ಧರ್ಮಶಾಲಾ: ಗುರ್ನೂರ್ ಬ್ರಾರ್, ಹರ್ಷ್ ದುಬೆ ಬೌಲಿಂಗ್ ಮತ್ತು ನಾಯಕ ಶುಭಮನ್ ಗಿಲ್(Shubman Gill) ಅವರ ಅತ್ಯುತ್ತಮ ಆಟದಿಂದ ಅಫ್ಘಾನಿಸ್ತಾನದ(Afghanistan) ವಿರುದ್ಧ ಭಾರತ 7 ವಿಕೆಟ್‌ಗಳ ಜಯ ಸಾಧಿಸಿದೆ.
ಮಳೆಯಿಂದಾಗಿ 25 ಓವರ್‌ಗಳಿಗೆ ನಿಗದಿಯಾಗಿದ್ದ ಆಟದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಅಫ್ಘಾನಿಸ್ತಾನ 24.5 ಓವರ್‌ಗಳಲ್ಲಿ 194 ರನ್‌ಗಳಿಗೆ ಆಲೌಟ್ ಆಯ್ತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ (Team India) ಇನ್ನೂ 13 ಎಸೆತ ಬಾಕಿ ಇರುವಂತಯೇ 3 ವಿಕೆಟ್ ನಷ್ಟಕ್ಕೆ 195 ರನ್ ಹೊಡೆದು ಜಯಗಳಿಸಿ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
195 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ರೋಹಿತ್ ಶರ್ಮಾ (Rohit Sharma) ಮತ್ತು ನಾಯಕ ಶುಭಮನ್ ಗಿಲ್ ಉತ್ತಮ ಆರಂಭ ನೀಡಿ 46 ರನ್‌ಗಳ ಜೊತೆಯಾಟವಾಡಿದರು. 16 ರನ್(16 ಎಸೆತ, 2 ಬೌಂಡರಿ, 1 ಸಿಕ್ಸ್) ಗಳಿಸಿದ್ದಾಗ ರೋಹಿತ್ ಶರ್ಮಾ ರನೌಟ್ ಆದರು.
Sublime ball-striking 👌💥
🎥 Easy on the eye shots from Captain Shubman Gill and KL Rahul en route to a fine victory 👏
Updates ▶️ https://t.co/lCuohEZYAl #TeamIndia | #INDvAFG | @IDFCFIRSTBank | @ShubmanGill | @klrahul pic.twitter.com/hXHuxGC5yL
— BCCI (@BCCI) June 13, 2026
ಎರಡನೇಯವರಾಗಿ ಕ್ರೀಸ್‌ಗೆ ಆಗಮಿಸಿದ ಇಶನ್ ಕಿಶನ್ 34 ರನ್(22 ಎಸೆತ, 3 ಬೌಂಡರಿ, 1 ಸಿಕ್ಸ್), ಶ್ರೇಯಸ್ ಅಯ್ಯರ್ 12 ರನ್ ಗಳಿಸಿ ಔಟಾದರು. ನಂತರ ಬಂದ ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಮುರಿಯದ 4ನೇ ವಿಕೆಟಿಗೆ ಗಿಲ್ ಮತ್ತು ರಾಹುಲ್ 32 ಎಸೆತಗಳಲ್ಲಿ 53 ರನ್ ಜೊತೆಯಾಟವಾಡಿ ತಂಡಕ್ಕೆ ಗೆಲುವು ನೀಡಿದರು. ರಾಹುಲ್ 19 ಎಸೆತಗಳಲ್ಲಿ 39 ರನ್(4 ಬೌಂಡರಿ, 3 ಸಿಕ್ಸ್) ಹೊಡೆದರೆ ಗಿಲ್ ಅಜೇಯ 84 ರನ್(66 ಎಸೆತ, 11 ಬೌಂಡರಿ, 2 ಸಿಕ್ಸ್) ಚಚ್ಚಿದರು.
Delight 🥳
Harsh Dubey opens his wicket-taking account in ODIs for #TeamIndia 😎
Updates ▶️ https://t.co/lCuohEZYAl #INDvAFG | @IDFCFIRSTBank pic.twitter.com/1FqobhgoVj
— BCCI (@BCCI) June 13, 2026
ಗುರ್ಬಾಜ್ ಭರ್ಜರಿ ಶತಕ:
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡಕ್ಕೆ ರಹಮಾನುಲ್ಲಾ ಗುರ್ಬಾಜ್ ಸ್ಫೋಟಕ ಆರಂಭ ನೀಡಿದರು. ಭಾರತೀಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಅವರು ಕೇವಲ 51 ಎಸೆತಗಳಲ್ಲಿ 8 ಬೌಂಡರಿ ಹಾಗೂ 8 ಸಿಕ್ಸರ್ ನೆರವಿನಿಂದ ಭರ್ಜರಿ 102 ರನ್ ಸಿಡಿಸಿ ಮಿಂಚಿದರು. ಆದರೆ ಉಳಿದ ಬ್ಯಾಟರ್‌ಗಳಿಂದ ಸೂಕ್ತ ಬೆಂಬಲ ಸಿಗದ ಕಾರಣ ಅಫ್ಘಾನಿಸ್ತಾನ ತಂಡವು ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು.
3 ವಿಕೆಟ್ ನಷ್ಟಕ್ಕೆ 142 ರನ್‌ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಅಫ್ಘಾನಿಸ್ತಾನ 52 ರನ್‌ಗಳಿಸುವಷ್ಟರಲ್ಲಿ ಉಳಿದ 7 ವಿಕೆಟ್ ಕಳೆದುಕೊಂಡಿತ್ತು.
The stuff dreams are made of 🌟
🎥 Gurnoor Brar strikes in his very first over in international cricket ☝️
Updates ▶️ https://t.co/lCuohEZYAl #TeamIndia | #INDvAFG | @IDFCFIRSTBank pic.twitter.com/x7qIkDWPZr
— BCCI (@BCCI) June 13, 2026
ಬೌಲರ್‌ಗಳ ಕಮಾಲ್:
ಭಾರತದ ಪರ ಈ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಯುವ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಗುರ್ನೂರ್ ಬ್ರಾರ್ ತಮ್ಮ ಡೆಬ್ಯೂ ಪಂದ್ಯದಲ್ಲೇ 4.5 ಓವರ್‌ಗಳಲ್ಲಿ 27 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರೆ, ಮತ್ತೊಬ್ಬ ಪದಾರ್ಪಣೆ ಆಟಗಾರ ಹರ್ಷ್ ದುಬೆ 5 ಓವರ್‌ಗಳಲ್ಲಿ 47 ರನ್‌ಗಳಿಗೆ 3 ವಿಕೆಟ್ ಕಸಿದುಕೊಂಡು ಅಫ್ಘಾನಿಸ್ತಾನ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಇವರಿಗೆ ಉತ್ತಮ ಸಾಥ್ ನೀಡಿದ ಅರ್ಷದೀಪ್ ಸಿಂಗ್ 5 ಓವರ್‌ಗಳಲ್ಲಿ 27 ರನ್ ನೀಡಿ 2 ವಿಕೆಟ್ ಕಲೆಹಾಕಿದರು.
