ಬೆಂಗಳೂರು: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಕರಣದ ತನಿಖಾಧಿಕಾರಿಯಾಗಿ ಓರ್ವ ಹಿರಿಯ ಐಪಿಎಸ್ ಅಧಿಕಾರಿ ನೇಮಕ ಮಾಡಲಾಗಿದೆ.
ಲೋಕೇಶ್ ಬಿ ಜಗಲಾಸರ್ ಅವರನ್ನು ಪ್ರಕರಣದ ತನಿಖಾ ಅಧಿಕಾರಿಯಾಗಿ ಎಸ್‌ಐಟಿ ಮುಖ್ಯಸ್ಥ ಎನ್.ಶಶಿಕುಮಾರ್ ನೇಮಿಸಿದ್ದಾರೆ. ಪ್ರಕರಣದ ತೀವ್ರತೆ, ಗಂಭೀರತೆ ಅರಿತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ತನಿಖಾ ಅಧಿಕಾರಿಗೆ ಸಹಾಯಕ ತನಿಖಾ ಅಧಿಕಾರಿಯಾಗಿ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇಮಕಗೊಂಡಿದ್ದಾರೆ. ಒರ್ವ ಐಪಿಎಸ್ ಹಾಗೂ ಓರ್ವ ಕೆಎಸ್‌ಪಿಎಸ್ ಅಧಿಕಾರಿಗಳಿಂದ ತನಿಖೆ ನಡೆಯಲಿದೆ.
ಲೋಕೇಶ್ ಬಿ ಜಗಲಾಸರ್ ಈ ಹಿಂದೆ ಬಾಗಲಕೋಟೆ ಹಾಗೂ ಧಾರವಾಡದಲ್ಲಿ ಎಸ್‌ಪಿಯಾಗಿ, ಬೆಂಗಳೂರು ನಗರದಲ್ಲಿ ಡಿಸಿಪಿಯಾಗಿ ಕೆಲಸ ಮಾಡಿದ್ದರು. ಪ್ರಸ್ತುತ ಸಿಐಡಿಯಲ್ಲಿ ಎಸ್‌ಪಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ ಸಹ ಟೆಕ್ನಿಕಲ್ ಕೇಪಬಲ್ ಇರುವ ಅಧಿಕಾರಿಗಳ ಎಸ್‌ಐಟಿಗೆ ಸೂಚಿಸಿತ್ತು. ಲೋಕೇಶ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಈ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಏಳು ಕೋಟಿ ದರೋಡೆ ಪ್ರಕರಣಗಳಲ್ಲಿ ತನಿಖಾ ನೇತೃತ್ವ ವಹಿಸಿದ್ದರು. ದರೋಡೆಯಾಗಿದ್ದ ಸಂಪೂರ್ಣ ಹಣವನ್ನು ಎರಡೇ ದಿನದಲ್ಲಿ ತಂಡ ರಿಕವರಿ ಮಾಡಿತ್ತು.

