ರಾಮನಗರ/ಬೆಂಗಳೂರು: ನಕಲಿ ಮೆಡಿಸಿನ್ ಮಾಫಿಯಾ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಬಹುಕೋಟಿ ಮೌಲ್ಯದ ದಂಧೆ ಮತ್ತು ಅಂತಾರಾಜ್ಯ ನೆಟ್‌ವರ್ಕ್ ಪತ್ತೆ ಹಚ್ಚಲು ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿದೆ.
ವಂಶಿಕೃಷ್ಣ ನೇತತ್ವದಲ್ಲಿ ರಚಿಸಿರುವ ವಿಶೇಷ ತಂಡದಲ್ಲಿ, ಮೂವರು ಐಪಿಎಸ್ ಅಧಿಕಾರಿಗಳು ಹಾಗೂ ಮೂವರು ಡ್ರಗ್ ಕಂಟ್ರೋಲರ್‌ಗಳನ್ನು ಈ ತಂಡ ಒಳಗೊಂಡಿದೆ. ಪ್ರಕರಣದ ಬಗ್ಗೆ ಎಸ್‌ಐಟಿ ಸಮಗ್ರ ತನಿಖೆ ನಡೆಸಿ ವರದಿಯನ್ನು ಸಲ್ಲಿಸಲಿದೆ. ಇದನ್ನೂ ಓದಿ: ಕೂಲಿಕಾರರಿಗೆ ಕಡ್ಡಾಯವಾಗಿ ಕೆಲಸ ಕೊಡಿ: ಬೆಳಗಾವಿ ಜಿಪಂ ಸಿಇಒ ರಾಹುಲ್ ಶಿಂಧೆ
ಇನ್ನೂ ಕಿಂಗ್‌ಪಿನ್ ಪ್ರಶಾಂತ್ ಎಂಬಾತ ದುಬೈನಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಈತ ಹಿಂದೆ ಬೆಂಗಳೂರು ಹಾಗೂ ತೆಲಂಗಾಣದಲ್ಲಿ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡುತ್ತಿದ್ದ. ಈತನೇ ದಂಧೆ ಜಾಲವನ್ನು ಹೆಣೆದಿದ್ದ ಎನ್ನಲಾಗಿದೆ. ಪೊಲೀಸರು ತನಿಖೆ ತೀವ್ರಗೊಳಿಸಿದ್ದು ಬೆಂಗಳೂರಿನ ಮೆಡಿಸಿನ್ ಡಿಸ್ಟ್ರಿಬ್ಯೂಟರ್ ವೆಂಕಟೇಶ್ ಎಂಬಾತನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಬಂಧಿತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಪ್ರಭುದೇವ, ತೇಜಸ್, ನವೀನ್ ಮತ್ತು ವೆಂಕಟೇಶ್ ಪೊಲೀಸರ ವಶದಲ್ಲಿದ್ದಾರೆ. ಬಂಧಿತ ಆರೋಪಿಗಳು ನೀಡಿದ ಇನ್‌ವಾಯ್ಸ್ ಬುಕ್ ಹಾಗೂ ಪ್ರಮುಖ ಮಾಹಿತಿಗಳ ಆಧಾರದ ಮೇಲೆ ತಾವರೆಕೆರೆ ಪೊಲೀಸರು ಮತ್ತು ಡ್ರಗ್ ಕಂಟ್ರೋಲ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ನಿನ್ನೆ ಬೆಂಗಳೂರಿನ ಹಲವು ಔಷಧಿ ಗೋದಾಮುಗಳ ಮೇಲೆ ಶೋಧ ಕಾರ್ಯ ನಡೆಸಲಾಗಿದ್ದು, ಇಂದೂ ಕೂಡ ಹಲವೆಡೆ ತಪಾಸಣೆ ಮುಂದುವರಿದಿತ್ತು. ಈ ನಕಲಿ ಔಷಧಿಗಳು ಕೇವಲ ಕರ್ನಾಟಕ ಮಾತ್ರವಲ್ಲದೆ ತೆಲಂಗಾಣ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಹೊರರಾಜ್ಯಗಳಿಗೂ ಸರಬರಾಜಾಗುತ್ತಿತ್ತು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಫಾರ್ಮ್‌ಹೌಸ್ ಕರೆದೊಯ್ದು ಸ್ಥಳ ಮಹಜರು ಮಾಡಲಾಗಿದೆ. ಜೊತೆಗೆ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿ ವಶಕ್ಕೆ ಪಡೆಯಲು ಪೊಲೀಸರ ಸಿದ್ಧತೆ ನಡೆಸಿದ್ದಾರೆ.ಇದನ್ನೂ ಓದಿ: ಹೊರಗೆ ಬರುತ್ತಿದ್ದಾಗ್ಲೇ ಕೆಳಗೆ ಹೋದ ಲಿಫ್ಟ್ – ಮಧ್ಯದಲ್ಲಿ ಸಿಲುಕಿ ಮಹಿಳೆ ಸಾವು, ವಿಡಿಯೋ ವೈರಲ್

