– ಬೀದರ್ ನಲ್ಲೇ ಅತೀ ಹೆಚ್ಚು ರೈತರು ಆತ್ಮಹತ್ಯೆ
ಬೀದರ್: ತಾಲೂಕಿನ ಶಿರಶಿ ಗ್ರಾಮದ ಹೊರವಲಯದಲ್ಲಿ ಇಡೀ ಗ್ರಾಮದ ಜನ ಮಳೆಗಾಗಿ `ಬುತ್ತಿ ಜಾತ್ರೆ’ ಎಂಬ ವಿಶೇಷ ಜಾತ್ರೆಯ ಮೂಲಕ ದೇವರಲ್ಲಿ ಹರಕೆ ಹೊತ್ತಿದ್ದಾರೆ.
ಗ್ರಾಮದ ಹೊರ ವಲಯದಲ್ಲಿರುವ ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೆ ಹಿಡಿ ಗ್ರಾಮದ ಮಹಿಳೆಯರು, ಮಕ್ಕಳು, ವೃದ್ಧರು ರೊಟ್ಟಿಯನ್ನು ಬುತ್ತಿಯಲ್ಲಿ ಹಾಕಿ ಹೊತ್ತುಕೊಂಡು ದೇವಸ್ಥಾನಕ್ಕೆ ತೆರಳಿ ವರುಣನಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ರು. ರೈತರು ಬೆಳೆದ ಬೆಳೆಗಳಿಗೆ ತಕ್ಕಂತೆ ವರುಣ ಕೃಪೆ ತೋರದ ಹಿನ್ನಲೆ ಗ್ರಾಮದ ಎಲ್ಲಾ ರೈತರು ಮೆರವಣಿಗೆ ಮೂಲಕ ಬುತ್ತಿ ಜಾತ್ರೆ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.
Advertisement
Advertisement
ಮುಂಗಾರು ಮಳೆ ಕೈಕೊಟ್ಟಿದ್ದು ವರುಣ ಬಾರದೆ ಇದ್ರೆ ನೇಣೇ ಗತಿ ಎಂದು ರೈತರು ವರುಣನಲ್ಲಿ ಮೊರೆ ಇಟ್ಟರು. ಸಿಎಂ ಎಚ್.ಡಿ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿದ್ರೂ ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆಗಳು ನಡೆಯುತ್ತಿದ್ದು, ಗಡಿ ಜಿಲ್ಲೆ ಬೀದರ್ ನಲ್ಲಿ 6 ಜನ ರೈತರು ಆತ್ಮಹತ್ಯೆಗೆ ಶರಣಾಗಿರುವುದು ಶೋಚನೀಯ ಸಂಗತಿಯಾಗಿದೆ. ಇಡೀ ರಾಜ್ಯದಲ್ಲಿ ಬೀದರ್ ನಲ್ಲೇ ಅತೀ ಹೆಚ್ಚು ರೈತರು ನೇಣಿಗೆ ಶರಣಾಗಿದ್ದಾರೆ.