ದಾವಣಗೆರೆ: ನಾಗರಹಾವೊಂದು ಗಣೇಶನ ಕೊರಳಿಗೆ ಸುತ್ತಿಕೊಂಡು ಭಕ್ತಿ ಸಮರ್ಪಿಸಿದ ಘಟನೆ ದಾವಣಗೆರೆ ತಾಲೂಕು ಕೈದಾಳೆ ಗ್ರಾಮದಲ್ಲಿ ನಡೆದಿದೆ.
Advertisement
ಕೈದಾಳೆ ಗ್ರಾಮದ ಮೇಗಳಹಟ್ಟಿಯಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಈ ಸಂಬಂಧ ಭಕ್ತರು ಮುಂಜಾನೆಯಿಂದ ಬಂದು ಪೂಜೆ ಸಲ್ಲಿಸಿ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಿದ್ದರು. ಈ ಸಂದರ್ಭದಲ್ಲಿ ನಾಗರಹಾವೊಂದು ಪ್ರತಿಷ್ಠಾಪನೆ ಮಾಡಿದ್ದ ಗಣೇಶನನ್ನು ಸುತ್ತುವರೆದು ನಂತರ, ವಿಘ್ನೇಶ್ವರನ ಕೊರಳಿಗೆ ಸುತ್ತಿಕೊಂಡು ಹೆಡೆ ಎತ್ತಿದೆ. ಇದನ್ನೂ ಓದಿ: ಹದಗೆಟ್ಟ ರಸ್ತೆಯ ತಾತ್ಕಾಲಿಕ ದುರಸ್ತಿಗೆ ಗ್ರಾಮದ ಯುವಕರ ಶ್ರಮದಾನ
Advertisement
Advertisement
ಸ್ಥಳದಲ್ಲಿ ನೆರೆದಿದ್ದ ಭಕ್ತರು ಈ ದೃಶ್ಯವನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಇನ್ನೂ ಕೆಲವರು ಇದನ್ನು ನೋಡಿ ದೇವರ ಮಹಿಮೆ ಎಂದು ಪೂಜೆ ಸಲ್ಲಿಸಿದ್ದಾರೆ. ಈ ಕ್ಷಣವನ್ನು ನೋಡಲು ಜನರು ತಂಡೋಪತಂಡವಾಗಿ ಬಂದು ಕುತೂಹಲದಿಂದ ವೀಕ್ಷಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಕೋವಿಡ್ ಭೀತಿ ಮರೆತು ಕೋಟೆನಾಡಲ್ಲಿ ಮಟನ್ ಖರೀದಿಸಲು ಮುಗಿಬಿದ್ದ ಮಾಂಸ ಪ್ರಿಯರು
Advertisement
ಸುಮಾರು ಒಂದು ಗಂಟೆಗಳ ಕಾಲ ಹಾವು ಗಣಪತಿಯ ಮೇಲೆ ಇದ್ದು, ನಂತರ ಅಲ್ಲಿಂದ ಹೊರ ಹೋಗಿದೆ. ಇನ್ನೂ ಈ ದೃಶ್ಯವನ್ನು ಕಣ್ಮುಂಬಿಕೊಳ್ಳಲು ಕೆಲವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.