ಬೆಂಗಳೂರು: ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ಅವರು ನಾಳೆ (ಜೂ.27) ಭೈರಮಂಗಲಕ್ಕೆ ಹೋಗ್ತಾ ಇದ್ದಾರೆ. ಸಿಎಂ ಡಿಕೆ ಶಿವಕುಮಾರ್ ಅವರು ಭೈರಮಂಗಲಕ್ಕೆ ಬರಲಿ ಅಂತ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸವಾಲ್ ಹಾಕಿದರು.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಸಿಎಂ ಅವರು ವಿಧಾನಸೌಧದಲ್ಲಿ 4 ಗೋಡೆ ಮಧ್ಯೆ ಚರ್ಚೆ ಮಾಡೋಣ ಅಂತ ಪತ್ರ ಬರೆದಿದ್ದರು. ಕುಮಾರಸ್ವಾಮಿ ಅವರು ರೈತರ ಸಮ್ಮುಖದಲ್ಲಿ ಚರ್ಚೆಗೆ ಕರೆದಿದ್ದಾರೆ. 4 ಗೋಡೆ ಮಧ್ಯೆ ಬೇಡ, ರೈತರ ಮಧ್ಯೆ ಕೂತು ಸಮಸ್ಯೆ ಪರಿಹಾರ ಮಾಡೋಣ ಅಂತ ಕುಮಾರಸ್ವಾಮಿ ಅವರು ಪತ್ರ ಬರೆದಿದ್ದಾರೆ. ಸಿಎಂ ಅವರು ಕುಮಾರಸ್ವಾಮಿ ಅವರ ಪತ್ರಕ್ಕೆ ರಿಪ್ಲೈ ಕೊಟ್ಟಿಲ್ಲ. ಸಿಎಂ ಬ್ಯುಸಿ ಇರ್ತಾರೆ. ಕುಮಾರಸ್ವಾಮಿ ರೈತರ ಪರ ಇರೋ ವ್ಯಕ್ತಿ. ನಾಳೆ ಕುಮಾರಸ್ವಾಮಿ ಅವರು ಭೈರಮಂಗಲ ಸರ್ಕಲ್ ನಲ್ಲಿ ರೈತರ ಜೊತೆ ಕೂರುತ್ತಾರೆ. ಸಿಎಂ ಅವರು ಬಂದು ಕೂತು ಮಾತಾಡಲಿ ಅಂತ ಸವಾಲ್ ಹಾಕಿದ್ರು.
ಪಹಣಿ ಇರೋರು, ಸಮಸ್ಯೆ ಇರೋ ರೈತರನ್ನ ಕೂರಿಸಿಕೊಳ್ಳಲಿ. ಯಾವುದೇ, ಸಂಘರ್ಷ ಗಲಭೆಗೆ ಅವಕಾಶ ಇಲ್ಲ. ರೈತರ ಸಮಸ್ಯೆ ಸುಸೂತ್ರವಾಗಿ ಪರಿಹಾರ ಆಗಲಿ. ಕುಮಾರಸ್ವಾಮಿ ಅವರು ನಾಳೆ ಹೋಗ್ತಾರೆ ರೈತರ ಪರ ಕಮಿಟ್ಮೆಂಟ್ ಉಳಿಸಿಕೊಳ್ತಾರೆ ಅಂತ ತಿಳಿಸಿದರು. ಇದನ್ನೂ ಓದಿ: Bidadi Township Row | ಸಿಎಂ ಆದ್ರೂ ಬರಲಿ, ಅಧಿಕಾರಿಗಳನ್ನಾದ್ರೂ ಕಳಿಸಲಿ: ಹೆಚ್‌ಡಿಕೆ ಸವಾಲ್
ತಮ್ಮ ಕುಟುಂಬದ ವಿರುದ್ಧ ಪೋಸ್ಟರ್ ಅಂಟಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪೋಸ್ಟರ್ ಅಭಿಯಾನ ಕಾಂಗ್ರೆಸ್ ಗೆ ಹೊಸದೇನು ಅಲ್ಲ. ಬಿಜೆಪಿ ಇದ್ದಾಗ 40% ಕಮೀಷನ್ ಅಂತ ಪೇ ಸಿಎಂ ಅಂತ ಮಾಡಿದ್ರು. ಈಗ ಪರ್ಸೆಂಟೇಜ್ ಕಾಂಗ್ರೆಸ್ ನಲ್ಲಿ ಎಷ್ಟಕ್ಕೆ ಹೋಗಿ ನಿಂತಿದೆ ಅಧಿಕಾರಿಗಳು, ಶಾಸಕರಿಗೆ ಎಲ್ಲವೂ ಗೊತ್ತಿದೆ. ಯಾರ ಭೂಮಿ ಎಲ್ಲಿದೆ? ಯಾರು ಎಷ್ಟು ಭೂಮಿ ಕರ್ನಾಟಕದಲ್ಲಿ ಹೊಂದಿದ್ದಾರೆ? ಬೇಕಾದ್ರೆ ದಾಖಲಾತಿ ಬಿಡುಗಡೆ ಮಾಡ್ತೀವಿ. ಆದ್ರೆ ಅಷ್ಟು ಸಣ್ಣತನದ ರಾಜಕೀಯ ಮಾಡಬಾರದು ಅಂತ ನಾವು ನಿರ್ಧಾರ ಮಾಡಿದ್ದೇವೆ ಎಂದು ಕುಟುಕಿದರು.
ಇದು ರೈತರ ಸಮಸ್ಯೆ ಪ್ರಶ್ನೆ. ಕುಟುಂಬದ ತೇಜೋವಧೆ ಮಾಡಲಿ ಅವರಿಗೆ ಬಿಟ್ಟಿದ್ದು, ಅವರ ಮನಸ್ಥಿತಿ ಅದು. ರೈತರು ಅದಕ್ಕೆ ಉತ್ತರ ಕೊಡ್ತಾರೆ. ನಾವು ರೈತರ ಪರ ಇರ್ತೀವಿ. ಯಾರೋ ಮಾಡ್ತಾರೆ ಅಂತ ನಾವು ಮಾಡಿದ್ರೆ ಅದಕ್ಕೆ ಕೊನೆ ಇರೋದಿಲ್ಲ. ಅದನ್ನ ಮಾಡಿದ್ರೆ ನಮಗೂ ಅವರಿಗೂ ವ್ಯತ್ಯಾಸ ಇಲ್ಲ. ಇಲ್ಲಿ ರೈತರ ಸಮಸ್ಯೆ ಇರೋದು. ನಾವು ರೈತರ ಪರ ನಿಲ್ತೀವಿ ಅಂತ ಕಾಂಗ್ರೆಸ್‌ಗೆ ತಿರುಗೇಟು ಕೊಟ್ಟರು. ಇದನ್ನೂ ಓದಿ: KPTCL ನಿಂದ ವಿದ್ಯುತ್ ಪ್ರಸರಣ ಮಾರ್ಗಗಳ ತಪಾಸಣೆಗೆ ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನ ಬಳಕೆ
