ಚೆನ್ನೈ: ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಿ ವಹಿಸಿಕೊಂಡ ಬಳಿಕ ವಿಜಯ್ ಹೊಸ ಹೊಸ ಆದೇಶ ನೀಡುತ್ತಿದ್ದಾರೆ. ಮಾಜಿ ಸಿಎಂ ಜಯಲಲಿತಾ ಆರಂಭಿಸಿದ್ದ ಅಮ್ಮ ಕ್ಯಾಂಟೀನ್ (Amma Canteen)ನವೀಕರಣಕ್ಕೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ (Tamilnadu CM Joseph Vijay) ಆದೇಶಿಸಿದ್ದಾರೆ.
2013ರಲ್ಲಿ ಜಯಲಲಿತಾ ಸಿಎಂ ಆಗಿದ್ದಾಗ ಅಮ್ಮ ಕ್ಯಾಂಟೀನ್ ಆರಂಭಿಸಿದ್ದರು. ಇದೀಗ ಅದೇ ಅಮ್ಮ ಕ್ಯಾಂಟೀನ್‌ಗಳಿಗೆ ಮರುಜೀವ ನೀಡಲು ಸಿಎಂ ವಿಜಯ್ ಮುಂದಾಗಿದ್ದು, 620 ಅಮ್ಮ ಕ್ಯಾಂಟೀನ್‌ಗಳನ್ನು ನವೀಕರಣ ಮಾಡಲು ಆದೇಶ ನೀಡಿದ್ದಾರೆ. ಇದನ್ನೂ ಓದಿ: ಪ.ಬಂಗಾಳದಲ್ಲಿ ಜೂ.1ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಮಾಸಿಕ 3,000 ರೂ. ನೆರವು
ಇನ್ನು, ತಮಿಳುನಾಡು ಸಿಎಂ ವಿಜಯ್‌ಗೆ 6 ತಿಂಗಳು ಕಾಲ ತೊಂದರೆ ಕೊಡಲ್ಲ ಅಂತ ಸ್ಟಾಲಿನ್ ಹೇಳಿದ್ರೆ, ಅವರ ಪಕ್ಷದ ಶಾಸಕ ಅನಿತಾ ರಾಧಾಕೃಷ್ಣನ್ 6 ತಿಂಗಳು ಕೂಡ ಟವಿಕೆ ಸರ್ಕಾರ ಉಳಿಯಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಈ ಸರ್ಕಾರ 4 ತಿಂಗಳು ಮಾತ್ರ ಉಳಿಯಲಿದೆ. ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಶೀಘ್ರದಲ್ಲೇ ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂದಿದ್ದಾರೆ.
ಇನ್ನು ವಿಜಯ್ ಅಭಿನಯದ ಕೊನೆಯ ಚಿತ್ರ ಜನನಾಯಗನ್ ಸಿನಿಮಾ ರಿಲೀಸ್‌ಗೆ ಈ ವಾರಾಂತ್ಯದಲ್ಲಿ ಒಪ್ಪಿಗೆ ಸಿಗೋ ಸಾಧ್ಯತೆಗಳಿವೆ. ಈ ಮಧ್ಯೆ, ಅಣ್ಣಾಡಿಎಂಕೆ ಪಕ್ಷದಲ್ಲಿ ಆಂತರಿಕ ಭಿನ್ನಮತ ಹೆಚ್ಚಾಗುತ್ತಿದೆ. ಹಿರಿಯ ನಾಯಕ ಎಸ್ ಸೆಮ್ಮಲೈ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ಮೇ 22ರಂದು ಸಿಎಂ ವಿಜಯ್ ಪ್ರಧಾನಿ ಮೋದಿಯವ್ರನ್ನು ಭೇಟಿಯಾಗುವ ಸಾಧ್ಯತೆ ಇದೆ.ಇದನ್ನೂ ಓದಿ: ಹೆಚ್‌ಡಿಎಫ್‌ಸಿ ಬ್ಯಾಂಕ್ ಹಿಂದಿಕ್ಕಿ ದೇಶದ ಎರಡನೇ ಮೌಲ್ಯಯುತ ಕಂಪನಿಯಾಗಿ ಹೊರಹೊಮ್ಮಿದ ಭಾರ್ತಿ ಏರ್‌ಟೆಲ್

