`ಜನನಾಯಗನ್’ ಮಧ್ಯಂತರ ಪರಿಹಾರಕ್ಕೆ ಸುಪ್ರೀಂ ನಕಾರ – KVN ಪ್ರೊಡಕ್ಷನ್ ಅರ್ಜಿ ವಜಾ

1 Min Read

-ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಹೋಗುವಂತೆ ಸೂಚನೆ

ನವದೆಹಲಿ/ಚೆನ್ನೈ: ತಮಿಳುನಾಡಿನ ಖ್ಯಾತ ನಟ, ರಾಜಕಾರಣಿ ದಳಪತಿ ವಿಜಯ್‌ಗೆ ಸಂಕ್ರಾಂತಿ ದಿನವೇ ಸುಪ್ರೀಂಕೋರ್ಟ್ (Supreme Court) ಶಾಕ್ ನೀಡಿದೆ.

ಜನನಾಯಗನ್ (JanaNayagan) ಚಿತ್ರದ ಸೆನ್ಸಾರ್ ಪ್ರಮಾಣಪತ್ರ ವಿಳಂಬ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಮದ್ರಾಸ್ ಹೈಕೋರ್ಟ್ಗೆ ಪ್ರಕರಣವನ್ನು ಹಿಂದಿರುಗಿಸಿ, ಜನವರಿ 20ರೊಳಗೆ ನಿರ್ಧರಿಸುವಂತೆ ಸೂಚಿಸಿದೆ. ನಿರ್ಮಾಪಕರು ಭಾರೀ ನಷ್ಟ ಅನುಭವಿಸಿರುವುದಾಗಿ ತಿಳಿಸಿದ್ದು, ಹೈಕೋರ್ಟ್ ಶೀಘ್ರ ನಿರ್ಧಾರದ ನಿರೀಕ್ಷೆಯಲ್ಲಿದೆ. ಇದನ್ನೂ ಓದಿ: ಕರೂರು ಕಾಲ್ತುಳಿತ ಪ್ರಕರಣ – 7 ಗಂಟೆಗೂ ಹೆಚ್ಚು ಕಾಲ ನಟ ವಿಜಯ್‌ಗೆ CBI ಗ್ರಿಲ್

ಜ.9ರಂದು ಬಿಡುಗಡೆಯಾಗಬೇಕಿದ್ದ ಜನನಾಯಗನ್ ಚಿತ್ರ ಸೆನ್ಸಾರ್ ಪ್ರಮಾಣಪತ್ರ ಸಿಗದೇ ಮುಂದೂಡಲ್ಪಟ್ಟಿತ್ತು. ಈ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್‌ಗೆ ಹಿಂದಿರುಗಿಸಿ, ಅಲ್ಲಿನ ವಿಭಾಗೀಯ ಪೀಠದ ಮುಂದೆ ವಾದ ಮಂಡಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಈ ಹಿಂದೆ ಹೈಕೋರ್ಟ್, ಚಿತ್ರತಂಡದ ತಪ್ಪು ತುರ್ತು ಭಾವನೆಯನ್ನು ಪ್ರಶ್ನಿಸಿ, ಪ್ರಕರಣದ ಪೂರ್ಣ ವಿಚಾರಣೆ ನಡೆಯುವವರೆಗೆ ಪ್ರಮಾಣಪತ್ರವನ್ನು ತಡೆಹಿಡಿಯುವಂತೆ ಸಿಬಿಎಫ್‌ಸಿಗೆ ನಿರ್ದೇಶಿಸಿತ್ತು. ಸುಪ್ರೀಂ ಕೋರ್ಟ್, ಹೈಕೋರ್ಟ್‌ಗೆ ಜನವರಿ 20ರೊಳಗೆ ಈ ಮೇಲ್ಮನವಿಯನ್ನು ನಿರ್ಧರಿಸಲು ಪ್ರಯತ್ನಿಸುವಂತೆ ಸೂಚಿಸಿದೆ.

Share This Article