ತುಮಕೂರು: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗುಂಬ ಬಳಿಯಿರುವ ಗರುಡ ಕೆಫೆ ಮುಂಭಾಗ ನಡೆದಿದೆ.
ಮಲ್ಲ ಅಲಿಯಾಸ್ ವೀರಣ್ಣ (42) ಕೊಲೆಯಾದ ರೌಡಿಶೀಟರ್. ನಾಲ್ಕೈದು ಮಂದಿ ದುಷ್ಕರ್ಮಿಗಳು ರಾತ್ರಿ 8:30ರ ಸುಮಾರಿಗೆ ರೌಡಿಶೀಟರ್ ಮಲ್ಲನ ಮೇಲೆ ಅಟ್ಯಾಕ್ ಮಾಡಿ ಕೊಚ್ಚಿ ಕೊಲೆಗೈದಿದ್ದಾರೆ.
ಮಲ್ಲ ಬೆಳಗುಂಬ ನಿವಾಸಿಯಾಗಿದ್ದ. ಆತನ ಮನೆ ಸಮೀಪವೇ ಅಟ್ಯಾಕ್ ಮಾಡಿ ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
10 ವರ್ಷದ ಹಿಂದೆ ಕೊಲೆ ಕೇಸ್‌ನಲ್ಲಿ ಮಲ್ಲ ಜೈಲು ಸೇರಿದ್ದ. ಮಲ್ಲನ ವಿರುದ್ಧ ರೌಡಿಶೀಟರ್ ತೆರೆಯಲಾಗಿತ್ತು.
