ನವದೆಹಲಿ: ಬಿಡಬ್ಲ್ಯುಎಫ್ ಬ್ಯಾಡ್ಮಿಂಟನ್(BWF Badminton) ವಿಶ್ವ ಚಾಂಪಿಯನ್‌ಶಿಪ್‌ನಿಂದ ಭಾರತದ ಪಿ.ವಿ. ಸಿಂಧು(PV Sindhu) ಮತ್ತು ಆಯುಷ್ ಶೆಟ್ಟಿ(Ayush Shetty) ಸೋಲನುಭವಿಸಿ ಟೂರ್ನಿಯಿಂದ ನಿರ್ಗಮಿಸಿದ್ದಾರೆ.
ಪ್ರಿಕ್ವಾರ್ಟರ್ ಫೈನಲ್ (ರೌಂಡ್ ಆಫ್ 16) ಪಂದ್ಯದಲ್ಲಿ ಮಾಜಿ ವಿಶ್ವ ನಂ. 1 ಆಟಗಾರ್ತಿ ಭಾರತದ ಪಿ.ವಿ. ಸಿಂಧು ಅವರು ಚೀನಾದ ವಾಂಗ್ ಝಿ ಯಿ ವಿರುದ್ಧ ಸೋಲನುಭವಿಸಿದರು.
ಮೊದಲ ಗೇಮ್ ಅನ್ನು 11-21 ಅಂತರದಿಂದ ಕಳೆದುಕೊಂಡ ಸಿಂಧು ಎರಡನೇ ಗೇಮ್‌ನಲ್ಲಿ ಚೇತರಿಸಿಕೊಂಡು 21-15 ಅಂತರದಲ್ಲಿ ಜಯ ಸಾಧಿಸಿದರು. ಆದರೆ ನಿರ್ಣಾಯಕ ಮೂರನೇ ಗೇಮ್ ಅನ್ನು 21-17 ಅಂತರದಲ್ಲಿ ಸೋಲುವ ಮೂಲಕ ಟೂರ್ನಿಯಿಂದ ನಿರ್ಗಮಿಸಿದರು.
What a beauty!
Follow live action: https://t.co/TjoFnU4PnB#BWFWorldChampionships #NewDelhi2026 pic.twitter.com/ywDl2HViul
— BWF (@bwfmedia) August 20, 2026
ಆಯುಷ್ ಶೆಟ್ಟಿಗೂ ನಿರಾಸೆ
ಇನ್ನೊಂದೆಡೆ ಪುರುಷರ ಸಿಂಗಲ್ಸ್‌ನಲ್ಲಿ ಆಯುಷ್ ಶೆಟ್ಟಿ ಅವರು ಇಂಡೋನೇಷ್ಯಾದ ಅಲ್ವಿ ಫರ್ಹಾನ್ ವಿರುದ್ಧ ನೇರ ಗೇಮ್‌ಗಳಿಂದ ಪರಾಭವಗೊಂಡರು. ಆರಂಭಿಕ ಗೇಮ್‌ನಲ್ಲಿ ಉತ್ತಮ ಹಿಡಿತ ಸಾಧಿಸಿದ್ದರೂ ಅದನ್ನು ಗೆಲುವಾಗಿ ಪರಿವರ್ತಿಸಲು ಆಯುಷ್‌ಗೆ ಸಾಧ್ಯವಾಗಲಿಲ್ಲ. 11ನೇ ಶ್ರೇಯಾಂಕದ ಫರ್ಹಾನ್ ಮೊದಲ ಗೇಮ್ ಅನ್ನು 21-19 ಅಂತರದಲ್ಲಿ ಮತ್ತು ಎರಡನೇ ಗೇಮ್ ಅನ್ನು 21-11 ಅಂತರದಲ್ಲಿ ಸುಲಭವಾಗಿ ಗೆದ್ದುಕೊಂಡರು.
Ayush Shetty 🇮🇳 takes on Alwi Farhan 🇮🇩 for a spot in the quarterfinals.#BWFWorldChampionships #NewDelhi2026 pic.twitter.com/1vrb3y3cPL
— BWF (@bwfmedia) August 20, 2026
ಕ್ವಾರ್ಟರ್‌ಫೈನಲ್ ಪ್ರವೇಶ
ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಭಾರತದ ಸ್ಟಾರ್ ಜೋಡಿಯಾದ ತ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಉತ್ತಮ ಪ್ರದರ್ಶನ ನೀಡಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.
ಪಂದ್ಯದುದ್ದಕ್ಕೂ ಸಂಪೂರ್ಣ ಪ್ರಾಬಲ್ಯ ಮೆರೆದ ಭಾರತೀಯ ಜೋಡಿ, 7ನೇ ಶ್ರೇಯಾಂಕದ ಜಪಾನ್‌ನ ರಿನ್ ಇವಾನಾಗಾ ಮತ್ತು ಕೀ ನಕಾನಿಶಿ ಜೋಡಿಯನ್ನು 21-16, 21-12 ನೇರ ಗೇಮ್‌ಗಳ ಅಂತರದಿಂದ ಮಣಿಸಿ ಭರ್ಜರಿ ಜಯ ಸಾಧಿಸಿತು.

