲ. ಬದಲಿದೆ, ಡ್ರೈವರ್‌ನ ಪತ್ತೆ ಮಾಡುವುದಕ್ಕೆ ತಾನೇ ಪ್ರಯತ್ನ ಪಟ್ಟು ಕೊನೆಗೆ ದೂರು ನೀಡಿದ್ದಾರೆ. ಹೀಗಾಗಿ ಅಷ್ಟು ದೊಡ್ಡ ಮೊತ್ತದ ಹಣ ಎಲ್ಲಿಂದ ಬಂತು ಎಂಬ ಬಗ್ಗೆ ಪರಿಶೀಲನೆ ನಡೆಸಲು ಐಟಿ ಇಲಾಖೆಗೆ ಬ್ಯಾಟರಾಯನಪುರ ಪೊಲೀಸರು, ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಯುವಜನತೆಗೆ ಕೇಂದ್ರ ಸರ್ಕಾರ 10 ಲಕ್ಷ ಉದ್ಯೋಗ ಒದಗಿಸುವ ಕೆಲಸ ಮಾಡ್ತಿದೆ – ಮೋದಿ

ಪೊಲೀಸರಿಗೆ ಇರುವ ಮಾಹಿತಿ ಪ್ರಕಾರ, 75 ಲಕ್ಷ ರೂ. ಬ್ಲಾಕ್ ಮನಿ ಇರಬಹುದು ಅಂತಾ ಶಂಕಿಸಲಾಗಿದೆ. ಈ ವಿಚಾರ ತಿಳಿದೇ ಡ್ರೈವರ್ ಹಣವನ್ನು ದೋಚಿದ್ದ ಎನ್ನಲಾಗಿದೆ. ಸದ್ಯ ತನಿಖೆ ಮುಂದುವರೆದಿದ್ದು, ನಂತವಷ್ಟೇ ಈ ಹೈಡ್ರಾಮದ ಆಸಲಿ ಕಹಾನಿ ತಿಳಿಯಬೇಕಿದೆ.

Live Tv

Leave a Reply

Your email address will not be published. Required fields are marked *

Back to top button