ರಾಯಚೂರು: ಪಾದಚಾರಿಗೆ (Pedestrian) ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಾನ್ವಿ (Manvi) ತಾಲೂಕಿನ ಅಮರೇಶ್ವರ ಕ್ಯಾಂಪ್ ಬಳಿ ನಡೆದಿದೆ.
30 ವರ್ಷದ ರಾಜ ಮೃತ ದುರ್ದೈವಿ. ಹೆದ್ದಾರಿ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಬೈಕ್ ಪಾದಚಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬೈಕ್ ಸವಾರ ಮಾರಪ್ಪನಿಗೆ ಗಂಭೀರ ಗಾಯಗಳಾಗಿದ್ದು, ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: SIR ಕರ್ತವ್ಯಕ್ಕೆ ಹೊರಟಿದ್ದ ವೇಳೆ ಹೃದಯಾಘಾತದಿಂದ BLO ಸಾವು
ಹಿಂಬದಿ ಸವಾರ ನಂದೀಶ್ ಸಹ ಗಾಯಗೊಂಡಿದ್ದು, ಮಾನ್ವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ. ಅಪಘಾತ ಹಿನ್ನೆಲೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಚಿನ್ನದಿಂದ ಆದಾಯ, ಠೇವಣಿ ಇಟ್ಟರೆ ಕಾಸು – ಏನಿದು ಕೇಂದ್ರದ ಹೊಸ ಯೋಜನೆ?
