ಗಾಂಧೀನಗರ: ಕೇಂದ್ರ ಸರ್ಕಾರ ಯುವಜನತೆಗೆ ಹತ್ತು ಲಕ್ಷ ಉದ್ಯೋಗಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ಗುಜರಾತ್ (Gujarat) ಸರ್ಕಾರವು ಇಲ್ಲಿ ಆಯೋಜಿಸಿದ್ದ ‘ರೋಜ್‌ಗಾರ್ ಮೇಳ’ (Rozgar Mela)ದ ವೀಡಿಯೊ ಸಂದೇಶದಲ್ಲಿ, ಯುವಜನತೆಗೆ ಸರ್ಕಾರಿ ಉದ್ಯೋಗಗಳ ಸಂಖ್ಯೆಯೂ ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತೆಲಂಗಾಣದಲ್ಲಿ ಆಪರೇಷನ್ ಕಮಲಕ್ಕೆ ಯತ್ನ – ಅಮಿತ್ ಶಾರನ್ನು ಬಂಧಿಸಿ: ಮನೀಶ್ ಸಿಸೋಡಿಯಾ
Advertisement
Advertisement
ಬಿಜೆಪಿ (BJP) ಆಡಳಿತವಿರುವ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ಸಮಾರಂಭದಲ್ಲಿ ಸುಮಾರು 5,000 ಜನರು ಗುಜರಾತ್ ಪಂಚಾಯತ್ ಸೇವಾ ಮಂಡಳಿಯಿಂದ ನೇಮಕಾತಿ ಪತ್ರಗಳನ್ನು ಪಡೆದರೆ, 8,000 ಜನರಿಗೆ ಗುಜರಾತ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಮಂಡಳಿ ಮತ್ತು ಲೋಕರಕ್ಷಕ ನೇಮಕಾತಿ ಮಂಡಳಿಯಿಂದ ನೇಮಕಾತಿ ಪತ್ರಗಳನ್ನು ನೀಡಲಾಗಿದೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನೇಮಕಾತಿ ಪತ್ರ ವಿತರಿಸಿದರು.
Advertisement
“ಧನ್ತೇರಸ್‌ನ ಶುಭ ದಿನದಂದು ನಾವು ರಾಷ್ಟ್ರಮಟ್ಟದಲ್ಲಿ ರೋಜ್‌ಗಾರ್ ಮೇಳವನ್ನು ನಡೆಸಿದ್ದೇವೆ. ಅಲ್ಲಿ ನಾವು 75,000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದ್ದೇವೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಕೋಸ್ಟ್ ಗಾರ್ಡ್ ಭದ್ರತಾ ಶಕ್ತಿ ಹೆಚ್ಚಿಸಲು ಕೇಂದ್ರ ಸರ್ಕಾರ ಪ್ಲ್ಯಾನ್ – ಮನೋಜ್ ಬಾಡ್ಕರ್
Advertisement
ಕೇಂದ್ರ ಸರ್ಕಾರವು 10 ಲಕ್ಷ ಉದ್ಯೋಗಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಹ ಅಭಿಯಾನದೊಂದಿಗೆ ಸಂಬಂಧ ಹೊಂದುತ್ತಿವೆ. ಯುವಕರಿಗೆ ನೀಡುವ ಸರ್ಕಾರಿ ಉದ್ಯೋಗಗಳ ಸಂಖ್ಯೆ ಗಣನೀಯವಾಗಿ ಏರುತ್ತದೆ ಎಂದು ಭರವಸೆಯ ನುಡಿಗಳನ್ನಾಡಿದ್ದಾರೆ.