ಅಮರಾವತಿ: ಆಚೆ ಬರುತ್ತಿದ್ದಾಗಲೇ ಲಿಫ್ಟ್ ಕೆಳಗೆ ಹೋದ ಪರಿಣಾಮ ಮಹಿಳೆಯೋರ್ವರು ಮಧ್ಯದಲ್ಲಿ ಸಿಲುಕಿ ದುರಂತವಾಗಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ (Andhra Pradesh) ಪ್ರಕಾಶಂ (Prakasham) ಜಿಲ್ಲೆಯ ವಸತಿ ಸಂಕೀರ್ಣವೊಂದರಲ್ಲಿ ನಡೆದಿದೆ.
ಭಾನುವಾರ (ಆ.16) ಈ ದುರಂತ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅವಘಡದಲ್ಲಿ 50 ವರ್ಷದ ವನಿತಾ ಎಂಬ ಮಹಿಳೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಸಿಂಧು, ಆಯುಷ್ ಶೆಟ್ಟಿಗೆ ಸೋಲು – ಟೂರ್ನಿಯಿಂದ ಔಟ್
◆ CCTV footage: A 50-year-old woman, Vineeta, died after getting trapped in a lift at Sai Surya Apartment in Ongole, Andhra Pradesh.
◆ The lift reportedly dropped suddenly while she was getting out, trapping her between the floor and the lift. She was rescued by residents and… pic.twitter.com/nxtU4thMFE
— Edge News (@EdgeNewsIND) August 20, 2026
ಮೃತ ಮಹಿಳೆ, ಮಗಳು ಹಾಗೂ ಮೊಮ್ಮಗ ಲಿಫ್ಟ್‌ನಿಂದ ಆಚೆ ಬರುತ್ತಿದ್ದರು. ಮೊದಲು ಮಗಳು ಹಾಗೂ ಮೊಮ್ಮಗ ಸುರಕ್ಷಿತವಾಗಿ ಆಚೆ ಬಂದಿದ್ದರು. ಕೊನೆಯದಾಗಿ ವನಿತಾ ಅವರು ಲಿಫ್ಟ್‌ನಿಂದ ಆಚೆ ಬರುತ್ತಿದ್ದಾಗ ಏಕಾಏಕಿ ಬಾಗಿಲು ಓಪನ್ ಇಟ್ಟುಕೊಂಡೇ ಲಿಫ್ಟ್ ಕೆಳಗೆ ಹೋಗಿದೆ. ಪರಿಣಾಮ ವನಿತಾ ಅವರು ಮಧ್ಯದಲ್ಲಿ ಸಿಲುಕಿಕೊಂಡಿದ್ದರು.
ಗಾಬರಿಗೊಂಡ ಮಗಳು ಎಷ್ಟೇ ಪ್ರಯತ್ನ ಮಾಡಿ ಹೊರಗೆಳೆಯಲೆತ್ನಿಸಿದರೂ ಕೂಡ ಆಗಲಿಲ್ಲ. ಕೂಡಲೇ ಸ್ಥಳಕ್ಕಾಗಮಿಸಿದ ನಿವಾಸಿಗಳು ಅವರನ್ನು ರಕ್ಷಿಸಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ವನಿತಾ ಸಾವನ್ನಪ್ಪಿದ್ದಾರೆ.
ಈ ದುರ್ಘಟನೆ ಅಪಾರ್ಟ್ಮೆಂಟ್ ಕಟ್ಟಡಗಳಲ್ಲಿನ ಲಿಫ್ಟ್ ಸುರಕ್ಷತೆ, ನಿರ್ವಹಣೆ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಲಿಫ್ಟ್ ಹಠಾತ್ ಚಲನೆಗೆ ನಿಖರವಾದ ತಾಂತ್ರಿಕ ಕಾರಣವೇನು ಎಂಬುದು ಇನ್ನೂ ಪತ್ತೆಯಾಗಿಲ್ಲ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಲಿಫ್ಟ್‌ಗೆ ಅಗತ್ಯವಿರುವ ಎಲ್ಲಾ ಸುರಕ್ಷತಾ ಅಂಶಗಳ ಪಾಲನೆಯಾಗುತ್ತಿತ್ತಾ ಅಥವಾ ಯಾವುದೇ ನಿರ್ಲಕ್ಷ್ಯ, ತಾಂತ್ರಿಕ ವೈಫಲ್ಯದಿಂದ ಈ ಅಪಘಾತ ಸಂಭವಿಸಿದೆಯೇ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಪಂದ್ಯ ಡ್ರಾ – ಮುಂದಿನ ಹಂತಕ್ಕೆ ಲಗ್ಗೆಯಿಟ್ಟ ಭಾರತ

