-ಧಾರವಾಡಕ್ಕೆ ಬಂದಿದ್ದಾರಂತೆ ಶಾರ್ಪ್ ಶೂಟರ್ಸ್!
ಧಾರವಾಡ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ವಿನಯ್ ಕುಲಕುರ್ಣಿ ಕೊಲೆಗೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ರಾಜ್ಯದ ಭೂಗತ ರೌಡಿಯೊಬ್ಬನಿಗೆ ಸುಪಾರಿ ಕೊಡಲಾಗಿದೆ ಎನ್ನುವ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಇರುವಂತೆ ಪೊಲೀಸ್ ಇಲಾಖೆಯಿಂದ ಸಚಿವರಿಗೆ ಸೂಚನೆ ನೀಡಲಾಗಿದೆ.
ಖಚಿತ ಮೂಲಗಳ ಮಾಹಿತಿ ಆಧರಿಸಿ ಹಿರಿಯ ಪೊಲೀಸ್ ಅಧಿಕಾರಿಗಳು ಸೋಮವಾರ ಬೆಳಗ್ಗೆ ಈ ವಿಷಯವನ್ನು ಸಿಎಂ ಗಮನಕ್ಕೂ ತಂದಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕ್ಕೆ ತೆಗೆದುಕೊಳ್ಳುವಂತೆ ಸಿಎಂ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ವಿದೇಶದಲ್ಲಿದ್ದುಕೊಂಡು ರಾಜ್ಯದಲ್ಲಿ ಚಟುವಟಿಕೆ ನಡೆಸುತ್ತಿರುವ ಇಬ್ಬರು ರೌಡಿಗಳ ಅಪರಾಧ ಚರಿತ್ರೆಯನ್ನ ಇಂಟರ್ ಪೋಲ್‍ಗೆ ರವಾನಿಸಿ ಅವರ ಬಂಧನಕ್ಕೆ ಪೂರಕವಾಗಿ ತಾಂತ್ರಿಕ ಕಾರ್ಯಾಚರಣೆ ನಡೆಸಲು ಡಿವೈಎಸ್‍ಪಿ ಮಟ್ಟದ ಅಧಿಕಾರಿಗೆ ಜವಾಬ್ದಾರಿ ನೀಡಲಾಗಿದೆ.
Advertisement
Advertisement
1 ಕೋಟಿ ರೂ.ಗೆ ಡೀಲ್: ಒಂದು ಕೋಟಿ ರೂ. ಸುಪಾರಿ ಹಣ 2 ಕಂತುಗಳಲ್ಲಿ ಹವಾಲಾ ಮಾರ್ಗವಾಗಿ ಥೈಲ್ಯಾಂಡ್‍ನಲ್ಲಿರುವ ಭೂಗತ ರೌಡಿಯ ಕೈ ಸೇರಿದೆ ಎನ್ನುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಶಿವಮೊಗ್ಗದಿಂದ ಬಂದು ಬೆಂಗಳೂರಿನಲ್ಲಿ ಹೆಸರು ಮಾಡಿ ಸದ್ಯ ಥೈಲ್ಯಾಂಡ್‍ನಲ್ಲಿ ತಲೆ ಮರೆಸಿಕೊಂಡಿದ್ದಾನೆ ಆ ಭೂಗತ ಪಾತಕಿಗೆ 30 ಲಕ್ಷ, 70 ಲಕ್ಷ 2 ಹಂತಗಳಲ್ಲಿ ಸುಪಾರಿ ನೀಡಲಾಗಿದೆ ಎನ್ನಲಾಗಿದೆ.
Advertisement
ಮುಂಬೈ ಮತ್ತು ಪುಣೆ ಮೂಲದ ಶಾರ್ಪ್ ಶೂಟರ್ಸ್ ಗೆ ಈ ಸುಪಾರಿ ನೀಡಲಾಗಿದೆ ಅಂತ ಹೇಳಲಾಗಿದ್ದು, ಅವರಲ್ಲಿ ಒಂದಿಬ್ಬರು ಧಾರವಾಡಕ್ಕೂ ಬಂದಿರುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಇದೀಗ ಬೆಂಗಳೂರು, ಧಾರವಾಡದಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.